ನ್ಯೂಯಾರ್ಕ್: ಫಿಫಾ ವಿಶ್ವಕಪ್ 2026ರ ಫೈನಲ್ (FIFA World Cup 2026 Final) ಪಂದ್ಯವು ಕ್ರೀಡಾ ಇತಿಹಾಸದಲ್ಲೇ ಅತ್ಯಂತ ದುಬಾರಿ ಪಂದ್ಯಗಳಲ್ಲಿ ಒಂದಾಗಿ ದಾಖಲೆ ಬರೆಯಲು ಸಜ್ಜಾಗಿದೆ. ಅಮೆರಿಕದಲ್ಲಿ ಈವರೆಗೆ ನಡೆದ ಯಾವುದೇ ಕ್ರೀಡಾ ಪಂದ್ಯಕ್ಕಿಂತಲೂ ಈ ಫೈನಲ್ ಪಂದ್ಯದ ಟಿಕೆಟ್‌ಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ.
ಹೌದು. ವರದಿಗಳ ಪ್ರಕಾರ, ಫಿಫಾ ವಿಶ್ವಕಪ್ 2026 ರ ಫೈನಲ್ ಪಂದ್ಯ ವೀಕ್ಷಿಸಲು ಕನಿಷ್ಠ ಟಿಕೆಟ್ ಬೆಲೆ 6,943 ಅಮೆರಿಕನ್ ಡಾಲರ್ (ಸುಮಾರು 6 ಲಕ್ಷ ರೂ) ಆಗಿದೆ. ಆದರೆ ಟಿಕೆಟ್ ಮಾರಾಟ ವೇದಿಕೆ TickPick ಪ್ರಕಾರ, ಸರಾಸರಿ ಖರೀದಿ ಬೆಲೆ 11,327 ಡಾಲರ್ (ಸುಮಾರು 9.8 ಲಕ್ಷ ರೂ.) ತಲುಪಿದೆ. ಇದು ಅಮೆರಿಕದ ಕ್ರೀಡಾ ಇತಿಹಾಸದಲ್ಲೇ ಅತಿ ಹೆಚ್ಚು ಸರಾಸರಿ ಟಿಕೆಟ್ ದರವಾಗಿದೆ. ಇದನ್ನೂ ಓದಿ: ರೋಹಿತ್ ಶರ್ಮಾ ನಿವೃತ್ತಿ ವದಂತಿಗೆ ಹೊಸ ಟ್ವಿಸ್ಟ್ – ಹಿಟ್‌ಮ್ಯಾನ್ ಫ್ಯಾನ್ಸ್‌ಗೆ ಸಿಗುತ್ತಾ ಗುಡ್‌ನ್ಯೂಸ್?

ಇನ್ನೂ ಅಚ್ಚರಿಯ ಸಂಗತಿ ಎಂದರೆ, ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನ ಸೆಕ್ಷನ್ 115A ನಲ್ಲಿರುವ ಅತ್ಯಂತ ದುಬಾರಿ ಟಿಕೆಟ್ ಬೆಲೆ 28,479 ಡಾಲರ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 27 ಲಕ್ಷ ರೂ. ಆಗಿದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ ಫೈನಲ್ ಬಳಿಕ ಲೆಜೆಂಡ್ ಮೆಸ್ಸಿ ನಿವೃತ್ತಿ..?

ಇದಕ್ಕೂ ಮುನ್ನ 2024 ರಲ್ಲಿ ಅಮೆರಿಕದಲ್ಲಿ ನಡೆದಿದ್ದ ಸೂಪರ್ ಬೌಲ್ ಪಂದ್ಯ ಅಂತ್ಯ ದುಬಾರಿ ಕ್ರೀಡಾ ಪಂದ್ಯವಾಗಿತ್ತು. ಅಂದು ಸ್ಯಾನ್ ಫ್ರಾನ್ಸಿಸ್ಕೊ 49ers ಮತ್ತು ಕಾನ್ಸಾಸ್ ಸಿಟಿ ಚೀಫ್ಸ್ ನಡುವಿನ ಪಂದ್ಯಕ್ಕೆ ಸರಾಸರಿ ಟಿಕೆಟ್ ಬೆಲೆ 9,411 ಡಾಲರ್ ಆಗಿತ್ತು. ಇದೀಗ ಫಿಫಾ ವಿಶ್ವಕಪ್ ಫೈನಲ್ ಆ ದಾಖಲೆಯನ್ನೂ ಹಿಂದಿಕ್ಕಿದೆ.
