– ಕೋಲ್ಕತ್ತಾ ಮೇಯರ್ ಹುದ್ದೆಗೆ ದೀದಿ ಆಪ್ತ ಫಿರ್ಹಾದ್ ಹಕೀಂ ರಾಜೀನಾಮೆ
ನವದೆಹಲಿ: ತೃಣಮೂಲ ಕಾಂಗ್ರೆಸ್‌ನ (TMC) ಹಲವು ಶಾಸಕರು ಪಕ್ಷದೊಳಗೆ ಬಂಡಾಯ ಎದ್ದಿರುವ ಬೆನ್ನಲ್ಲೇ ಇದೀಗ ಮಮತಾ ಬ್ಯಾನರ್ಜಿ ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಸುಮಾರು 23 ಟಿಎಂಸಿ ಸಂಸದರು (TMC MPs) ಬಂಡಾಯ ಶಾಸಕರ ಗುಂಪಿನೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಕೂಡ ಪಕ್ಷಾಂತರ ಮಾಡುವ ಯೋಜನೆಯಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟಿಎಂಸಿಯ 28 ಸಂಸದರು ಲೋಕಸಭೆಯಲ್ಲಿ (Lok Sabha) ಮತ್ತು 13 ಸಂಸದರು ರಾಜ್ಯಸಭೆಯಲ್ಲಿದ್ದಾರೆ. ಲೋಕಸಭೆಯ ವಿರೋಧ ಪಕ್ಷಗಳ ಪಾಳಯದಲ್ಲಿ ಟಿಎಂಸಿಯು 2ನೇ ಅತಿದೊಡ್ಡ ಪಕ್ಷವಾಗಿದೆ. ಒಂದು ವೇಳೆ ಸಂಸದರು ಕೂಡ ಪಕ್ಷಾಂತರ ಮಾಡಿದರೆ, ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಶಾಸಕರ ಬಂಡಾಯ ಎದುರಿಸುತ್ತಿರುವ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ಪಕ್ಷ ಉಳಿಸಿಕೊಳ್ಳೋದೂ ಕಷ್ಟವಾಗಲಿದೆ.

ಬಂಗಾಳದ ಟಿಎಂಸಿ ಶಾಸಕಾಂಗ ಪಕ್ಷವು ಈಗಾಗಲೇ ಇಬ್ಭಾಗವಾಗಿದ್ದು, ರುತಬ್ರತಾ ಬ್ಯಾನರ್ಜಿ ನೇತೃತ್ವದ 60 ಬಂಡಾಯ ಶಾಸಕರ ಗುಂಪು ತಾವು ‘ನಿಜವಾದ ಟಿಎಂಸಿ’ ಎಂದು ಹೇಳಿಕೊಂಡಿತ್ತು.
ಮೂಲಗಳ ಪ್ರಕಾರ, ಶಾಸಕರ ಬಂಡಾಯದ ಬಳಿಕ ಟಿಎಂಸಿ ಸಂಸದರಲ್ಲೂ ಅಸಮಾಧಾನ ಸ್ಫೋಟಗೊಂಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಬಗ್ಗೆ ಹಲವು ಸಂಸದರು ಅತೃಪ್ತರಾಗಿದ್ದಾರೆ. ನಾಯಕತ್ವ ಆಯ್ಕೆ ವಿಚಾರದಲ್ಲಿ ಹೆಚ್ಚುತ್ತಿರುವ ಭಿನ್ನವು ಈಗ ಪಕ್ಷ ಇಬ್ಬಾಗವಾಗುವ ಹಂತಕ್ಕೆ ತಲುಪುತ್ತಿದೆ.

ದೀದಿ ಆಪ್ತನಿಂದಲೇ ರಾಜೀನಾಮೆ
ಇನ್ನೂ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತೀವ್ರಗೊಂಡಿರುವ ಹೊತ್ತಿನಲ್ಲೇ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕ ಫಿರ್ಹಾದ್ ಹಕೀಮ್ ಕೋಲ್ಕತ್ತಾ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹಕೀಮ್ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಜೊತೆಗೆ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕರೂ ಆಗಿದ್ದರು. ಆದ್ರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾರ್ಯನಿರ್ವಹಿಸುವಲ್ಲಿನ ತೊಂದರೆಗಳನ್ನ ಉಲ್ಲೇಖಿಸಿ, ಕೋಲ್ಕತ್ತಾ ಮೇಯರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
