ವಿಜಯಪುರ: ಟೈರ್ ಬ್ಲಾಸ್ಟ್ (Tyre Blast) ಆಗಿ ಟಿಪ್ಪರ್ (Tipper) ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 10 ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಕ್ರಾಸ್ ಬಳಿ ನಡೆದಿದೆ.
ಟಿಪ್ಪರ್ ಟೈರ್ ಬ್ಲಾಸ್ಟ್ ಆದ ಕಾರಣ ಅಪಘಾತ ಉಂಟಾಗಿದೆ. ಭೀಕರ ಅಪಘಾತದಲ್ಲಿ ಟಿಪ್ಪರ್‌ನಲ್ಲಿದ್ದ ಚಾಲಕ ಹಾಗೂ ಆತನ ಪತ್ನಿ, ಸರ್ಕಾರಿ ಬಸ್ ಚಾಲಕ ಮೃತಪಟ್ಟಿದ್ದಾರೆ. ಟಿಪ್ಪರ್ ಚಾಲಕ ಅಶೋಕ ಉಟಗಿ ಹಾಗೂ ಪತ್ನಿ ರಾಧಾಬಾಯಿ, ಬಸ್ ಚಾಲಕ ಹನುಮಂತ ಛವಲಾದಿ ಮೃತರು. ಇದನ್ನೂ ಓದಿ: ನಮ್ಮ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು, ರಾಮನ ಹೆಸ್ರಲ್ಲಿ ರಾಜಕೀಯ ಮಾಡಿದವರು ಲೆಕ್ಕ ಕೊಡಬಾರದ?: ಪ್ರಿಯಾಂಕ್ ಖರ್ಗೆ
ಟಿಪ್ಪರ್ ಚಡಚಣದತ್ತ (Chadchan) ಹೊರಟಿತ್ತು. ಸರ್ಕಾರಿ ಬಸ್ ಚಡಚಣದಿಂದ ವಿಜಯಪುರದತ್ತ ಹೊರಟಿದ್ದ ವೇಳೆ ದುರಂತ ನಡೆದಿದೆ. ಪಿಎಸ್‌ಐ ಸೊಮೇಶ ಗೆಜ್ಜಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಧ ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಗಳ ಹತ್ಯೆ ಪ್ರಕರಣ – ಪ್ರಿಯಾಂಕಾಳ ಸತ್ಯ ಬಯಲಿಗೆಳೆಯಲು ಸುಳ್ಳುಪತ್ತೆ ಪರೀಕ್ಷೆಗೆ ಸಿದ್ಧತೆ
