ಮಡಿಕೇರಿ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯ ಪರಿಣಾಮವಾಗಿ ಕೊಡಗು (Kodagu) ಜಿಲ್ಲೆ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ತಡೆಗೋಡೆ ಕುಸಿದು ಬಿದ್ದಿದೆ.
ಶಾಲೆ ರಜೆಯಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ತಡೆಗೋಡೆ ಕುಸಿದು (School Wall Collapsed) ಬಿದ್ದಿರುವುದರಿಂದ ಅದರ ಸಮೀಪದಲ್ಲೇ ನಿರ್ಮಿಸುತ್ತಿದ್ದ ಸಾಲು ಶೌಚಾಲಯಕ್ಕೂ ಅಡ್ಡಿಯಾಗಿದೆ. ಶೌಚಾಲಯ ಕೂಡ ಯಾವುದೇ ಕ್ಷಣದಲ್ಲಿ ಕುಸಿಯುವ ಸಾಧ್ಯತೆಯಿದೆ. ಇದನ್ನೂ ಓದಿ: SIR ಪ್ರಕ್ರಿಯೆಗೆ ತೆರಳಿದ್ದ ವಿಎ ಭುವನಾ ಅಪಘಾತದಲ್ಲಿ ದುರ್ಮರಣ; ಭಾನುವಾರ ಹುಟ್ಟೂರಲ್ಲಿ ಅಂತ್ಯಕ್ರಿಯೆ

ಸ್ಥಳೀಯರ ಮಾಹಿತಿ ಪ್ರಕಾರ, ಕೆಲವೇ ದಿನಗಳ ಹಿಂದೆ ಶಾಲೆಯ ಪಕ್ಕದಲ್ಲಿರುವ ಖಾಸಗಿ ನಿವೇಶನದಲ್ಲಿ ಕಾಮಗಾರಿ ನಡೆಸುವ ಉದ್ದೇಶದಿಂದ ತಡೆಗೋಡೆಯ ತಳಭಾಗದ ಮಣ್ಣನ್ನು ಜೆಸಿಬಿ ಮೂಲಕ ತೆಗೆಸಲಾಗಿತ್ತು. ಇದರಿಂದ ತಡೆಗೋಡೆಯ ಅಡಿಪಾಯ ದುರ್ಬಲಗೊಂಡಿತ್ತು. ನಿರಂತರ ಮಳೆಯಿಂದ ಮಣ್ಣು ಸಡಿಲವಾಗಿ ಗೋಡೆ ಕುಸಿದಿದೆ. ಇದನ್ನೂ ಓದಿ: ಕಾರವಾರ: 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ – PSI ಬಂಧನ

ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ ವಿಜಯ್ ಮಾತನಾಡಿ, ಪ್ರಸ್ತುತ ಮಳೆಗಾಲ ಇನ್ನೂ ಮುಂದುವರಿಯಲಿದೆ. ಈ ಹಿನ್ನೆಲೆ ಉಳಿದಿರುವ ತಡೆಗೋಡೆಯೂ ಅಪಾಯದ ಸ್ಥಿತಿಯಲ್ಲಿದೆ. ಗೋಡೆ ಸಂಪೂರ್ಣ ಕುಸಿದರೆ ಶಾಲಾ ಕಟ್ಟಡ, ಶೌಚಾಲಯ ಹಾಗೂ ಶಾಲಾ ಆವರಣಕ್ಕೆ ಮತ್ತಷ್ಟು ಹಾನಿಯಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆಯೂ ಆತಂಕ ಇದೆ ಎಂದು ಹೇಳಿದ್ದಾರೆ.
