ಹೈದರಾಬಾದ್: ಪೌರಕಾರ್ಮಿಕನ (Muncipal Worker) ಕುಟುಂಬಸ್ಥರು ಶವದೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆಗೆ ಇಳಿದಾಗ ಅಮಾನವೀಯವಾಗಿ ಪೊಲೀಸರು ಲಾಠಿ ಚಾರ್ಜ್ (Police Lathi Charge) ಮಾಡಿದ ಘಟನೆ ತೆಲಂಗಾಣದ (Telangana) ಭೋಪಾಲಪಲ್ಲಿಯಲ್ಲಿ (Bhupalapally) ನಡೆದಿದೆ.
ಬೆಲ್ಲಂ ರಾಜಯ್ಯ ಅನ್ನೋ ಕಾರ್ಮಿಕ ಜಯಶಂಕರ್ ಭೋಪಾಲಪಲ್ಲಿ ಜಿಲ್ಲಾ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಆದರೆ ಪುರಸಭೆ ವ್ಯಾಪ್ತಿ ಬಿಟ್ಟು ಸಿಂಗರೇಣಿ ಪ್ರದೇಶದ ಕೃಷ್ಣ ಕಾಲೋನಿಯಲ್ಲಿ ಮರ ಕಡಿಯಲು ಅಧಿಕಾರಿಗಳು ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ರಾಜಯ್ಯ ಅನುಮಾನಸ್ಪದವಾಗಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ತಿರುಪತಿಯಲ್ಲಿ 5 ವರ್ಷದಲ್ಲಿ 20 ಕೋಟಿ ಕಲಬೆರಕೆ ಲಡ್ಡು ವಿತರಣೆ
చెట్లు నరుకుతూ అనుమానాస్పదంగా మృతి చెందిన మున్సిపల్ కార్మికుడు
మృతదేహంతో కలెక్టరేట్ కార్యాలయంలో ఆందోళనకు దిగిన మృతుడి కుటుంబ సభ్యులు.. లాఠీఛార్జ్ చేసిన పోలీసులు
జయశంకర్ భూపాలపల్లి జిల్లా కేంద్రంలో మున్సిపల్ కార్మికుడు బెల్లం రాజయ్యను, మున్సిపాలిటీ పరిధిలో లేని సింగరేణి ప్రాంతం… pic.twitter.com/L8hB2RZnQK
— Telugu Scribe (@TeluguScribe) November 22, 2025
ವ್ಯಾಪ್ತಿ ಮೀರಿ ರಾಜಯ್ಯನನ್ನ ಯಾಕೆ ಕಳುಹಿಸಿದ್ರಿ? ರಾಜಯ್ಯನ ಸಾವಿಗೆ ಕಾರಣ ಏನು ಅಂತಾ ಪ್ರಶ್ನಿಸಿ ರಾಜಯ್ಯ ಕುಟುಂಬಸ್ಥರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಅಮಾನವೀಯವಾಗಿ ಲಾಠಿ ಪ್ರಹಾರ ಮಾಡಿದ್ದಾರೆ. ಇದನ್ನೂ ಓದಿ: ಯಾವ ಸಿಎಂ ಇವತ್ತು ಅಧಿಕಾರದಲ್ಲಿದ್ದಾರೋ ಅವ್ರನ್ನ ಅಂದು ಡಿಸಿಎಂ, ಹಣಕಾಸು ಮಂತ್ರಿ ಮಾಡಿದ್ದೇ ನಾನು: ಹೆಚ್‌ಡಿಡಿ
