Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಾರತ, ಫ್ರಾನ್ಸ್ ಬಾಂಧವ್ಯ ಮತ್ತಷ್ಟು ಗಟ್ಟಿ – 20 ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಭಾರತ, ಫ್ರಾನ್ಸ್ ಬಾಂಧವ್ಯ ಮತ್ತಷ್ಟು ಗಟ್ಟಿ – 20 ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ

Latest

ಭಾರತ, ಫ್ರಾನ್ಸ್ ಬಾಂಧವ್ಯ ಮತ್ತಷ್ಟು ಗಟ್ಟಿ – 20 ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ

Public TV
Last updated: February 17, 2026 8:01 pm
Public TV
Share
3 Min Read
PM Modi 3
SHARE

– ಎಐ ಶೃಂಗಸಭೆಯಲ್ಲಿ ವೀರ ಸಾವರ್ಕರ್ ಸ್ಮರಿಸಿದ ಪ್ರಧಾನಿ

ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ (Emmanuel Macron) ಇಂದು ಭಾರತಕ್ಕೆ ಆಗಮಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಫ್ರೆಂಚ್ ಅಧ್ಯಕ್ಷರನ್ನ ಮಹಾರಾಷ್ಟ್ರ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸ್ವಾಗತಿಸಿದರು.

ಮಧ್ಯಾಹ್ನದ ವೇಳೆಗೆ ಪ್ರಧಾನಿ ಮೋದಿ (Narendra Modi) – ಎಮ್ಯಾನುಯೆಲ್ ಮ್ಯಾಕ್ರನ್ ಮುಂಬೈನ ಲೋಕಭವನದಲ್ಲಿ ಭೇಟಿಯಾಗಿ ರಕ್ಷಣೆ, ಎಐ ಮತ್ತು ಬಾಹ್ಯಾಕಾಶ ಕ್ಷೇತ್ರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಕೃತಕ ಬುದ್ಧಿಮತ್ತೆ ಸಹಕಾರ, ಡಿಜಿಟಲ್ ತಂತ್ರಜ್ಞಾನ, ನಾವೀನ್ಯತೆ, ವಿದ್ಯಾರ್ಥಿಗಳ ಚಲನಶೀಲತೆ, ಸಂಸ್ಕೃತಿ, ರಕ್ಷಣೆ, ಭದ್ರತೆಗೆ ಸಂಬಂಧಿಸಿದಂತೆ ಹಲವು ಒಪ್ಪಂದ (India France Ties) ಮಾಡಿಕೊಳ್ಳಲಾಯಿತು. ಅಲ್ಲದೇ ಫ್ರಾನ್ಸ್‌ನಿಂದ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವುದು ಸೇರಿದಂತೆ 20ಕ್ಕೂ ಹೆಚ್ಚು ಒಪ್ಪಂದಗಳಿಗೆ ಪ್ರಧಾನಿ ಮೋದಿ ಸಹಿ ಹಾಕಿದರು.

Addressing the joint press meet with President Emmanuel Macron.@EmmanuelMacron https://t.co/FuX0qSUyw7

— Narendra Modi (@narendramodi) February 17, 2026

ಬಳಿಕ ಮಾತಾಡಿದ ಮೋದಿ, ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರನ್ನ ಮುಂಬೈಗೆ ಸ್ವಾಗತಿಸಲು ನನಗೆ ಸಂತೋಷವಾಗಿದೆ. ಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷವನ್ನ ಪ್ರಾರಂಭಿಸುವುದರೊಂದಿಗೆ, ನಾವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನ ಜನರ ಪಾಲುದಾರಿಕೆಯಾಗಿ ಪರಿವರ್ತಿಸುತ್ತಿದ್ದೇವೆ.

ರಕ್ಷಣೆ, ಶುದ್ಧ ಇಂಧನ, ಬಾಹ್ಯಾಕಾಶ, ಸ್ಟಾರ್ಟ್‌ಅಪ್‌, ನಿರ್ಣಾಯಕ ಖನಿಜ, ಜೈವಿಕ ತಂತ್ರಜ್ಞಾನಗಳಲ್ಲಿ ಬಲವಾದ ಸಂಪರ್ಕ ನಿರ್ಮಿಸ್ತೇವೆ. ಅದಕ್ಕಾಗಿ ಇಂಡೋ – ಫ್ರೆಂಚ್‌ ಸೆಂಟರ್ ಫಾರ್ ಎಐ ಇನ್ ಹೆಲ್ತ್, ಇಂಡೋ-ಫ್ರೆಂಚ್ ಸೆಂಟರ್ ಫಾರ್ ಡಿಜಿಟಲ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಸೆಂಟರ್ ಫಾರ್ ಅಲೈಯನ್ಸ್ ಫಾರ್ ಸ್ಕಿಲ್ಲಿಂಗ್ ಇನ್ ಏರೋನಾಟಿಕ್ಸ್ ಸಂಸ್ಥೆಗಳನ್ನ ಪ್ರಾರಂಭಿಸುತ್ತಿದ್ದೇವೆ. ಇವು ಕೇವಲ ಸಂಸ್ಥೆಗಳಲ್ಲ, ಅವು ಭವಿಷ್ಯವನ್ನ ನಿರ್ಮಿಸುವ ವೇದಿಕೆಗಳಾಗಿವೆ. ವಿಶ್ವವು ಈಗ ಅನಿಶ್ಚಿತತೆಯ ಅವಧಿ ಎದುರಿಸುತ್ತಿದೆ. ಈ ಪರಿಸರದಲ್ಲಿ, ಭಾರತ-ಫ್ರಾನ್ಸ್ ಪಾಲುದಾರಿಕೆಯು ಜಾಗತಿಕ ಸ್ಥಿರತೆಗೆ ಒಂದು ಶಕ್ತಿಯಾಗಿದೆ ಎಂದು ಬಣ್ಣಿಸಿದರು.

Speaking at the India-France Innovation Forum in Mumbai. https://t.co/i78YjmvrrL

— Narendra Modi (@narendramodi) February 17, 2026

ಸಾವರ್ಕರ್ ನೆನೆದ ಮೋದಿ
ಕಳೆದ ವರ್ಷ ಮ್ಯಾಕ್ರನ್‌ ಅವರು ಫ್ರಾನ್ಸ್‌ನಲ್ಲಿ ನಡೆದ ಎಐ ಕ್ರಿಯಾ ಸಮಿತಿ ಶೃಂಗಸಭೆಗೆ ನನ್ನನ್ನ ಆಹ್ವಾನಿಸಿದ್ದರು. ಆ ಸಮಯದಲ್ಲಿ, ನಾವು ಫ್ರಾನ್ಸ್‌ನ ಅತಿದೊಡ್ಡ ಬಂದರು, ಫ್ರಾನ್ಸ್ ಮತ್ತು ಇಡೀ ಯುರೋಪ್‌ಗೆ ಪ್ರಮುಖ ದ್ವಾರವಾದ ಮಾರ್ಸಿಲ್ಲೆಗೆ ಭೇಟಿ ನೀಡಿದ್ದೇವು. ಮೊದಲ ಮಹಾಯುದ್ಧದ ಸಮಯದಲ್ಲಿ ನಮ್ಮ ಭಾರತೀಯ ಸೈನಿಕರು ಯುರೋಪಿನಲ್ಲಿ ಕಾಲಿಟ್ಟ ನಗರ ಮಾರ್ಸಿಲ್ಲೆ. ಅವರ ಶೌರ್ಯದ ಕಥೆಯನ್ನ ಯುರೋಪಿನ ಅನೇಕ ಭಾಗಗಳಲ್ಲಿ ಇನ್ನೂ ಸ್ಮರಿಸಲಾಗುತ್ತಿದೆ. ಮತ್ತು ಸ್ವಾತಂತ್ರ‍್ಯ ಹೋರಾಟಗಾರ ವೀರ ಸಾವರ್ಕರ್ ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ ಅದೇ ನಗರ ಇದು. ಅವರ ಕ್ರಿಯೆಯು ಭಾರತದ ಸ್ವಾತಂತ್ರ‍್ಯಕ್ಕಾಗಿ ಅವರ ಅಚಲ ಸಂಕಲ್ಪವನ್ನ ಸಂಕೇತಿಸುತ್ತದೆ. ಕಳೆದ ವರ್ಷ ಮಾರ್ಸಿಲ್ಲೆಯಲ್ಲಿ ಅವರನ್ನ ನೆನಪಿಸಿಕೊಳ್ಳುವ ಮತ್ತು ಅವರಿಗೆ ನನ್ನ ಗೌರವ ಸಲ್ಲಿಸುವ ಅವಕಾಶ ನನಗೆ ಸಿಕ್ಕಿತು. ಈ ಬಾರಿ ಮ್ಯಾಕ್ರನ್‌ ಅವರು ಎಐ ಇಂಪ್ಯಾಕ್ಟ್‌ ಶೃಂಗ ಸಭೆಗಾಗಿ ಭಾರತದಲ್ಲಿದ್ದಾರೆ ಎಂದು ನುಡಿದರು.

ಫ್ರಾನ್ಸ್‌ ಮತ್ತು ಭಾರತದ ಸಹಭಾಗಿತ್ವದಲ್ಲಿ ವಿಶ್ವಾಸಾರ್ಹ ತಂತ್ರಜ್ಞಾನಗಳನ್ನ ಅಭಿವೃದ್ಧಿಪಡಿಸುತ್ತಿದ್ದೇವೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮತ್ತು ಜಂಟಿ ಅಭಿವೃದ್ಧಿ ಯೋಜನೆಗಳ ಮೂಲಕ ಮಾನವ ಅಭಿವೃದ್ಧಿಯನ್ನ ನಾವು ಖಚಿತಪಡಿಸುತ್ತೇವೆ. ಬಹುಪಕ್ಷೀಯತೆ, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಸ್ಥಿರತೆ ಮತ್ತು ಸಮೃದ್ಧಿಗಾಗಿ ಪ್ರಯತ್ನಗಳನ್ನ ಬಲಪಡಿಸುವುದನ್ನು ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದರು.

ಅಧ್ಯಕ್ಷ ಮ್ಯಾಕ್ರನ್ ಮಾತಾಡಿ, 4ನೇ ಬಾರಿ ಆತ್ಮೀಯ ಸ್ವಾಗತಕ್ಕಾಗಿ ನಿಮಗೆ ಧನ್ಯವಾದಗಳು ಸಲ್ಲಿಸುತ್ತೇನೆ. ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧವು ನಿಜವಾಗಿಯೂ ಗಮನಾರ್ಹ ಮತ್ತು ವಿಶಿಷ್ಟವಾಗಿರಲಿದೆ ಅಂದರು.

TAGGED:DefenceEmmanuel MacronfranceindiaIndia France Tiesnarendra modiಎಮ್ಯಾನುಯೆಲ್ ಮ್ಯಾಕ್ರನ್ನರೇಂದ್ರ ಮೋದಿಫ್ರಾನ್ಸ್ಭಾರತರಕ್ಷಣಾ ಒಪ್ಪಂದ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Donald Trump Angry
Latest

ಮತ್ತೆ ಪಾಕ್‌ನಲ್ಲಿ ಮಾತುಕತೆ – ಈ ಬಾರಿ ವಿಫಲವಾದರೆ ಇರಾನ್‌ ನಾಶ: ಟ್ರಂಪ್‌ ಎಚ್ಚರಿಕೆ

Public TV
By Public TV
2 hours ago
mojtaba khamenei and trump
Latest

ಶಾಂತಿ ಮಾತುಕತೆಗೆ ನಾವು ಬರಲ್ಲ: ಇರಾನ್‌ ನಿರಾಕರಿಸಿದ್ದು ಯಾಕೆ?

Public TV
By Public TV
2 hours ago
PBKS vs LSG IPL 2026 1
Cricket

ಪ್ರಿಯಾಂಶ್, ಕೊನೊಲಿ ಅಬ್ಬರದ ಆಟಕ್ಕೆ ಲಕ್ನೋ ಧೂಳಿಪಟ – ಪಂಜಾಬ್‌ಗೆ 54 ರನ್‌ಗಳ ಭರ್ಜರಿ ಜಯ

Public TV
By Public TV
2 hours ago
Doctor Ramesh who was supposed to marry his wifes sister tomorrow murdered Sirsi KHB Colony
Crime

ನಾಳೆ ಪತ್ನಿಯ ಸಹೋದರಿಯನ್ನು ಮದುವೆಯಾಗಬೇಕಿದ್ದ ವೈದ್ಯನ ಹತ್ಯೆ

Public TV
By Public TV
3 hours ago
Women hitting young men with chappals Hubballi
Dharwad

ತುಮ್ಹಾರ ಫೋನ್ ನಂಬರ್ ದೇದೋ ಎಂದ ಯುವಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ

Public TV
By Public TV
3 hours ago
Cooper Connolly and Priyansh Arya of Punjab Kings scored 32 runs Aiden Markram single over
Cricket

ಒಂದೇ ಓವರ್‌ನಲ್ಲಿ 32 ರನ್‌ – ಕೊನೊಲಿ, ಪ್ರಿಯಾಂಶ್‌ ಆಟಕ್ಕೆ ಮಾರ್ಕ್ರಾಮ್ ಪಂಚರ್‌

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?