ಚಾಮರಾಜನಗರ: ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಮೇಲೆ ದಾಳಿ ಮಾಡಲು ಕಾಡಾನೆ ಮುಂದಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ (Bandipur Forest) ನಡೆದಿದೆ.
ರಸ್ತೆಯ ಬದಿಯಲ್ಲಿ ಕಾಡಾನೆ ನಿಂತಿತ್ತು. ಆನೆ ಕಂಡು ಚಾಲಕ ನಿಧಾನವಾಗಿ ಕಾರು ಚಲಾಯಿಸಿದ. ಈ ವೇಳೆ ಕಾರಿನ ಮೇಲೆ ಅಟ್ಯಾಕ್ ಮಾಡಲು ಕಾಡಾನೆ ಮುಂದಾಯಿತು. ನಂತರ ಚಾಲಕ ಮುಂದಕ್ಕೆ ವಾಹನ ಚಲಾಯಿಸಿದ. ಇದನ್ನೂ ಓದಿ: ಕೊಡಗಿನ ಪೊನ್ನಂಪೇಟೆ ತಾಲೂಕಿನ ಸುತ್ತಮುತ್ತ ಭಾರೀ – ಶಾಲೆಯ ತಡೆಗೋಡೆ ಕುಸಿತ; ತಪ್ಪಿದ ದುರಂತ
ನಂತರ ಕಾಡಾನೆ ತನ್ನ ಪಾಡಿಗೆ ರಸ್ತೆ ದಾಟಿ ಹೋಗಿದೆ. ಈ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
