BBK 13: ಕಳೆದೆರಡು ವಾರಗಳಿಂದ ಬಿಗ್‌ಬಾಸ್ (Bigg Boss 13) ಮನೆಯಲ್ಲಿ ಸೈಲೆಂಟ್ ಆಗಿದ್ದ ಸ್ಪರ್ಧಿ ಜಗ್ಗ ಅಲಿಯಾಸ್ ಜಗದೀಶ್ ಇದೀಗ ಸಖತ್ ಗರಂ ಆಗಿದ್ದಾರೆ. ಮೇಕಪ್ ಮಾಡುತ್ತಾ ಕುಳಿತಿದ್ದ ಮಹಿಳಾ ಸ್ಪರ್ಧಿಗಳ ಮೇಲೆ ಜಗ್ಗ ಕೋಪಗೊಂಡಿದ್ದು, ಈ ವಿಚಾರ ಸೌಂದರ್ಯ ಶೆಟ್ಟಿ ಹಾಗೂ ಜಗದೀಶ್ ಅವರ ನಡುವೆ ಭಾರೀ ಜಗಳಕ್ಕೆ ಕಾರಣವಾಗಿದೆ.
ಮೊದಲ ವಾರದಲ್ಲಿ ಬಿಗ್‌ಬಾಸ್ ಮನೆಯ ಬಹುತೇಕ ಕೆಲಸಗಳನ್ನು ಒಬ್ಬರೇ ಮಾಡಿದ್ದ ಜಗದೀಶ್‌ಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಮನೆಯ ಕೆಲಸಗಳನ್ನು ಹಂಚಿಕೊಂಡು ಮಾಡಿಸುತ್ತಿರುವ ಜಗ್ಗ, ಇದೇ ವಿಚಾರಕ್ಕೆ ಮಹಿಳಾ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಹಿಳಾ ಸ್ಪರ್ಧಿಗಳೆಲ್ಲಾ ಮೇಕಪ್ ಮಾಡಿಕೊಳ್ಳುತ್ತಾ ಕುಳಿತಿದ್ದ ಜಾಗಕ್ಕೆ ಬಂದ ಜಗ್ಗ, ಹೀಗೆ ಎಲ್ಲರೂ ಮೇಕಪ್ ಮಾಡ್ಕೊಂಡು ಕುಳಿತರೆ ಹೇಗೆ? ಬೆಳಗ್ಗೆ ನಾನು ಪಾತ್ರೆ ತೊಳೆದಿದ್ದೀನಿ. ಬಂದಿರೋದು ಲೇಜಿಯಾಗಿರೋಕಾ? ಸ್ಟೈಲ್ ಮಾಡೋಕಾ? ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಸೌಂದರ್ಯ ಶೆಟ್ಟಿ ಕಣ್ಣಿಗೆ ಮಸ್ಕರಾ ಹಾಕಿಕೊಳ್ಳುತ್ತಿದ್ದರು. ಆಗ ಜಗ್ಗ ಅವರ ಕೈ ಹಿಡಿದು ಕರೆಯಲು ಯತ್ನಿಸಿದ್ದು, ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗ್ಗ ಹಾಗೂ ಸೌಂದರ್ಯ ನಡುವಿನ ಜಗಳ ಬಿಡಿಸಲು ಮಂಜ ಮಧ್ಯಪ್ರವೇಶಿಸಿದ್ದಾರೆ. ಇದನ್ನೂ ಓದಿ: ರಾಮರಸ ಚಿತ್ರಕ್ಕಾಗಿ ಕನ್ನಡಕ್ಕೆ ಬಂದ ಬಾಲಿವುಡ್ ನಟಿ ಅದಾ ಶರ್ಮಾ
ಇದುವರೆಗೆ ಬಿಗ್‌ಬಾಸ್ ಮನೆಯಲ್ಲಿ ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದ ಜಗ್ಗ ಇದೀಗ ಏಕಾಏಕಿ ಗರಂ ಆಗಿರುವುದು ವೀಕ್ಷಕರ ಗಮನ ಸೆಳೆದಿದೆ. ಜಗ್ಗನ ಈ ಹೊಸ ಅವತಾರ ನೋಡಿ ವೀಕ್ಷಕರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಡೈನಿಂಗ್ ಟೇಬಲ್ ಕ್ಲೀನ್ ಮಾಡಿಲ್ಲ ಎಂಬ ವಿಚಾರಕ್ಕೆ ಈ ಹಿಂದೆಯೇ ಗಗನ್ ಹಾಗೂ ಜಗ್ಗ ನಡುವೆ ಜಗಳ ನಡೆದಿತ್ತು. ಇದೀಗ ಮಹಿಳಾ ಸ್ಪರ್ಧಿಗಳ ಜೊತೆಗೂ ಜಗ್ಗ ಕಿರಿಕ್ ಮಾಡಿಕೊಂಡಿದ್ದು, ದೊಡ್ಮನೆಯಲ್ಲಿ ಜಗ್ಗನ ಉಪಸ್ಥಿತಿ ಮತ್ತಷ್ಟು ಗಮನ ಸೆಳೆಯುತ್ತಿದೆ.ಇದನ್ನೂ ಓದಿ: ಲಂಬೋದರನಿಗಾಗಿ ಸಾಧ್ವಿ ಆದ ನಟಿ ಮೇಘನಾ ಗಾಂವ್ಕರ್

