ರಾಮನಗರ: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಹುಟ್ಟೂರು ದೊಡ್ಡಾಲಹಳ್ಳಿಗೆ (Doddaalahalli) ಭೇಟಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್ (DK Shivakumar), ಕುಟುಂಬ ಸಮೇತ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಿದರು.
ಗ್ರಾಮದ ತೋಟದಲ್ಲಿರುವ ತಮ್ಮ ತಂದೆ ಕೆಂಪೇಗೌಡ ಹಾಗೂ ತಾತ-ಅಜ್ಜಿಯ ಸಮಾಧಿ ಬಳಿ ತೆರಳಿ ವಿಶೇಷ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪತ್ನಿ ಉಷಾ ಹಾಗೂ ಸಹೋದರ ಡಿ.ಕೆ. ಸುರೇಶ್ ಕೂಡಾ ಉಪಸ್ಥಿತರಿದ್ದರು. ಇದನ್ನೂ ಓದಿ: ಬೆನ್ನಟ್ಟಿ ಲೇಡಿ ಬೈಕರ್‌ಗೆ ಡಿಕ್ಕಿ ಹೊಡೆಸಿದ ಕಾರು ಚಾಲಕ – ವಿಡಿಯೋ ವೈರಲ್

ಪ್ರತಿ ವರ್ಷ ಗೌರಿ-ಗಣೇಶ ಹಬ್ಬದಂದು ಕುಟುಂಬದ ಹಿರಿಯರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಅವರ ವಾಡಿಕೆಯಾಗಿದ್ದು, ಈ ಬಾರಿಯೂ ಆ ಸಂಪ್ರದಾಯವನ್ನ ಮುಂದುವರಿಸಿದರು. ಪೂಜಾ ಕಾರ್ಯಗಳ ಬಳಿಕ ಸಾರ್ವಜನಿಕರೊಂದಿಗೆ ಬೆರೆತ ಸಿಎಂ. ಸಮಾಧಿ ಬಳಿಯೇ ಜಮಾಯಿಸಿದ್ದ ಜನರಿಂದ ಅಹವಾಲು ಸ್ವೀಕರಿಸಿ, ಅವರ ಕುಂದುಕೊರತೆಗಳನ್ನು ಆಲಿಸಿದರು. ಇದೇ ವೇಳೆ ನೆರೆದಿದ್ದ ಗ್ರಾಮಸ್ಥರಿಗೆ ಹಬ್ಬದ ಶುಭಾಶಯಗಳನ್ನು ಕೋರಿ, ಎಲ್ಲರೊಂದಿಗೂ ಆತ್ಮೀಯವಾಗಿ ಮಾತುಕತೆ ನಡೆಸಿದರು. ಇದನ್ನೂ ಓದಿ: ಪಾರ್ಕಿಂಗ್ ವಿಚಾರಕ್ಕೆ ಗಲಾಟೆ; ನಿವೃತ್ತ ವಾಯುಪಡೆ ಅಧಿಕಾರಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ

