ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ನ.1 ರಿಂದ ಅನ್ವಯವಾಗುವಂತೆ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ (Commercial LPG Cylinder) ಬೆಲೆಯನ್ನ 10 ರೂ.ನಷ್ಟು ಹೆಚ್ಚಿಸಲಾಗಿದ್ದು, ಸಿಲಿಂಡರ್ ಬೆಲೆ 2,820 ರೂ.ಗೆ ತಲುಪಿದೆ.
ಕಳೆದ ಸೆಪ್ಟೆಂಬರ್, ಅಕ್ಟೋಬರ್ ಬಳಿಕ ಸತತ 3ನೇ ತಿಂಗಳು ಏರಿಕೆಯಾಗಿದೆ. ದೀಪಾವಳಿ ಹಬ್ಬದ (Deepavali Festival) ಹೊತ್ತಿನಲ್ಲೇ ಬೆಲೆ ಏರಿಕೆಯಾಗಿದ್ದು, ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ಆರ್ಥಿಕ ಹೊರೆ ಹೆಚ್ಚುವಂತೆ ಮಾಡಿದೆ. ಅಷ್ಟೇ ಅಲ್ಲ, ವಾಣಿಜ್ಯ ಸಿಲಿಂಡರ್ ಮೇಲಿನ ಬೆಲೆ ಏರಿಕೆಯು ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗುವಂತೆ ಮಾಡಿದೆ.
ಪ್ರಮುಖ ನಗರಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ನ ಹೊಸ ದರ ಹೇಗಿದೆ? (ಇಂದಿನಿಂದ ಅನ್ವಯವಾಗುವಂತೆ)
* ದೆಹಲಿಯಲ್ಲಿ 10 ರೂ. ಹೆಚ್ಚಾಗಿ 2,820 ರೂ.
* ಮುಂಬೈನಲ್ಲಿ 10.50 ರೂ. ಹೆಚ್ಚಾಗಿ 2,775 ರೂ.
* ಚೆನ್ನೈನಲ್ಲಿ 11.50 ರೂ. ಏರಿಕೆಯಾಗಿ 2,994.50 ರೂ.
* ಕೋಲ್ಕತ್ತಾದಲ್ಲಿ 17 ರೂ.ಗಳಷ್ಟು ಏರಿಕೆಯಾಗಿದ್ದು, ಸಿಲಿಂಡರ್ ಬೆಲೆ 2,971 ರೂ.ಗೆ ತಲುಪಿದೆ.
ಕಳೆದ ಸೆಪ್ಟೆಂಬರ್ನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 9.50 ರೂ. ಏರಿಕೆಯಾಗಿತ್ತು, ಅಕ್ಟೋಬರ್ನಲ್ಲಿ 62.50 ರೂ. ಏರಿಕೆಯಾಗಿತ್ತು. ಇದೀಗ 10 ರೂ. ಹೆಚ್ಚಿಸಲಾಗಿದೆ.
