ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್(Kangana Ranaut) ನಿರೂಪಣೆಯ ‘ಲಾಕ್ ಅಪ್ 2′(Lock Upp 2) ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಕಿರುತೆರೆ ನಟಿ ಆಕಾಂಕ್ಷಾ ಚಮೋಲಾ(Akanksha Chamola), ಮದುವೆಗೂ ಮುನ್ನ ತಾನು ಹುಡುಗಿಯರೊಂದಿಗೆ ಡೇಟಿಂಗ್ ಮಾಡಿದ್ದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಬಾಲಿವುಡ್(Bollywood) ಕಿರುತೆರೆಯ ಜನಪ್ರಿಯ ಜೋಡಿಗಳಲ್ಲಿ ಗೌರವ್ ಖನ್ನಾ ಮತ್ತು ಆಕಾಂಕ್ಷಾ ಚಮೋಲಾ ಕೂಡ ಒಂದು. ಇಬ್ಬರ ನಡುವೆ 9 ವರ್ಷಗಳ ವಯಸ್ಸಿನ ಅಂತರವಿದ್ದರೂ ಅವರ ಬಾಂಡಿಂಗ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಇತ್ತೀಚೆಗೆ ತಮ್ಮ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳಿರುವುದಾಗಿ ಹಾಗೂ ವಿಚ್ಛೇದನದ ನಿರ್ಧಾರ ಕೈಗೊಂಡಿರುವುದಾಗಿ ಆಕಾಂಕ್ಷಾ ರಿಯಾಲಿಟಿ ಶೋನಲ್ಲಿ ಹೇಳಿಕೊಂಡಿದ್ದಾರೆ. ಈ ಹೇಳಿಕೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಇದರ ಬೆನ್ನಲ್ಲೇ ನಟಿ ಮತ್ತೊಂದು ಅಚ್ಚರಿಯ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.
ಶೋನಲ್ಲಿ ಮಾತನಾಡಿದ ಆಕಾಂಕ್ಷಾ, ಮದುವೆಗೂ ಮೊದಲು ನಾನು ಬೈಸೆಕ್ಸುವಲ್ ಆಗಿದ್ದೆ. ಹುಡುಗಿಯರ ಜೊತೆ ಸಂಬಂಧ ಹೊಂದಿದ್ದೆ. ಅವರ ಬಗ್ಗೆ ನನಗೆ ಆಕರ್ಷಣೆ ಇತ್ತು. ಮಹಿಳೆಯರ ಜೊತೆ ಇರೋದೆ ನನಗೆ ಸೇಫ್ ಪೀಲ್ ಕೊಡುತ್ತಿತ್ತು. ಸಮಾಜ ಕೊಟ್ಟಿರುವ ಲೇಬಲ್‌ಗಳಿಗಿಂತ ನಿಜವಾದ ಪ್ರೀತಿಯನ್ನೇ ನಾನು ನಂಬುತ್ತೇನೆ. ನನಗೆ ಎಲ್ಲ ಮಹಿಳೆಯರೂ ಸುಂದರವಾಗಿ ಕಾಣುತ್ತಾರೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಬೆಂಗಳೂರಿನ ಉದ್ಯಮಿ ಗೌರಿ ಜೊತೆ ಆಮಿರ್ ಖಾನ್ ಮೂರನೇ ಮದ್ವೆ – 150 ಗಣ್ಯರಿಗಷ್ಟೇ ಆಹ್ವಾನ
ಆಕಾಂಕ್ಷಾ ಅವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಲವರು ಅವರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡಿದ್ದರೆ, ಇನ್ನೂ ಕೆಲವರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಅವರು ಈ ರೀತಿ ಇರುವುದರಿಂದರಿಂದಲೇ ಗೌರವ್‌ನಿಂದ ಬೇರಾಗಿರಬಹುದು ಎಂಬ ಮಾತುಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ ನಟಿ ಮಾತ್ರ ನಾವಿಬ್ಬರು ಹೊಂದಾಣಿಕೆ ಕೊರತೆಯಿಂದ ದೂರವಾಗುತ್ತಿದ್ದೇವೆ. ಡಿವೋರ್ಸ್ ಪಡೆಯುತ್ತಿದ್ದೇವೆ. ಆದರೂ ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹವಿದೆ ಎಂದಿದ್ದಾರೆ.ಇದನ್ನೂ ಓದಿ: ಕೋಮಲ್ ಹುಟ್ಟುಹಬ್ಬಕ್ಕೆ ʼರೋಲೆಕ್ಸ್ʼ ಪೋಸ್ಟರ್
