ಕಾರವಾರ: ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪದ ಹಿನ್ನೆಲೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಂಕಿ ಠಾಣೆಯ (Manki Police Station) ಪಿಎಸ್ಐ ಅಭಿನಂದನ್ ಗೌಡನನ್ನು ಬಂಧಿಸಲಾಗಿದೆ.
16 ವರ್ಷದ ಬಾಲಕಿಯನ್ನ ಪುಸಲಾಯಿಸಿ ಭಟ್ಕಳಕ್ಕೆ ಕರೆತಂದು ಲಾಡ್ಜ್ನಲ್ಲಿ ಅತ್ಯಾಚಾರ ನಡೆಸಿದ್ದ ಎಂದು ಆರೋಪಿಸಲಾಗಿದೆ. ಸಂತ್ರಸ್ತ ಬಾಲಕಿ ದೂರಿನ ಮೇಲೆ ಪಿಎಸ್ಐನನ್ನು ಅರೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: SIR ಕರ್ತವ್ಯಕ್ಕೆ ಹೊರಟಿದ್ದ ವೇಳೆ ಹೃದಯಾಘಾತದಿಂದ BLO ಸಾವು
ಬಂಧಿತ ಪಿಎಸ್ಐ ಅಭಿನಂದನ್ ಗೌಡ ರಾಮನಗರ ಜಿಲ್ಲೆಯ ಕನಕಪುರ ಮೂಲದವನು. ಕೆಲವು ತಿಂಗಳ ಹಿಂದೆಯಷ್ಟೇ ಮಂಕಿ ಠಾಣೆಗೆ ಎಲ್ಎನ್ಓ ಆಗಿ ವರ್ಗಾವಣೆಗೊಂಡಿದ್ದ.
ಆರೋಪಿಯನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜನರಿಗೆ ಭಯ ಹುಟ್ಟಿಸುವ ರೀತಿ ಬಂದೂಕು ಹಿಡಿದು ರೀಲ್ಸ್ – ಮೂವರು ಯುವಕರ ಬಂಧನ
