ಅಂಬಟಿ ಮಧು ಮೋಹನ್ ನಿರ್ಮಾಣದ ಶ್ರೀನಿವಾಸ್ ಮಂಡ್ಯ ನಿರ್ದೇಶನದ ರೋಲೆಕ್ಸ್ (Rolex Movie) ಚಲನಚಿತ್ರದ ತಂಡದಿಂದ ಒಂದು ಬಿಗ್ ಅಪ್ಡೇಟ್. ಕೋಮಲ್ ಕುಮಾರ್ (Komal Kumar) ಅವರ ಹುಟ್ಟುಹಬ್ಬದ ಪ್ರಯುಕ್ತ ಒಂದು ವಿಶೇಷ ಗ್ಲಿಂಪ್ಸ್ ಮತ್ತು ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಕೋಮಲ್ ಹುಟ್ಟುಹಬ್ಬದ ಶುಭಾಶಯವನ್ನು ರೋಲೆಕ್ಸ್ ಟೀಮ್ ತಿಳಿಸಿದೆ.
ತುಂಬಾ ಸ್ಟೈಲೀಶ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಕೋಮಲ್ ಕುಮಾರ್ ಪ್ರೇಕ್ಷಕರನ್ನು ರಂಜಿಸಲು ಶೀಘ್ರದಲ್ಲಿ ಬೆಳ್ಳಿ ಪರದೆಗೆ ಬರುತ್ತಿದ್ದಾರೆ. ಇದೊಂದು ಸಂಪೂರ್ಣ ಕೌಟುಂಬಿಕ ಕಾಮಿಡಿ ಸಿನಿಮಾವಾಗಿದ್ದು, ಪ್ರೇಕ್ಷಕರಿಗೆ ಹಾಸ್ಯವನ್ನು ಉಣಬಡಿಸಲಿದೆ. ಈ ಸಿನಿಮಾಕ್ಕೆ ಜೆಸ್ಸಿ ಗಿಪ್ಟ್ ಸಂಗೀತವಿದ್ದು, ರಾಕೇಶ್ ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಮುರಳಿಕೃಷ್ಣ ಹಾಗೂ ಕ್ರಿಯೇಟಿವ್ ಹೆಡ್ ಆಗಿ ರಾಜೇಶ್ ವರ್ಮ ಕಾರ್ಯನಿರ್ವಹಿಸಿದ್ದಾರೆ. ಇದನ್ನೂ ಓದಿ: ಜಟ್ಟ ಖ್ಯಾತಿಯ ಗಿರಿರಾಜ್ ಹೊಸ ಚಿತ್ರದ ಟೈಟಲ್ ‘ಕಲ್ಯಾಣಿ’
ಕೋಮಲ್ ವೃತ್ತಿ ಜೀವನದಲ್ಲಿ ವಿಭಿನ್ನವಾದ ಸಿನಿಮಾ ಇದಾಗಿದ್ದು, ಕೋಮಲ್ ಕೂಡ ಈ ಸಿನಿಮಾದಲ್ಲಿ ವಿಶೇಷ ಪಾತ್ರ ಮತ್ತು ಗೆಟಪ್‌ನಲ್ಲಿ ಕಾಣಿಸಲಿದ್ದಾರೆ.
