DistrictsKarnatakaLatestMain PostVijayapura

ವೈದ್ಯರ ಎಡವಟ್ಟು – ಆಪರೇಷನ್ ಮಾಡಿದ ಎರಡೇ ಗಂಟೆಗೆ ಬಿಚ್ಚಿಕೊಂಡ ಹೊಲಿಗೆ!

ವಿಜಯಪುರ: ಜಿಲ್ಲಾಸ್ಪತ್ರೆಯ ವೈದ್ಯರು ದೊಡ್ಡ ಎಡವಟ್ಟು ಮಾಡಿದ್ದಾರೆ. ಕಳೆದ 10 – 15 ದಿನದಲ್ಲಿ 40 ಮಹಿಳೆಯರಿಗೆ ಸಿಜೇರಿಯನ್ ಆಗಿದ್ದು, 25ಕ್ಕೂ ಹೆಚ್ಚು ಮಂದಿಯ ಹೊಲಿಗೆಗಳು ಬಿಚ್ಚಿಕೊಂಡಿವೆ.

ಜಿಲ್ಲಾಸ್ಪತ್ರೆ ಅಂದ್ರೆ ಸಾಕು ಜನರು ಬೆಚ್ಚಿ ಬೀಳ್ತಾರೆ. ಯಾಕಂದ್ರೆ ಅಲ್ಲಿಯ ಅವ್ಯವಸ್ಥೆ, ವೈದ್ಯರ ಎಡವಟ್ಟುಗಳನ್ನು ಕಂಡು ಜಿಲ್ಲಾಸ್ಪತ್ರೆಗಳಿಗೆ ಹೋಗಲು ಜನ ಭಯ ಪಡುತ್ತಾರೆ. ಆದ್ರೆ ಬಡ ರೋಗಿಗಳಿಗೆ ಮಾತ್ರ ಜಿಲ್ಲಾಸ್ಪತ್ರೆ ಆನಿವಾರ್ಯ. ಆದರೆ ವಿಜಯಪುರದ ಜಿಲ್ಲಾಸ್ಪತ್ರೆಯ ಎಡವಟ್ಟಿನಿಂದ ಇದೀಗ ಬಾಣಂತೀಯರು ನರಳಾಡುವಂತಾಗಿದೆ. ಇದನ್ನೂ ಓದಿ: ವಾಹನ ಚಾಲನೆ ಮಾಡುತ್ತಲೇ ಮೂರ್ಛೆ ಹೋದ ಚಾಲಕ – ಪ್ರವಾಸಿಗರಿದ್ದ ವಾಹನ ಪಲ್ಟಿ

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರಿಗೆ ಸಿಜೇರಿಯನ್ ನಂತರ ಹಾಕಿದ ಹೊಲಿಗೆಗಳು ಬಿಚ್ಚಿ ಬಾಣಂತಿಯರು ಪರದಾಡುವಂತಾಗಿದೆ. 25ಕ್ಕೂ ಹೆಚ್ಚು ಬಾಣಂತಿಯರಿಗೆ ಹಾಕಿದ ಹೊಲಿಗೆಗಳು ಬಿಚ್ಚಿಹೋಗಿವೆ. ಅಲ್ಲದೆ ಹಲವರಿಗೆ ಹೊಲಿಗೆ ಬಿಚ್ಚಿದ ಕಾರಣ ರಕ್ತಸ್ರಾವವಾಗಿ ಸೋಂಕಾಗಿದೆ. ಇನ್ನು ಬಾಣಂತಿಯರಿಗೆ ನೀಡುವ ಇಂಜೆಕ್ಷನ್, ಮಾತ್ರೆ ಸೇರಿದಂತೆ ಸರಿಯಾಗಿ ತಪಾಸಣೆ ಕೂಡ ಮಾಡದೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪವಿದ್ದು, ಬಾಣಂತಿಯರಿಗೆ ಹಾಕಿದ ಹೊಲಿಗೆಗಳು ಬಿಚ್ಚಿ ಮೂರ್ನಾಲ್ಕು ದಿನಗಳು ಕಳೆದರು ಇದುವರೆಗೂ ಅವರಿಗೆ ಮರಳಿ ಹೊಲಿಗೆ ಹಾಕದೆ ವೈದ್ಯರು ಅಸಡ್ಡೆ ತೋರಿದ್ದಾರೆ. ವೈದ್ಯರ ಈ ಎಡವಟ್ಟಿನಿಂದ ಬಾಣಂತಿಯರು ಕಣ್ಣೀರಿಡುತ್ತಿದ್ದಾರೆ. ಇದನ್ನೂ ಓದಿ: BBMP ಕಸದ ಲಾರಿಗೆ ಮತ್ತೊಂದು ಬಲಿ – ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು

ಬಾಣಂತಿಯರ ಈ ಗೋಳಾಟದ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಸರ್ಜನ್ ಎಸ್ ಲಕ್ಕಣ್ಣವರ್ ವೈದ್ಯರನ್ನು ಕಳುಹಿಸಿ ಬಾಣಂತಿಯರ ಚಿಕಿತ್ಸೆಗೆ, ತಪಾಸಣೆಗೆ ಮುಂದಾದರು. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್ ಲಕ್ಕಣ್ಣವರ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ಆಪರೇಷನ್ ಥೇಟರ್ ಇದೆ. ಸಿಜೇರಿಯನ್ ಹೆರಿಗೆ ಆದವರ ಇಂಜೆಕ್ಷನ್ ಖಾಲಿ ಆಗಿದ್ದು ನಿಜ. ಇದರ ಜೊತೆಗೆ ಹೊಲಿಗೆ ಬಿಚ್ಚಿದ ಬಾಣಂತಿಯರಲ್ಲಿ ಹಿಮೋಗ್ಲೋಬಿನ್ ಕಡಿಮೆ ಆದ ಕಾರಣ ಈ ರೀತಿ ಆಗಿದೆ. ಇದರಲ್ಲಿ ನಮ್ಮ ತಪ್ಪು ಇದೆ ಅವರ ತಪ್ಪು ಇದೆಎಂದು ಸಮಜಾಯಿಸಿ ನೀಡಿದ್ದಾರೆ. ಇತ್ತ ಜಿಲ್ಲಾಧಿಕಾರಿ ಬಾಣಂತಿಯರಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಜಿಲ್ಲಾಸ್ಪತ್ರೆಯ ವೈದ್ಯರಿಗೆ ಸೂಚಿಸಿದ್ದಾರೆ.

Leave a Reply

Your email address will not be published.

Back to top button