– 13 ಗಂಟೆ ಕಾದ್ರೂ ಚಂಪತ್ ರಾಯ್ ರಶೀದಿ ಕೊಡಲಿಲ್ಲ; ಮಾಜಿ ಗೃಹ ಕಾರ್ಯದರ್ಶಿ ಲಕ್ಷ್ಮಿನಾರಾಯಣ್
ಅಯೋಧ್ಯೆ: ರಾಮಮಂದಿರ ದೇಣಿಗೆ ಲೂಟಿ ಹಗರಣ (Ram Mandir Donation Row) ದೇಶವ್ಯಾಪಿ ಸಂಚಲನ ಸೃಷ್ಟಿಸಿದೆ. ರಾಮನ ದೇಣಿಗೆ ಹಣವನ್ನೂ ಬಿಡದ ಆರೋಪಿಗಳ ಮನೆಗಳನ್ನು ಬುಲ್ಡೋಜರ್ಗಳಿಂದ ನೆಲಸಮ ಮಾಡಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಈ ಬೆನ್ನಲ್ಲೇ ಬಾಲ ರಾಮನಿಗೆ ಅರ್ಪಿಸಿದ್ದ ಉಡುಗೊರೆಗಳು ಹಾಗೂ ಆಭರಣಗಳೂ ನಾಪತ್ತೆಯಾಗಿವೆ ಎನ್ನುವ ಹೊಸ ಆರೋಪ ಕೇಳಿಬಂದಿದೆ.
ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಎಸ್. ಲಕ್ಷ್ಮಿನಾರಾಯಣ್ (S Laxmi Narayan) ಅವರ ಕುಟುಂಬ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹಸ್ತಾಂತರಿಸಿದ್ದ ಚಿನ್ನದ ಲೇಪಿತ ʻರಾಮಚರಿತಮಾನಸʼ (Ramcharitmanas) (ಪುಸ್ತಕ) ಕಾಣೆಯಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರದಲ್ಲಿ ಪ್ರತಿನಿತ್ಯ 6-8 ಲಕ್ಷ ರೂ. ದೇಣಿಗೆ ಲೂಟಿ – ಬ್ಯಾಂಕ್ ಅಂಕಿ ಅಂಶಗಳಲ್ಲಿ ಸತ್ಯ ಬಯಲು

ಪದೇ ಪದೇ ವಿನಂತಿಸಿದ್ರೂ ಕಾಣಿಕೆ ನೀಡಿದ್ದಕ್ಕೆ ರಶೀದಿ ನೀಡಿಲ್ಲ, ಅದು ಸುರಕ್ಷಿತವಾಗಿದೆಯೋ ಇಲ್ಲವೋ ಅನ್ನೋದು ತಿಳಿದಿಲ್ಲ. ಆರ್‌ಎಸ್‌ಎಸ್ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಅವರಿಗೆ ಮನವಿ ಮಾಡಿದ ಬಳಿಕವೂ ರಶೀದಿ ನಿರಾಕರಿಸಲಾಗಿದೆ. ಈ ಬಗ್ಗೆ ಎಸ್. ಲಕ್ಷ್ಮಿನಾರಾಯಣ್ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಭಾರತದ ದೇವಾಲಯಗಳನ್ನು ನಿರ್ವಹಿಸೋದ್ಯಾರು? – ರಾಜ್ಯಗಳ ಪಾತ್ರ ಏನು?
ʻ2024ರ ಏಪ್ರಿಲ್‌ನಲ್ಲಿ ನನ್ನ ಪತ್ನಿ ಸರಸ್ವತಿ ಜೊತೆಗೆ ಅಯೋಧ್ಯೆಗೆ ಭೇಟಿ ನೀಡಿದ್ದೆ. ಆಗ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಚಿನ್ನಲೇಪಿತ ʻರಾಮಚರಿತಮಾನಸʼ ಪುಸ್ತಕವನ್ನ ನೀಡಿದೆ. ಆ ಸಮಯದಲ್ಲಿ ಯಾವುದೇ ರಶೀದಿ ನೀಡಲಿಲ್ಲ. ಅದನ್ನ ರಾಮ ಮಂದಿರದ ಗರ್ಭಗುಡಿಯಲ್ಲಿ ಇಡಲಾಗುವುದು ಎಂದು ಹೇಳಿದ್ದರು, ಆದ್ರೆ ಕೊಡಲಿಲ್ಲ ಎಂದು ಹೇಳಿದ್ದಾರೆ.

ದೀರ್ಘಕಾಲದ ಬಳಿಕ ಚಂಪತ್ ರಾಯ್ ಅವರನ್ನ ಭೇಟಿಯಾದೆ. 2 ಬಾರಿ ಚಂಪತ್ ರಾಯ್ ಅವರನ್ನ ಭೇಟಿಯಾಗಿ ರಶೀದಿ ಕೇಳಿದೆ. ಮೊದಲ ಬಾರಿ ಭೇಟಿಯಾದಾಗ 9 ಗಂಟೆ, 2ನೇ ಬಾರಿ ಭೇಟಿಯಾದಾಗ 4 ಗಂಟೆಗಳ ಕಾಲ ಅದಕ್ಕಾಗಿ ಕಾದುಕುಳಿತಿದ್ದೆ. ಇಲ್ಲಿಯವರೆಗೂ ರಶೀದಿ ನೀಡಿಲ್ಲ. 147 ಕೆಜಿ ತೂಕದ ʻರಾಮಚರಿತಮಾನಸʼ ಪುಸ್ತಕದ 522 ಪುಟಗಳೂ ಚಿನ್ನಲೇಪಿತವಾಗಿದ್ದವು ಎಂದು ಲಕ್ಷ್ಮಿನಾರಾಯಣ್ ಆರೋಪಿಸಿದ್ದಾರೆ. ಇದನ್ನೂ ಓದಿ: ಚಿನ್ನದಿಂದ ಆದಾಯ, ಠೇವಣಿ ಇಟ್ಟರೆ ಕಾಸು – ಏನಿದು ಕೇಂದ್ರದ ಹೊಸ ಯೋಜನೆ?
ಈ ಪುಸ್ತಕ ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ್ದು, ದಿವಂಗತ ನನ್ನ ತಾಯಿಯ ನೆನಪಿನಲ್ಲಿ ಅದನ್ನು ಕಾಣಿಕೆಯಾಗಿ ನೀಡಿದ್ದೆ. ಏಕೆಂದ್ರೆ ನನ್ನ ತಾಯಿ ತಮ್ಮ ಜೀವನದ 15 ರಿಂದ 18 ವರ್ಷ ರಾಮನಾಮ ಬರೆಯುತ್ತಾ ಕಳೆದರು. ನಮ್ಮ ಕುಟುಂಬ ಕೂಡ ಹಲವು ದಶಕಗಳಿಂದ ರಾಮಜನ್ಮಭೂಮಿ ಚಳವಳಿಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿಕೊಂಡಿದ್ದಾರೆ.
