ಚಿತ್ರದುರ್ಗ: ಶೋಭಾಯಾತ್ರೆಯಲ್ಲಿ ಇಡೀ ದೇಶದ ಜನರ ಗಮನ ಸೆಳೆದಿರುವ ಚಿತ್ರದುರ್ಗದ (Chitradurga) ಹಿಂದೂ ಮಹಾಗಣಪತಿಯನ್ನು (Hindu Maha Ganapathi) ಇಂದು ಪ್ರತಿಷ್ಠಾಪಿಸಲಾಯಿತು.
ವಿಶ್ವಹಿಂದೂಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಸತತ 20 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಚಿತ್ರದುರ್ಗದ ಹಿಂದೂ ಮಹಾಗಣಪತಿ ಮೂರ್ತಿಯು ಈ ಬಾರಿ, ವಿಷ್ಣುವಿನ ಅವತಾರದಲ್ಲಿದೆ. ಇದನ್ನೂ ಓದಿ: ಗಣೇಶ ಮೆರವಣಿಗೆಯಲ್ಲಿ ಶಬ್ದ ಮಿತಿ ಮೀರಿದ್ರೆ ಡಿಜೆ ಸೀಜ್: ಗದಗ ಎಸ್ಪಿ ವಾರ್ನಿಂಗ್
ಸಿಂಹಾಸನದಲ್ಲಿ ವಿಜೃಂಭಿಸುತ್ತಿರುವ ಗಣಪತಿ ಮೂರ್ತಿಯು ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ. ಅಲ್ಲದೇ ದೇಶದಲ್ಲೇ ಅತಿ ಹೆಚ್ಚು ಜನ ಸೇರುವ ಎರಡನೇ ಶೋಭಯಾತ್ರೆ ಎನಿಸಿರುವ ಹಿಂದು ಮಹಾ ಗಣಪತಿಯನ್ನು ಚಿತ್ರದುರ್ಗ ನಗರದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಝಗಝಗಿಸುವ ವಿದ್ಯುತ್‌ದೀಪಗಳಿಂದ ಅಲಂಕೃತವಾದ ಅರಮನೆ ಮಾದರಿಯ ಬೃಹತ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದನ್ನೂ ಓದಿ: ಎನ್‌ಸಿಪಿಐನ 20 ಸಂಸದರ ಪೈಕಿ 17 ಮಂದಿ ಶೀಘ್ರವೇ ಬಿಜೆಪಿ ಸೇರ್ಪಡೆ: TMC ಬಂಡಾಯ ಸಂಸದ ಹೇಳಿಕೆ
ಇನ್ನು ಕೋಟೆನಾಡು ಸೇರಿದಂತೆ ವಿವಿದೆಡೆಯ ಮಹಿಳೆಯರು, ಮಕ್ಕಳು ಹಾಗೂ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ ವಿಶೇಷ ಅಲಂಕಾರದೊಂದಿಗೆ ದರ್ಬಾರ್ ಮಾದರಿಯಲ್ಲಿ ಕಂಗೊಳಿಸ್ತಿರುವ ವಿಘ್ನವಿನಾಶಕನ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಗೃಹಜ್ಯೋತಿ ಫಲಾನುಭವಿಗಳಿಗೆ ಬೆಸ್ಕಾಂ ಶಾಕ್ – ಝೀರೋ ಬಿಲ್ ಬರುತ್ತಿದ್ದ ಮನೆಗಳಿಗೆ ಸಾವಿರಾರು ರೂ. ಬಿಲ್
ಗಣಪತಿ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.ಇಂದಿನಿಂದ ಸತತ 21 ದಿನಗಳ ಕಾಲ ನಿತ್ಯ ಗಣಪತಿಗೆ ವಿಶೇಷ ಪೂಜೆ ಕೈಂಕಾರ್ಯನೆರವೇರಿಸಲಿದ್ದು, ಪ್ರಸಾದ ವಿನಿಯೋಗಸೇರಿದಂತೆ ಸಂಜೆ ಸಾಂಸ್ಕ್ರತಿಕ ಹಾಗೂ ದೇಶಾಭಿಮಾನದ ಕಾರ್ಯಕ್ರಮಗಳು ನೆರವೇರಲಿವೆ. ಹೀಗಾಗಿ ಇಂದು ಚಿತ್ರದುರ್ಗದ ವಿವಿಧ ಮಠಗಳ ಮಠಾಧೀಶರು, ಜನಪ್ರತಿನಿಧಿಗಳು ಗಣಪತಿ ದರ್ಶನಕ್ಕೆ ಆಗಮಿಸಿ ಭಕ್ತಿಯಲ್ಲಿ ಮಿಂದೆದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರ, ವಿದ್ಯುತ್ ಅಭಾವ, ವಿಘ್ನ ನಿವಾರಣೆಗೆ ಗಣಪನಲ್ಲಿ ಪ್ರಾರ್ಥಿಸೋಣ: ಸಿಎಂ
ಇನ್ನು 21 ದಿನಗಳ ಪೂಜಾ ಕೈಂಕಾರ್ಯಗಳ ಬಳಿಕ 22ನೇ ದಿನದಂದು ಬೃಹತ್ ಶೋಭಾಯಾತ್ರೆ ನಡೆಯಲಿದೆ. ಈ ಶೋಭಾಯಾತ್ರೆಯು ದೇಶದಲ್ಲೇ ಅರಿ ಹೆಚ್ಚು ಜನ ಸೇರುವ ಎರಡನೇ ಶೋಭಾಯಾತ್ರೆ ಎನಿಸಿದೆ. ಹೀಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಲಿದ್ದು, ಇಡೀ ಜಿಲ್ಲಾಡಳಿತ ಈ ಉತ್ಸವದ ಯಶಸ್ವಿಗೆ ಸಹಕರಿಸಲಿದೆ. ಇದನ್ನೂ ಓದಿ: ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ‘ಬಿಸ್ಮಿಲ್ಲಾ ನಗರ’ ಅಂತ ನಾಮಕರಣಕ್ಕೆ ಮನವಿ
ಹಾಗೆಯೇ ಸಂಘಪರಿವಾರದ ಮುಖಂಡರು ಈ ಉತ್ಸವದಲ್ಲಿ ಕಾರ್ಯಪ್ರವೃತ್ತರಾಗಲಿದ್ದು, ಡಿಜೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಬೃಹತ್ ಶೋಭಯಾತ್ರೆ ನಡೆಯಲಿದ್ದು, ಚಂದ್ರವಳ್ಳಿಬಳಿಯ ಬಾವಿಯಲ್ಲಿ ಹಿಂದೂ ಮಹಾಗಣಪತಿಯ ಗಣೇಶ ವಿಸರ್ಜನೆ ನೆರವೇರಲಿದೆ. ಇದನ್ನೂ ಓದಿ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಶಿಕ್ಷಣ ಇಲಾಖೆ ಪ್ಲ್ಯಾನ್; ಶೀಘ್ರವೇ ಬೆಂಗಳೂರಿನಲ್ಲಿ ಸರ್ಕಾರಿ ಶಾಲೆಗಳ ಸಮಯ ಬದಲು


