ಬೆಂಗಳೂರು: 3,395 ಪೊಲೀಸ್ ಕಾನ್‌ಸ್ಟೇಬಲ್ (Police Constable) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2,266 ಪುರುಷ, 755 ಮಹಿಳಾ, 257 ಸೇವಾನಿರತ ಪುರುಷ, 82 ಸೇವಾನಿರತ ಮಹಿಳಾ, 35 ತೃತೀಯಲಿಂಗ ಅಭ್ಯರ್ಥಿಗಳ ಹುದ್ದೆಗಳು ಖಾಲಿ ಇವೆ.
ಅರ್ಜಿ ಸಲ್ಲಿಕೆ ವಿವರ
ಜೂನ್ 8 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಲು ಜುಲೈ 3 ಕೊನೆ ದಿನ. ಶುಲ್ಕ ಪಾವತಿ ಮಾಡಲು ಜು.4 ಕೊನೆ ದಿನವಾಗಿದೆ.
ವಯೋಮಿತಿ
* ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 33 ವರ್ಷ
* ಪರಿಶಿಷ್ಟ ಜಾತಿ/ ಪಂಗಡ/ ಪ್ರವರ್ಗ-1 ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 35 ವರ್ಷ
* ಬುಡಕಟ್ಟು ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ವಯೋಮಿತಿ ಇದೆ.
ಸೇವಾನಿರತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ವಯೋಮಿತಿ
* ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 38 ವರ್ಷ
* ಪರಿಶಿಷ್ಟ ಜಾತಿ/ ಪಂಗಡ/ ಪ್ರವರ್ಗ-1 ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ಇದೆ.
