ಹ್ಯಾಮಿಲ್ಟನ್: ಸಂಘಟಿತ ಬೌಲಿಂಗ್, ಬ್ಯಾಟಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾ ವಿರುದ್ಧ ನಡೆದ 5ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಇತ್ತ ಸರಣಿ ಗೆದ್ದರೂ ಭಾರತ ತಂಡ ಕೆಟ್ಟ ದಾಖಲೆಯನ್ನ ಹೆಗಲಿಗೇರಿಸಿಕೊಂಡಿದೆ. ಸತತ 2 ಪಂದ್ಯಗಳಲ್ಲಿ ಸೋತ ಭಾರತ ತಂಡ ಕಳೆದ 17 ವರ್ಷಗಳಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಈ ಕಳಪೆ ಸಾಧನೆ ಮಾಡಿದ ಕೆಟ್ಟ ದಾಖಲೆ ಬರೆದಿದೆ.
ಹ್ಯಾಮಿಲ್ಟನ್ನ ಸೆಡ್ಡನ್ ಪಾರ್ಕ್ ಮೈದಾನದಲ್ಲಿಂದು ನಡೆದ ಕೊನೆಯ ಹಾಗೂ ಸರಣಿಯ 5ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 191 ರನ್ ಬಾರಿಸಿತ್ತು. ಬೃಹತ್ ರನ್ ಗುರಿ ಬೆನ್ನಟ್ಟಿದ ಕಿವೀಸ್ 18 ಓವರ್ಗಳಲ್ಲೇ ಕೇವಲ 3 ವಿಕೆಟ್ ನಷ್ಟಕ್ಕೆ 195 ರನ್ ಸಿಡಿಸಿ ಗೆಲುವು ಸಾಧಿಸಿತು. ಆರಂಭಿಕ ಮೂರು ಪಂದ್ಯಗಳನ್ನ ಗೆದ್ದಿದ್ದ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿತು.
ಟೀಂ ಇಂಡಿಯಾ ಪರ ಇಶಾನ್ ಕಿಶನ್ ಸ್ಫೋಟಕ 61 ರನ್ (32 ಎಸೆತ, 5 ಸಿಕ್ಸರ್, 5 ಬೌಂಡರಿ) ಚಚ್ಚಿದ್ರೆ, ನಾಯಕ ಶ್ರೇಯಸ್ ಅಯ್ಯರ್ 23 ಎಸೆತಗಳಲ್ಲಿ 50 ರನ್ (4 ಸಿಕ್ಸ್, 3 ಬೌಂಡರಿ) ಚಚ್ಚಿದ್ರು, ಇದರೊಂದಿಗೆ ನಮನ್ ಧೀರ್ ರನ್, ನಿತೀಶ್ ರೆಡ್ಡಿ 22 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಅಲ್ಪಮೊತ್ತಕ್ಕೆ ಔಟಾದರು. ನ್ಯೂಜಿಲೆಂಡ್ ಪರ ಆಡಂ ಮಿಲ್ನೆ 4 ವಿಕೆಟ್ ಕಿತ್ತರೆ, ನಥಾನ್ ಸ್ಮಿತ್, ಬಲೈರ್ ಟಿಕ್ನರ್ ತಲಾ 2 ವಿಕೆಟ್ ಕಿತ್ತರು.
ಕಿವೀಸ್ ಪರ ಟಿಮ್ ಸೈಫರ್ಟ್ 93 ರನ್ (50 ಎಸೆತ, 11 ಬೌಂಡರಿ, 5 ಸಿಕ್ಸರ್) ಚಚ್ಚಿದ್ರೆ, ಡೇರಿಯಲ್ ಮಿಚೆಲ್ 29 ರನ್, ಗ್ಲೆನ್ ಫಿಲಿಪ್ಸ್ 65 ರನ್ (38 ಎಸೆತ, 3 ಸಿಕ್ಸರ್, 8 ಬೌಂಡರಿ) ಬಾರಿಸಿದ್ರು. ಟೀಂ ಇಂಡಿಯಾ ಪರ ಅರ್ಷ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.


