ರಾಮನಗರ: ಕಂಠಪೂರ್ತಿ ಕುಡಿದು ದೇವಾಲಯದಲ್ಲಿದ್ದ (Temple) ನವಗ್ರಹ ಮೂರ್ತಿಗಳನ್ನು (Navagraha Idols) ಧ್ವಂಸಗೊಳಿಸಿರುವ ಘಟನೆ ರಾಮನಗರದ (Ramanagara) ಕೆಂಪೇಗೌಡ ಸರ್ಕಲ್ ಬಳಿ ಇರುವ ಪ್ರಸಿದ್ಧ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ನಡೆದಿದೆ.
ದೇವಾಲಯದ ಆವರಣದಲ್ಲಿದ್ದ ನವಗ್ರಹ ಕಟ್ಟೆಯ ಮೇಲಿದ್ದ ಒಂಬತ್ತೂ ವಿಗ್ರಹಗಳನ್ನು ದುಷ್ಕರ್ಮಿ ಹಾನಿಗೊಳಿಸಿದ್ದು, ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗ್ಗೆ ದೇವಾಲಯಕ್ಕೆ ಆಗಮಿಸಿದ ಅರ್ಚಕರು ವಿಗ್ರಹಗಳು ಧ್ವಂಸಗೊಂಡಿರುವುದು ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಐಜೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಾಲಯ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಪೊಲೀಸರು ಪರಿಶೀಲಿಸಿ ಕೃತ್ಯ ಎಸಗಿದ ಕಿಡಿಗೇಡಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೀಪಾವಳಿ ಹೊತ್ತಲ್ಲೇ ಶಾಕ್ – ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 10 ರೂ. ಹೆಚ್ಚಳ
ವಿಗ್ರಹಗಳನ್ನು ಧ್ವಂಸ ಮಾಡಿದ್ದ ಕಿಡಿಗೇಡಿ ಮೊಹಮ್ಮದ್ ಸಮೀಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಮೊಹಮ್ಮದ್ ಸಮೀಮ್ ಎಂಬಾತನನ್ನ ಐಜೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ರಾಮನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ರಾತ್ರಿ ಕಂಠಪೂರ್ತಿ ಕುಡಿದು ವಿಗ್ರಹಗಳ ಒಡೆದುಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನ.10ಕ್ಕೆ ನಾಗೇಂದ್ರ ಮತ್ತೆ ಸಚಿವರಾಗ್ತಾರೆ: ಜಮೀರ್ ಅಹ್ಮದ್ ಭವಿಷ್ಯ
