ಬೆಂಗಳೂರು: ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಮಿತಿ ರಚನೆ ಮಾಡೋದಾಗಿ ಸಚಿವ ಯುಟಿ ಖಾದರ್ (UT Khader) ಅವರು ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಂಬಂಧ ಸಚಿವ ಯುಟಿ ಖಾದರ್ ಅಧಿಕಾರಿಗಳು ಮತ್ತು ಎಲ್ಲಾ ಜಿಲ್ಲೆಗಳ ಡಿಹೆಚ್‌ಓಗಳ ಜೊತೆ ಸಭೆ ಮಾಡಿ, ನಿರ್ಣಯ ಕೈಗೊಂಡಿದ್ದಾರೆ. ಇದನ್ನೂ ಓದಿ: 56 ವರ್ಷದ ಯುವಕನ ಬಗ್ಗೆ ಮಾತಾಡ್ತಿಲ್ಲ – ಅಧಿವೇಶನಕ್ಕೂ ಮುನ್ನ ರಾಗಾಗೆ ಪಿಎಂ ಪರೋಕ್ಷ ಟಾಂಗ್
ಸಭೆ ಬಳಿಕ ಮಾತನಾಡಿದ ಅವರು, ಮೊದಲ ಬಾರಿಗೆ ಸಾಂಕ್ರಾಮಿಕ ರೋಗಕ್ಕೆ ಸಂಬಂಧಪಟ್ಟಂತೆ ಮಾಹಿತಿ ಹಾಗೂ ಎಲ್ಲಾ ಜಿಲ್ಲೆಗೂ ಮಾಹಿತಿ ತಲುಪಿಸುವ ಉದ್ದೇಶದಿಂದ ಹೆಲ್ತ್ ಎಮರ್ಜೆನ್ಸಿ ಆಪರೇಷನ್ ಸಿಸ್ಟಮ್ ಜಾರಿ ಮಾಡಿದ್ದೇವೆ. ಪ್ರತಿ ಸೀಜನ್‌ಗೂ ಸಾಂಕ್ರಾಮಿಕ ರೋಗ ಬರುತ್ತದೆ. ಅದನ್ನ ನಮ್ಮಿಂದ ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಮಿತಿ ಮಾಡಬೇಕು ಅನ್ನೋದನ್ನ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.
ಸ್ಕೂಲ್ ಮಟ್ಟದಲ್ಲೇ ಈ ರೀತಿಯ ಆಹಾರಗಳನ್ನ ತಡೆಗಟ್ಟುವ ಕ್ರಮ ಶುರು ಮಾಡಿದ್ರೆ, ಆರೋಗ್ಯವಂತ ಸಮಾಜಸೃಷ್ಟಿ ಮಾಡಬಹುದು ಎಂದು ಹೇಳಿದ್ದಾರೆ.ಇದನ್ನೂ ಓದಿ: ವಿದ್ಯುತ್ ಸಂಪರ್ಕ ಕಲ್ಪಿಸಲು 75,000 ಲಂಚಕ್ಕೆ ಬೇಡಿಕೆ; ಮಂಡ್ಯದಲ್ಲಿ ʻಲೋಕಾʼ ಬಲೆಗೆ ಬಿದ್ದ ಸೆಸ್ಕಾಂ ಎಇ
