ಲಕ್ನೋ: ಇರಾನ್‌ನ(Iran) ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ (Ayatollah Khamenei) ಅವರ ಅಂತ್ಯಕ್ರಿಯೆ ಜುಲೈ 9ರಂದು ಟೆಹ್ರಾನ್‌ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಉತ್ತರ ಪ್ರದೇಶದ ಪಂಡಿತ್ ವಿಜಯ್ (UP pandit viral speech) ಕುಮಾರ್ ಶರ್ಮಾ ಅವರ ಅಮೆರಿಕ ವಿರೋಧಿ ಭಾಷಣ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಕುದ್ಸ್ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಯಾಗ್‌ರಾಜ್ ಮೂಲದ ವಿಜಯ್ ಕುಮಾರ್ ಶರ್ಮಾ, ಅಮೆರಿಕವನ್ನು ಟೀಕಿಸಿ ಇರಾನ್‌ನ ಧೈರ್ಯವನ್ನು ಶ್ಲಾಘಿಸಿದ್ದರು. ಅಮೆರಿಕಕ್ಕೆ ಎಂದಿಗೂ ಹೆದರದ ದೇಶ ಇರಾನ್. ಜಗತ್ತು ಅಮೆರಿಕಕ್ಕೆ ತಕ್ಕ ಉತ್ತರ ನೀಡುವವರನ್ನು ಕಾಯುತ್ತಿತ್ತು. ಇರಾನ್‌ಗೆ ಧನ್ಯವಾದ ಹೇಳಬೇಕು.. ಇರಾನ್ ಅದನ್ನು ಮಾಡಿ ತೋರಿಸಿದೆ. ಆಯತೊಲ್ಲಾ ಅಲಿ ಖಮೇನಿ ಅವರು ಯಾವಾಗಲೂ ಬಡವರು ಮತ್ತು ಶೋಷಿತರ ಪರವಾಗಿ ನಿಂತ ನಾಯಕ ಎಂದು ಪ್ರಶಂಸಿಸಿದ್ದರು.
ಈ ಭಾಷಣ ವೈರಲ್ ಆದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಭಾರತವು ಇರಾನ್‌ಗೆ ಸಂಪೂರ್ಣ ಬೆಂಬಲ ನೀಡಬೇಕೇ ಅಥವಾ ಸಮತೋಲಿತ ನಿಲುವು ಕಾಯ್ದುಕೊಳ್ಳಬೇಕೇ ಎಂಬ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.ಇದನ್ನೂ ಓದಿ: EV ಬಸ್‌ಗಳಿಂದ ಸಾಲು ಸಾಲು ಅಪಘಾತ – ಹೊಸ ಎಲೆಕ್ಟ್ರಿಕ್ ಬಸ್ ಖರೀದಿಗೆ ತಾತ್ಕಾಲಿಕ ಬ್ರೇಕ್
ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್, ಸಂಸದ ಪವನ್ ಖೇರಾ, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಜಮ್ಮು ಮತ್ತು ಕಾಶ್ಮೀರದ ಅಧ್ಯಕ್ಷೆ ಅಂಜುಮಾನ್-ಎ-ಶರೀ ಶಿಯಾನ್, ಆಗಾ ಸೈಯದ್ ಹಸನ್ ಮೊಸಾವಿ ಅಲ್ ಸಫಾವಿ, ಕೇಂದ್ರ ರಾಜ್ಯ ಸಚಿವೆ ಪವಿತ್ರಾ ಮಾರ್ಗರಿಟಾ ಮತ್ತು ಬಿಹಾರ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಸರ್ಕಾರ ಮತ್ತು ಭಾರತದ ಜನರ ಪರವಾಗಿ ಗೌರವ ಸಲ್ಲಿಸಿದರು.ಇದನ್ನೂ ಓದಿ: ರಾಮಮಂದಿರ ದೇಣಿಗೆ ಹಗರಣ – 5 ಕೋಟಿ ಮೌಲ್ಯ, 147 ಕೆಜಿ ತೂಕದ ಚಿನ್ನ ಲೇಪಿತ ʻರಾಮಚರಿತಮಾನಸʼ ಪುಸ್ತಕ ನಾಪತ್ತೆ
कुद्स दिवस के एक कार्यक्रम में पंडित विजय कुमार शर्मा का एक वीडियो वायरल हो गया है, जिसमें उन्होंने अमेरिकी प्रभाव के खिलाफ ईरान के प्रतिरोध का समर्थन किया है. अपने भाषण में उन्होंने कहा कि बहुत से लोग लंबे समय से किसी ऐसे व्यक्ति का इंतजार कर रहे थे जो “अमेरिका को घुटनों पर ला… pic.twitter.com/HFdBU9csKX
— State Mirror Hindi (@statemirrornewz) July 4, 2026
