ಬೆಂಗಳೂರು: ನಾನು ಸಿಎಂ ಆದ್ಮೇಲೆ ರಾಮಲಿಂಗಾ ರೆಡ್ಡಿ (Ramalinga Reddy) ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡ್ತೀನಿ ಅಂತ ಮಾತುಕೊಟ್ಟಿದ್ದು ನಿಜ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಒಪ್ಪಿಕೊಂಡಿದ್ದಾರೆ.
ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮಲಿಂಗಾರೆಡ್ಡಿ ಅವರು ಬೇರೆ ಕಡೆ ಹೋಗಿದ್ದರು, ಈಗ ಬರ್ತಿದ್ದಾರೆ. ನಾನು ಅವರನ್ನ ಭೇಟಿಯಾಗುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮನವೊಲಿಸಿ, ಒಪ್ಪದಿದ್ರೆ ರಾಜೀನಾಮೆ ಅಂಗೀಕರಿಸಿ – ಒಂದು ಸಾಲಿನ ಸಂದೇಶ ಕೊಟ್ಟ ರಾಹುಲ್ ಗಾಂಧಿ

ನಾನು ಸಿಎಂ ಆದ್ಮೇಲೆ ನಿನಗೆ ಈ ಖಾತೆ ಕೊಡ್ತೀನಿ ಅಂತ ಹೇಳಿದ್ದು ನಿಜ. ಸಾರಿಗೆ ಇಲಾಖೆ ಕೊಟ್ಟಾಗ ನಾನು – ನನ್ನ ತಮ್ಮ ಹೋಗಿ ಕನ್ವೆನ್ಸ್ ಮಾಡಿದ್ವಿ. ಆಗ ಸುಧಾಕರ್ ಬಳಿ ಇದ್ದ ಮುಜರಾಯಿ ತೆಗೆದುಕೊಟ್ಟಿದ್ದು ನಿಜ. ಇವತ್ತು ಹೈಕಮಾಂಡ್ ತೀರ್ಮಾನ ಮಾಡಿದ್ದಾರೆ, ಕೃಷ್ಣಭೈರೇಗೌಡರಿಗೆ (Krishna Byre Gowda) ಬೆಂಗಳೂರು ಅಭಿವೃದ್ಧಿ ಕೊಟ್ಟಿದ್ದಾರೆ. ನಾನು ಅವರಿಗೆ ಕೇಳಿದೆ, ಪ್ರಯತ್ನ ಕೂಡ ಮಾಡಿದೆ. ನೋಡೋಣ ಆಗಿದ್ದು, ಆಗಿದೆ. ಅವರ ಬಳಿ ಹೋಗಿ ಮಾತನಾಡ್ತೀನಿ ಅಂತ ಸಿಎಂ ಡಿಕೆಶಿ ಹೇಳಿದ್ದಾರೆ.
ಜಲಸಂಪನ್ಮೂಲ ಕೂಡ ದೊಡ್ಡ ಖಾತೆಯೇ. ಆದ್ರೆ ಅವರು ನಗರದಲ್ಲಿರೋನು ನಾನು, ಇಲ್ಲೇ ನನ್ನ ಬದುಕು ರಾಜಕೀಯ ಮಾಡಿದ್ದೇನೆ. ನನಗೆ ಇಲ್ಲೇ ಕೊಡಿ ಎಂದಿದ್ದಾರೆ. ಅವರು ಕೇಳೋದ್ರಲ್ಲಿ ತಪ್ಪಿಲ್ಲ, ಅವರಿಗೆ ಸಮಜಾಯಿಷಿ ಹೇಳಬೇಕು. ಏನೇ ಮಾಡಿದ್ರು ಪಕ್ಷದ ವರಿಷ್ಠರನ್ನ ಬಿಟ್ಟು ಮಾಡೋಕೆ ಆಗಲ್ಲ. ಹೋಗಿ ಮಾತನಾಡ್ತೀನಿ ಎಂದು ಸ್ಪಷ್ಟಪಡಿಸಿದ್ದಾರೆ.
ಮನವೊಲಿಸಿ, ಒಪ್ಪದಿದ್ರೆ ರಾಜೀನಾಮೆ ಅಂಗೀಕರಿಸಿ
ಇನ್ನೂ ರಣದೀಪ್ ಸುರ್ಜೇವಾಲಾ, ಕೆ.ಸಿ ವೇಣುಗೋಪಾಲ್ ಅವರಿಂದ ರಾಲಿಂಗಾರೆಡ್ಡಿ ಅವರ ವಿಚಾರವನ್ನು ಆಲಿಸಿದ ರಾಹುಲ್ ಗಾಂಧಿ, ಮನವೊಲಿಸುವಂತೆ ಮುಖ್ಯಮಂತ್ರಿ ಡಿಕೆಶಿಗೆ ಟಾಸ್ಕ್ ಕೊಟ್ಟಿದ್ದಾರೆ. ಮನವೊಲಿಸಿ, ಒಪ್ಪದಿದ್ರೆ ರಾಜೀನಾಮೆ ಅಂಗೀಕರಿಸಿ ಎಂದು ಖಡಕ್ಕಾಗಿ ಹೇಳಿದ್ದಾರೆಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: Video | ನನಗೆ ಒಳ್ಳೆಯ ಖಾತೆಯನ್ನೇ ಕೊಟ್ಟಿದ್ದಾರೆ – I’m happy ಎಂದ ಯತೀಂದ್ರ ಸಿದ್ದರಾಮಯ್ಯ
