ಮಂಗಳೂರು: ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ (Kollur Mookambika Temple) ಭೇಟಿ ಹಿನ್ನೆಲೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳುನಾಡು ಸಿಎಂ ವಿಜಯ್ (Joseph Vijay) ಅವರನ್ನು ಸಚಿವ ಯು.ಟಿ.ಖಾದರ್ (U.T.Khader) ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಸಿಎಂ ವಿಜಯ್ ಅವರಿಗೆ ಸ್ವಾಮಿ ವಿವೇಕಾನಂದರ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು.
ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಸಿಎಂ ವಿಜಯ್ ಅವರು ಮಧ್ಯಾಹ್ನ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಏರ್‌ಪೋರ್ಟ್‌ನಲ್ಲಿ ಸಿಎಂರನ್ನು ಸಚಿವ ಯು.ಟಿ.ಖಾದರ್ ಆತ್ಮೀಯವಾಗಿ ಸ್ವಾಗತಿಸಿದರು. ಇದನ್ನೂ ಓದಿ: Photo Gallery | ಮಂಗಳೂರಿಗೆ ಆಗಮಿಸಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್
ಬಳಿಕ ಮಾತನಾಡಿದ ಯು.ಟಿ.ಖಾದರ್, ಸಿಎಂ ವಿಜಯ್ ಅವರನ್ನ ಸರ್ಕಾರ ಮತ್ತು ಜಿಲ್ಲೆಯ ಜನತೆಯ ಪರವಾಗಿ ಆತ್ಮೀಯವಾಗಿ ಸ್ವಾಗತ ಮಾಡಿದ್ದೇನೆ. ಬಹಳ ಆತ್ಮೀಯತೆಯಿಂದ ಕರ್ನಾಟಕ ಮತ್ತು ಮಂಗಳೂರು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ವಿಚಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಆತ್ಮೀಯರಿದ್ದಾರೆ. ನಿನ್ನೆ ಕೂಡ ದೆಹಲಿಯಲ್ಲಿ ಪರಸ್ಪರ ಮಾತನಾಡಿದ್ದಾರೆ. ಇಬ್ಬರೂ ಭೇಟಿಯಾಗಿ ಒಗ್ಗಟ್ಟಿನ ಕೆಲಸ ಮಾಡ್ತಾರೆ. ಕರಾವಳಿ ಮತ್ತು ಕರಾವಳಿ ಜನರ ಬಗ್ಗೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ತಿಳಿಸಿದ್ದಾರೆ.
ತಮಿಳುನಾಡು ಸಿಎಂ ವಿಜಯ್ ಅವರು ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಇದನ್ನೂ ಓದಿ: ಕೊಲ್ಲೂರಿಗೆ ಸಿಎಂ ವಿಜಯ್ ಬರ್ತಿದ್ದಾರೆ ಅನ್ನೋ ಕಾರಣಕ್ಕೆ ವಿಶೇಷ ಪೂಜೆಗಳೇನು ಇರಲ್ಲ: ಅರ್ಚಕ ನಿತ್ಯಾನಂದ ಅಡಿಗ
