ಪೋರ್ಟ್‌ಬ್ಲೇರ್: ಅಂಡಮಾನ್ ದ್ವೀಪದಲ್ಲಿ (Andaman Islands) ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿದ್ದು, ಈ ಬಗ್ಗೆ ಪೆಟ್ರೋಲಿಯಂ ಖಾತೆ ಸಚಿವ ಹರ್ದಿಪ್ ಸಿಂಗ್ ಪುರಿ (Hardeep Singh Puri) ಮಾಹಿತಿ ನೀಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಂಡಮಾನ್ ದ್ವೀಪದಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿರುವ ಬಗ್ಗೆ ತಿಳಿಸಿದ್ದಾರೆ. ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಶ್ರೀ ವಿಜಯಪುರಂ-3ನಲ್ಲಿ 355 ಮೀಟರ್ ಆಳದಲ್ಲಿ ನೈಸರ್ಗಿಕ ಅನಿಲ ಪತ್ತೆಯಾಗಿದೆ. ಇದು ಅಂಡಮಾನ್ ಸಮುದ್ರದ ಅಪಾರ ಇಂಧನ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಜಲಾನಯನ ಪ್ರದೇಶದಲ್ಲಿ ನಡೆಯುತ್ತಿರುವ ಪರಿಶೋಧನಾ ಅಭಿಯಾನದಲ್ಲಿ ಮತ್ತೊಂದು ಯಶಸ್ಸನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟಿಎಂಸಿ ರೆಬೆಲ್ ಶಾಸಕರ ಸಂಪರ್ಕದಲ್ಲಿ 23 ಸಂಸದರು – ದೀದಿಗೆ ಪಕ್ಷ ಉಳಿಸಿಕೊಳ್ಳೋ ಸಂಕಷ್ಟ
Congratulations @OilIndiaLimited !
An ocean of energy opportunities reinforced in the Andaman Sea!
Very happy to report the presence of natural gas in Sri Vijayapuram-3 an exploratory well drilled by Oil India Ltd. 15 km off the east coast of the Andaman Islands at a water… pic.twitter.com/j6QvWqZkFx— Hardeep Singh Puri (@HardeepSPuri) June 5, 2026
ಸಮುದ್ರದ 355 ಮೀಟರ್ ನೀರಿನ ಆಳದಲ್ಲಿ, ಭೂಮಿಯ ಒಳಗಡೆ ಸುಮಾರು 1,900 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿ ಈ ಗ್ಯಾಸ್ ಪತ್ತೆಯಾಗಿದೆ. ಸಿಕ್ಕಿರುವ ಗ್ಯಾಸ್ ಎಂತಹದ್ದು, ಅದರ ಗುಣಮಟ್ಟ ಹೇಗಿದೆ ಮತ್ತು ಅದು ಎಷ್ಟು ಉಪಯುಕ್ತ ಎಂದು ತಿಳಿಯಲು ಆಯಿಲ್ ಇಂಡಿಯಾ ಸಂಸ್ಥೆಯು ಸದ್ಯ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು 2025ರ ಸ್ವಾತಂತ್ರ‍್ಯ ದಿನದಂದು ಘೋಷಿಸಿದ `ಸಮುದ್ರ ಮಂಥನ ಮಿಷನ್’ (ಆಳ ಸಮುದ್ರದ ಸಂಶೋಧನಾ ಯೋಜನೆ) ಅಡಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಅಂಡಮಾನ್ ಭಾಗದಲ್ಲಿ ಕೊರೆದ 3 ಬಾವಿಗಳಲ್ಲಿ ಈಗಾಗಲೇ 2 ಬಾವಿಗಳಲ್ಲಿ ಇಂಧನ ಇರುವುದು ಖಚಿತವಾಗಿದೆ.ಇದನ್ನೂ ಓದಿ: ಜಮ್ಮು-ಕಾಶ್ಮೀರದ ರಿಯಾಸಿಯಲ್ಲಿ ಮೇಘ ಸ್ಫೋಟ; ಹಠಾತ್ ಜಲಪ್ರವಾಹ
