– ಜಿಲ್ಲಾದ್ಯಂತ 2 ಸಾವಿರಕ್ಕೂ ಹೆಚ್ಚು ಕಡೆ ಗಣೇಶ ಪ್ರತಿಷ್ಠಾಪನೆ
ಗದಗ: ಗಣೇಶ ಮೆರವಣಿಗೆಯಲ್ಲಿ ದೊಡ್ಡ ಪ್ರಮಾಣದ ಸೌಂಡ್ ಸಿಸ್ಟಮ್‌ಗಳ ಬಳಕೆಗೆ ನಿರ್ಬಂಧವಿದೆ. ಆದರೆ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳ ಪ್ರಕಾರ ಡಿಜೆ ಬಳಕೆ ಮಾಡಬಹುದು ಎಂದು ಗದಗ ಎಸ್ಪಿ ಮಿಥುನ್ ಎಚ್.ಎನ್ ತಿಳಿಸಿದ್ದಾರೆ.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೈಗಾರಿಕಾ ಪ್ರದೇಶದಲ್ಲಿ 75 ಡೆಸಿಬೆಲ್, ವಾಣಿಜ್ಯ ಪ್ರದೇಶದಲ್ಲಿ 65 ಡೆಸಿಬೆಲ್ ಹಾಗೂ ವಸತಿ ಪ್ರದೇಶದಲ್ಲಿ 55 ಡೆಸಿಬೆಲ್‌ಗಿಂತ ಹೆಚ್ಚಿನ ಶಬ್ದ ಇರಬಾರದು ಎಂದು ಹೇಳಿದ್ದಾರೆ.
ನಿಗದಿತ ಶಬ್ದದ ಮಿತಿಯನ್ನು ಮೀರಿದರೆ ಸ್ಥಳದಲ್ಲೇ ಸೌಂಡ್ ಸಿಸ್ಟಮ್‌ನ್ನು ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹೊಸ ಮಾರ್ಗದಲ್ಲಿ ಗಣೇಶ ಮೆರವಣಿಗೆಗೆ ಅವಕಾಶ ಇಲ್ಲ
ಗಣೇಶ ಮೆರವಣಿಗೆಯನ್ನು ಪ್ರತಿವರ್ಷ ಸಾಗುವ ಮಾರ್ಗದಲ್ಲೇ ನಡೆಸಬಹುದು. ಈ ವರ್ಷ ಹೊಸ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಅವಕಾಶ ಇರುವುದಿಲ್ಲ ಎಂದು ಎಸ್ಪಿ ಮಿಥುನ್ ಎಚ್.ಎನ್ ಸ್ಪಷ್ಟಪಡಿಸಿದರು.
ಬೇರೆಯವರಿಗೆ ತೊಂದರೆ ನೀಡುವ ಉದ್ದೇಶದಿಂದ ಹೊಸ ಮಾರ್ಗ ಆಯ್ಕೆ ಮಾಡಲು ಪರವಾನಿಗೆ ನೀಡುವುದಿಲ್ಲ. ಹತ್ತಾರು ವರ್ಷಗಳಿಂದ ಯಾವ ಮಾರ್ಗದಲ್ಲಿ ಮೆರವಣಿಗೆ ನಡೆಯುತ್ತಿದೆಯೋ, ಅದೇ ಮಾರ್ಗದಲ್ಲಿ ಯಾವುದೇ ಅಭ್ಯಂತರವಿಲ್ಲದೆ ಮೆರವಣಿಗೆ ನಡೆಸಬಹುದು ಎಂದರು.
ವಿಜೃಂಭಣೆಯಿಂದ, ಸೌಹಾರ್ದತೆಯಿಂದ ಹಾಗೂ ಜವಾಬ್ದಾರಿಯುತವಾಗಿ ಕಾನೂನು ನಿಯಮಗಳನ್ನು ಪಾಲಿಸಿಕೊಂಡು ಹಬ್ಬ ಆಚರಿಸುವಂತೆ ಎಸ್ಪಿ ಮನವಿ ಮಾಡಿದರು. ಇದನ್ನೂ ಓದಿ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಶಿಕ್ಷಣ ಇಲಾಖೆ ಪ್ಲ್ಯಾನ್; ಶೀಘ್ರವೇ ಬೆಂಗಳೂರಿನಲ್ಲಿ ಸರ್ಕಾರಿ ಶಾಲೆಗಳ ಸಮಯ ಬದಲು
2 ಸಾವಿರಕ್ಕೂ ಹೆಚ್ಚು ಕಡೆ ಗಣೇಶ ಪ್ರತಿಷ್ಠಾಪನೆ
ಗದಗ ಜಿಲ್ಲಾದ್ಯಂತ ಸುಮಾರು 2 ಸಾವಿರಕ್ಕೂ ಅಧಿಕ ಕಡೆಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಮೆರವಣಿಗೆ ನಡೆಯಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
3 KSRP ತುಕಡಿ, 12 DAR ತುಕಡಿಗಳು, 450 ಹೋಮ್‌ಗಾರ್ಡ್ಸ್, 4 ಡಿವೈಎಸ್ಪಿ, 10 ಸಿಪಿಐ, 29 ಪಿಎಸ್ಐ, 64 ಎಎಸ್ಐ ಹಾಗೂ 600 ಸಿವಿಲ್ ಪೊಲೀಸ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.
ಜೊತೆಗೆ ಅನೇಕ ನೂರಾರು ಕಡೆಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಡ್ರೋನ್ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇರಿಸಲಾಗಿದೆ ಎಂದು ಗದಗ ಎಸ್ಪಿ ಮಿಥುನ್ ಎಚ್.ಎನ್ ತಿಳಿಸಿದ್ದಾರೆ.ಇದನ್ನೂ ಓದಿ: ಕುಟುಂಬ ಸಮೇತ ಹಿರಿಯರ ಸಮಾಧಿಗೆ ಪೂಜೆ

