ನವದೆಹಲಿ: ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ʻಸಪ್ತ ಸಿಂಧುʼ ಅಂದ್ರೆ ಭಾರತ ಅಳವಡಿಸಿಕೊಳ್ಳಬೇಕಾದ 7 ಶಕ್ತಿಧಾರೆಗಳ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು.

2047ರ ವೇಳೆಗೆ ಭಾರತವು ಜಗತ್ತಿನಲ್ಲಿ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಉತ್ಪಾದನೆ, ಕೃಷಿ, ತಂತ್ರಜ್ಞಾನದಿಂದ ಹಿಡಿದು ಜಾಗತಿಕ ಬ್ರ್ಯಾಂಡ್‌ಗಳು, ರಕ್ಷಣಾ ಕ್ಷೇತ್ರ ಮತ್ತು ಸಾಫ್ಟ್ ಪವರ್, ಎಐ ವರೆಗೆ ಹಲವು ವಲಯಗಳ ಕುರಿತು ಅವರು ತಮ್ಮ ದೃಷ್ಟಿಕೋನವನ್ನ ಹಂಚಿಕೊಂಡರು.
🚀 ಯುವ ಭಾರತದ ಭವಿಷ್ಯಕ್ಕೆ AI ಶಕ್ತಿ! 🇮🇳
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದೇಶದ ಯುವಜನತೆಗೆ ಬಂಪರ್ ಘೋಷಣೆ ಮಾಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಬರುವ ವರ್ಷದಲ್ಲಿ ಒಂದು ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ತರಬೇತಿ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದ್ದಾರೆ.
ಇದು ಕೇವಲ ತರಬೇತಿಯಲ್ಲ…
👉… pic.twitter.com/kLvASiwNrP— BJP Karnataka (@BJP4Karnataka) August 15, 2026
ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಮೋದಿ, ಏಳು ಶಕ್ತಿಧಾರೆಗಳನ್ನು ಭಾರತದ ಯುವಶಕ್ತಿಯೊಂದಿಗೆ ಜೋಡಿಸಿದರು. ದೇಶ ನಿರ್ಮಾಣದ ಪ್ರಕ್ರಿಯೆಯಲ್ಲಿ ಯುವಜನರ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಉತ್ಪಾದನೆಗೆ ಮೊದಲ ಆದ್ಯತೆ ಏಕೆ?
ಪ್ರಧಾನಿ ಮೋದಿ ಅವರ ಭಾಷಣದಲ್ಲಿ ಹೆಚ್ಚು ವಿವರ ಪಡೆದದ್ದು ಉತ್ಪಾದನಾ ಕ್ಷೇತ್ರ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವು ವಿಶ್ವಾಸಾರ್ಹ ಕೇಂದ್ರವಾಗಬೇಕು ಎಂದು ಅವರು ಉದ್ಯಮಿಗಳು ಮತ್ತು MSMEಗಳಿಗೆ ಕರೆ ನೀಡಿದರು.
ಭಾರತೀಯ ಕಾರ್ಖಾನೆಗಳು ಜಾಗತಿಕ ಮಟ್ಟದಲ್ಲಿ ವೆಚ್ಚ, ಗುಣಮಟ್ಟ ಮತ್ತು ಪ್ರಮಾಣದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದಿರಬೇಕು. ಉತ್ಪನ್ನಗಳು ಬಳಕೆದಾರ ಸ್ನೇಹಿಯಾಗಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯಬೇಕು. ಜೊತೆಗೆ, ಜಗತ್ತಿನ ಗ್ರಾಹಕರನ್ನು ಆಕರ್ಷಿಸುವಂತಹ ಆಕರ್ಷಕ ಪ್ಯಾಕೇಜಿಂಗ್‌ಗೂ ಆದ್ಯತೆ ನೀಡಬೇಕು. ʻಶೂನ್ಯ ದೋಷ, ನಿಖರ ಉತ್ಪಾದನೆʼ ಭಾರತದ ಗುರುತಾಗಬೇಕು. ಪ್ರತಿಯೊಬ್ಬ ಉತ್ಪಾದಕ ಮತ್ತು MSME ಜಾಗತಿಕ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆ ಮತ್ತು ಗುಣಮಟ್ಟದ ಆಧಾರದ ಮೇಲೆ ತನ್ನದೇ ಆದ ಬ್ರ್ಯಾಂಡ್ ನಿರ್ಮಿಸಬೇಕು ಎಂದು ಅವರು ಕರೆ ನೀಡಿದರು.

ಸಪ್ತ ಸಿಂಧುವಿನ ಏಳು ಶಕ್ತಿಧಾರೆಗಳು ಯಾವುವು?
ಪ್ರಧಾನಿ ಮೋದಿ ಅವರು ಪಟ್ಟಿ ಮಾಡಿದ ಏಳು ಪ್ರಮುಖ ಶಕ್ತಿಧಾರೆಗಳು:
ಉತ್ಪಾದನೆ,
ಕೃಷಿ
ತಂತ್ರಜ್ಞಾನ
ಮೂಲಸೌಕರ್ಯ
ರಕ್ಷಣಾ ಕ್ಷೇತ್ರ
ಹಸಿರು ಮತ್ತು ನೀಲಿ ಆರ್ಥಿಕತೆ
ಸಾಫ್ಟ್ ಪವರ್
ಈ ಕ್ಷೇತ್ರಗಳನ್ನು ಪ್ರತ್ಯೇಕವಾಗಿ ಅಭಿವೃದ್ಧಿಪಡಿಸುವ ಬದಲು, ಪರಸ್ಪರ ಸಂಪರ್ಕ ಹೊಂದಿರುವ ಸಮಗ್ರ ಶಕ್ತಿಗಳಾಗಿ ಬೆಳೆಸಬೇಕು ಎಂದು ಸಾರಿದರು.
2047ರೊಳಗೆ ‘ವಿಕಸಿತ ಭಾರತ’ದ ಗುರಿ
ಭಾರತದ ಸ್ವಾತಂತ್ರ್ಯದ 100ನೇ ವರ್ಷವಾದ 2047ರ ವೇಳೆಗೆ ದೇಶವನ್ನ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿಯನ್ನು ಸಾಧಿಸಲೇಬೇಕು. ಈ ಗುರಿಯನ್ನು ನಾವು ಸಾಧಿಸಲೇಬೇಕು. 140 ಕೋಟಿ ಭಾರತೀಯರೂ ಇದಕ್ಕಾಗಿ ಶ್ರಮಿಸಬೇಕು. ವಿಶ್ವದ ಅತಿದೊಡ್ಡ ಜನಸಂಖ್ಯೆಯ ರಾಷ್ಟ್ರವೊಂದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪ ಕೈಗೊಂಡಾಗ, ಅದು ನಮ್ಮ ಧೈರ್ಯಕ್ಕೆ ಸಾಕ್ಷಿಯಾಗುತ್ತದೆ. ಆಗ ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನವೂ ಬದಲಾಗುತ್ತದೆ ಎಂದು ಅವರು ಹೇಳಿದರು.
ಕಳೆದ 12 ವರ್ಷಗಳಲ್ಲಿ ದಲಿತರು, ಶೋಷಿತರು, ಬಡವರು, ಮಧ್ಯಮ ವರ್ಗದವರು, ಯುವಕರು ಸೇರಿದಂತೆ ಕೋಟ್ಯಂತರ ಭಾರತೀಯರು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ಶ್ರಮಿಸಿದ್ದಾರೆ. ಈ ಪ್ರಯತ್ನಗಳ ಫಲವಾಗಿ 25 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು
* ಇಂದು ಪ್ರತಿಯೊಂದು ಹೃದಯವೂ ‘ವಂದೇ ಮಾತರಂ’ದ ಲಯದೊಂದಿಗೆ ಮಿಡಿಯುತ್ತಿದೆ. ಇಂದು ಪ್ರತಿಯೊಂದು ಮನೆಯಲ್ಲೂ ತಿರಂಗಾ ಇದೆ, ಪ್ರತಿಯೊಂದು ಮನಸ್ಸಿನಲ್ಲೂ ತಿರಂಗಾ ಇದೆ.
* ಈ ಸ್ವಾತಂತ್ರ್ಯ ದಿನದಂದು ಬಾಪು (ಮಹಾತ್ಮ ಗಾಂಧೀಜಿ) ಹಾಗೂ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳಿಗೆ ನಾನು ಗೌರವಪೂರ್ವಕ ನಮನ ಸಲ್ಲಿಸುತ್ತೇನೆ. ಇದು ಐತಿಹಾಸಿಕ ದಿನ. ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಕೆಂಪುಕೋಟೆಯ ಗೋಡೆಗಳಿಂದ ‘ವಂದೇ ಮಾತರಂ’ ಘೋಷಣೆ ಪ್ರತಿಧ್ವನಿಸಿದೆ.
* ಇಂದು ನಾವು 80ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ. ಇಂದು ‘ವಂದೇ ಮಾತರಂ’ ಘೋಷಣೆ ಪ್ರತಿಯೊಂದು ಹೃದಯದಲ್ಲೂ ಪ್ರತಿಧ್ವನಿಸುತ್ತಿದೆ. ಇಂದು ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿದೆ ಮತ್ತು ಪ್ರತಿಯೊಂದು ಮನಸ್ಸಿನಲ್ಲೂ ತಿರಂಗಾ ನೆಲೆಸಿದೆ. ಹೊಸ ಸಂಕಲ್ಪಗಳೊಂದಿಗೆ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ದೇಶ ಮುನ್ನಡೆಯುತ್ತಿದೆ.
* ಕಳೆದ ಕೆಲವು ದಿನಗಳಲ್ಲಿ ದೇಶದ ಕೆಲವು ಭಾಗಗಳು ಪ್ರವಾಹಕ್ಕೆ ತುತ್ತಾಗಿದ್ದು, ಅನೇಕ ಜನರು ಇದರಿಂದ ಬಾಧಿತರಾಗಿದ್ದಾರೆ. ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಇಡೀ ದೇಶವೇ ಅವರೊಂದಿಗೆ ನಿಂತಿದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ.
* 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಮಹತ್ವದ ಕನಸು ಇಂದು ನಮ್ಮ ಮುಂದಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪ ಮಾಡಿದಾಗ, ಅದು ನಮ್ಮ ಧೈರ್ಯ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗುತ್ತದೆ. ಜಗತ್ತು ಭಾರತವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವಂತೆ ಆಗುತ್ತದೆ.
* ಇತ್ತೀಚೆಗೆ ದೇಶದ ಕೆಲವು ಭಾಗಗಳು ಪ್ರವಾಹ ಮತ್ತು ಭೂಕುಸಿತದ ಭೀಕರ ಪರಿಣಾಮವನ್ನು ಎದುರಿಸಿವೆ. ಅನೇಕ ಕುಟುಂಬಗಳು ಇದರಿಂದ ಸಂಕಷ್ಟಕ್ಕೀಡಾಗಿವೆ. ಅವರ ನೋವಿಗೆ ನಾವು ಆಳವಾದ ಸಹಾನುಭೂತಿ ವ್ಯಕ್ತಪಡಿಸುತ್ತೇವೆ. ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ನಾವು ಹಾಗೂ ಇಡೀ ದೇಶ ನಿಮ್ಮೊಂದಿಗಿದ್ದೇವೆ ಎಂದು ನಾನು ಭರವಸೆ ನೀಡುತ್ತೇನೆ.
* ಒಂದು ರಾಷ್ಟ್ರವು ತನ್ನ ಕನಸುಗಳು, ಸಂಕಲ್ಪ ಮತ್ತು ತನ್ನೊಳಗಿನ ಶಕ್ತಿಯಿಂದ ಮುನ್ನಡೆದಾಗ ಮಾತ್ರ ಮಹಾನ್ ಆಗುತ್ತದೆ ಮತ್ತು ತನ್ನ ಗುರಿಗಳನ್ನು ಸಾಧಿಸುತ್ತದೆ. ಇನ್ನು ಸಣ್ಣ ಕನಸುಗಳು ಸಾಕಾಗುವುದಿಲ್ಲ. ನಾವು ದೊಡ್ಡ ಕನಸುಗಳನ್ನು ಕಾಣಬೇಕು. ಏಕೆಂದರೆ ದೊಡ್ಡ ಕನಸುಗಳು ನಮ್ಮ ಚಿಂತನೆಗಳನ್ನು ವಿಸ್ತರಿಸುತ್ತವೆ ಮತ್ತು ನಮ್ಮ ದೃಷ್ಟಿಕೋನದ ವ್ಯಾಪ್ತಿಯನ್ನು ಹೆಚ್ಚಿಸುತ್ತವೆ. ನಮ್ಮ ಸಂಕಲ್ಪ ದೃಢವಾಗಿರಬೇಕು. ಸಂಕಲ್ಪ ಗಟ್ಟಿಯಾಗಿದ್ದಾಗ, ಕಷ್ಟಗಳು ಮತ್ತು ವಿಪತ್ತುಗಳ ನಡುವೆಯೂ ಮುಂದೆ ಸಾಗುವ ದಾರಿಯನ್ನು ಕಂಡುಕೊಳ್ಳುವ ಸಾಮರ್ಥ್ಯ ಸಹಜವಾಗಿಯೇ ಮೂಡುತ್ತದೆ.
* ನಾವೂ ಒಂದು ಮಹತ್ವಾಕಾಂಕ್ಷೆಯ ಕನಸನ್ನು ಕಂಡಿದ್ದೇವೆ. ದೃಢ ಸಂಕಲ್ಪದೊಂದಿಗೆ ಹೊಸ ಎತ್ತರಗಳನ್ನು ತಲುಪುವ ಕನಸು. ಸ್ವಾತಂತ್ರ್ಯದ 100ನೇ ವರ್ಷವಾದ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವುದು ನಮ್ಮ ದೃಷ್ಟಿಯಾಗಿದೆ.

