LatestBelgaumDistrictsKarnatakaMain Post

100 ಕೋಟಿ ಲಸಿಕೆ ಸಂಭ್ರಮಾಚರಣೆಗೆ ರಮೇಶ್ ಜಾರಕಿಹೊಳಿ ಚಾಲನೆ

ಬೆಳಗಾವಿ: ದೇಶದಲ್ಲಿ 100 ಕೋಟಿ ಲಸಿಕೆ ವಿತರಣೆ ಆದ ಬಳಿಕ ಎಲ್ಲೆಡೆ ಸಂಭ್ರಮಾಚರಣೆ ನಡೆಯುತ್ತಿದೆ. ಗೋಕಾಕ್ ವಿಧಾನಸಭಾ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಮಂಡಲದಲ್ಲಿ ನಡೆದ ಲಸಿಕೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಶಾಸಕ ರಮೇಶ ಜಾರಕಿಹೋಳಿ ಜಿಲ್ಲೆಯ ವೈದ್ಯರಿಗೆ, ಆಶಾ ಕಾರ್ಯಕರ್ತರಿಗೆ ಸತ್ಕರಿಸಿದರು.

RAMESH JARKIHOLI 1 1

ಜಿಲ್ಲೆಯಲ್ಲಿ ಲಸಿಕೆ ವಿತರಣೆ ಮಾಡಿದ ವೈದ್ಯರಿಗೆ, ಆಶಾ ಕಾರ್ಯಕರ್ತರಿಗೆ ಮಹರ್ಷಿ ಶ್ರೀವಾಲ್ಮೀಕಿ ಕ್ರೀಡಾಂಗಣದಲ್ಲಿ ರಮೇಶ್ ಜಾರಕಿಹೋಳಿ ಧನ್ಯವಾದ ಭಾರತ, ಧನ್ಯವಾದ ಮೋದಿಜಿ ಸಂಭ್ರಮಾಚರಣೆ ಕಾರ್ಯಕ್ರಮದ ಮೂಲಕ ಕೃತಜ್ಞತೆ ಸಲ್ಲಿಸಿ ಅವರನ್ನು ಸನ್ಮಾನಿಸಿದರು. ಇದನ್ನೂ ಓದಿ: 100 ಕೋಟಿ ಲಸಿಕೆ ವಿತರಣೆ – ಅನುಮಾನ ವ್ಯಕ್ತಪಡಿಸಿದ ಸಂಜಯ್ ರಾವತ್

1 Billion Vaccinations Milestone India Corona Vaccine

ಬಳಿಕ ಸರ್ಕಾರಿ ಎಕ್ಸ್ ಮುನ್ಸಿಪಲ್ ಪದವಿ ಪೂರ್ವ ಕಾಲೇಜು ಗೋಕಾಕ್ ಆವರಣದಲ್ಲಿ 90 ಲಕ್ಷ ರೂ. ಅನುದಾನದಡಿ ನಿರ್ಮಿತವಾದ ನೂತನ ಶಾಲಾ ಕೊಠಡಿಯನ್ನು ಉದ್ಘಾಟಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಾರಕಿಹೋಳಿ, ಎರಡು ವರ್ಷದಿಂದ ಮಹಾಮಾರಿ ಕೊರೊನಾದಿಂದ ವಿದ್ಯಾಭ್ಯಾಸ ಕುಂಠಿತವಾಗಿತ್ತು. ಆ ಕಹಿ ನೆನಪು ಮರೆತು ಮಕ್ಕಳು ಧೈರ್ಯದಿಂದ ಶಾಲೆಗೆ ಬಂದು ಹೆಚ್ಚಿನ ವಿದ್ಯಾಭ್ಯಾಸ ಕಲಿಯಲು ಕರೆ ನೀಡಿದರು. ಕೆಲವರು ಲಸಿಕೆಯನ್ನು ಟೀಕಿಸುತ್ತಿದ್ದಾರೆ ಇಂತಹ ಹೇಳಿಕೆಯನ್ನು ನಿಲ್ಲಿಸಬೇಕೆಂದರು. ಇದನ್ನೂ ಓದಿ: ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?

Related Articles

Leave a Reply

Your email address will not be published. Required fields are marked *