– ಎಲ್ಲಾ ಡಿಸಿಗಳ ಸಭೆಯೂ ಕರೆದಿದ್ದೇನೆ
ಬೆಂಗಳೂರು: ರಾಜ್ಯದ ಬರಗಾಲದ ಬಗ್ಗೆ ಚರ್ಚೆ ಮಾಡಲು ನಾಳೆ (ಜು.19) ಎಮರ್ಜೆನ್ಸಿ ಕ್ಯಾಬಿನೆಟ್ ಕರೆದಿದ್ದೇನೆ ಅಂತ ಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಭಾನುವಾರ ಎಮರ್ಜೆನ್ಸಿ ಕ್ಯಾಬಿನೆಟ್ ಸಭೆ (Emergency Cabinet Meet ಕರೆದಿದ್ದೇನೆ. ಗುರುವಾರ ಕ್ಯಾಬಿನೆಟ್ ಸಭೆ ಆಗಬೇಕಿತ್ತು. ದೆಹಲಿಗೆ ಹೋಗಿದ್ದರಿಂದ ಆಗಿರಲಿಲ್ಲ. ಹೀಗಾಗಿ ನಾಳೆ ಕ್ಯಾಬಿನೆಟ್ ಸಭೆ ಕರೆಯಲಾಗಿದೆ ಎಂದಿದ್ದಾರೆ.

ಅಲ್ಲದೇ ನಾಳೆ ಎಲ್ಲಾ ಡಿಸಿಗಳ ಸಭೆ ಕರೆದ್ದೇನೆ. ಜೂಮ್ ನಲ್ಲಿ ಸಭೆ ಮಾಡ್ತೀನಿ. ಬರಗಾಲದ ಬಗ್ಗೆ ಚರ್ಚೆ ಮಾಡಬೇಕು. ಸಭೆ ಆದ ಮೇಲೆ ಏನ್ ಮಾಡಬೇಕು ಅಂತ ನೋಡ್ತೀವಿ. ಬೇರೆ ಸ್ಕೀಂ ಡಿಟೇಲ್ಸ್ ಎಲ್ಲಾ ಬಂದಿದೆ. ಬರಗಾಲದಲ್ಲಿ ಏನೇನು ಕೆಲಸ ತೆಗೆದುಕೊಳ್ಳಬಹುದು ಅಂತ ಚರ್ಚೆ ಮಾಡ್ತೀವಿ. ಕೆಲವರು ಗುಳೆ ಹೋಗ್ತಾ ಇದ್ದಾರೆ ಅನ್ನೋ ಮಾಹಿತಿ ಬಂದಿದೆ. ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ ಎಂದೂ ಹೇಳಿದ್ದಾರೆ.
ಬರ ಅಧ್ಯಯನಕ್ಕೆ ತಂಡ ಕಳಿಸಲು ಕೇಂದ್ರಕ್ಕೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪತ್ರಕ್ಕೆ ಯಾವುದೇ ರಿಯಾಕ್ಷನ್ ಬಂದಿಲ್ಲ. ಪತ್ರ ಬರೆದ ಕೂಡಲೇ ಅವರು ರಿಯಾಕ್ಷನ್ ಕೊಡಲ್ಲ ಅಂತ ನಮಗೂ ಅರಿವಿದೆ. ಇನ್ನೂ ಕೆಲವು ಡಿಟೇಲ್ ಕಳಿಸಬೇಕು. ನಮ್ಮ ಬಳಿ ಮಾಹಿತಿ ಬಂದಿದೆ. ಎಷ್ಟು ಮಳೆ ಆಗಿದೆ, ಎಲ್ಲಿ ಮಳೆ ಆಗಿದೆ ಮಾಹಿತಿ ಬಂದಿದೆ. ಪರಿಸ್ಥಿತಿಗೆ ಅನುಗುಣವಾಗಿ ಕುಡಿಯೋಕೆ ನೀರು ಕೊಡಲಾಗಿದೆ ಅಂತ ತಿಳಿಸಿದ್ದಾರೆ.
