– KIADB ಅಧಿಕಾರಿಗಳ ಜೊತೆ ಸಭೆಗೆ 2 ವಾರಗಳ ಗಡುವು
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ 2,800 ಎಕರೆ ಜಮೀನನ್ನ ಕೆಐಎಡಿಬಿ ಭೂಸ್ವಾಧೀನ ಮಾಡಿಕೊಳ್ಳಬಾರದು ಎಂದು ರೈತರು ಚಿಕ್ಕಬಳ್ಳಾಪುರದಿಂದ (Chikkaballapura) ಬೆಂಗಳೂರಿನ ವಿಧಾನಸೌಧಕ್ಕೆ ಬೈಕ್ ರ‍್ಯಾಲಿ (Bike Rally) ನಡೆಸಿದರು.

ಕಳೆದ 81 ದಿನಗಳಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ರೈತರು (Farmers) ಇಂದು ಬೆಂಗಳೂರಿಗೆ ಬೈಕ್ ರಾಲಿ ನಡೆಸಿದ್ದರು. ಸಾವಿರಾರು ಮಂದಿ ರೈತರು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡರು. ಈ ಹಿನ್ನೆಲೆ ಚಿಕ್ಕಬಳ್ಳಾಪುರ ಪೊಲೀಸರು 500 ಕ್ಕೂ ಹೆಚ್ಚು ಮಂದಿ ಬಂದೋಬಸ್ತ್ ನಿಯೋಜಿಸಿದ್ದರು. ಇದನ್ನೂ ಓದಿ: ನಾನ್ ಸಿಎಂ ಆದ್ಮೇಲೆ ರಾಮಲಿಂಗಾರೆಡ್ಡಿಗೆ ಬೆಂಗ್ಳೂರು ಅಭಿವೃದ್ಧಿ ಖಾತೆ ಕೊಡ್ತೀನಿ ಅಂದ್ದಿದ್ದು ನಿಜ: ಡಿಕೆಶಿ

ವಿಧಾನಸೌಧಕ್ಕೆ ಹೊರಟಿದ್ದ ಬೈಕ್ ರ‍್ಯಾಲಿಯನ್ನ ಅಣಕನೂರು ಬಳಿಯೇ ಪೊಲೀಸರು ತಡೆದರು. ಇದರಿಂದ ಸತತ ಮೂರು ಗಂಟೆಗಳ ಕಾಲ ರಸ್ತೆಯಲ್ಲೇ ಕೂತು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ ಪ್ರಭು ಆಗಮಿಸಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಅಂತರರಾಜ್ಯ ಜಲ ಭದ್ರತೆ, ರಾಯಚೂರು-ಯಾದಗಿರಿ ಅಭಿವೃದ್ಧಿಗೆ ಸಹಕಾರ – ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಭರವಸೆ: ಬೋಸರಾಜು

ಕೊನೆಗೆ ಜಿಲ್ಲಾಧಿಕಾರಿಗಳು ಇನ್ನೆರಡು ವಾರಗಳ ಒಳಗೆ ಕೆಐಎಡಿಬಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕವೇ ಪ್ರತಿಭಟನೆ ವಾಪಸ್ ಪಡೆದರು. ಇದನ್ನೂ ಓದಿ: ಮಾಜಿ MLC ಅಪಹರಣಕ್ಕೆ ಟ್ವಿಸ್ಟ್ – 2 ಕೋಟಿ ಕಾರಿನ ಸ್ಕ್ರಾಚ್ ತಂದಿಟ್ಟ ಆಪತ್ತು, ನಿವೃತ್ತ ಸೈನಿಕನಿಂದಲೇ ಕಿಡ್ನ್ಯಾಪ್
