LatestLeading NewsMain PostNational

ತಮಿಳುನಾಡಿನಲ್ಲಿ ಭೀಕರ ಮಳೆಗೆ ಇಬ್ಬರು ಬಲಿ- 7 ಜಿಲ್ಲೆಯ ಶಾಲಾ, ಕಾಲೇಜಿಗೆ ರಜೆ

ಚೆನ್ನೈ: ಮಂಗಳವಾರ ರಾತ್ರಿ ತಮಿಳುನಾಡಿನಾದ್ಯಂತ (Tamil Nadu) ಸುರಿದ ಭಾರೀ ಮಳೆಯ (Rain) ಪರಿಣಾಮ ಚೆನ್ನೈನಲ್ಲಿ (Chennai) ಇಬ್ಬರು ಸಾವನ್ನಪ್ಪಿದ್ದಾರೆ. ಭೀಕರ ಮಳೆಗೆ ಹಲವೆಡೆ ಪ್ರದೇಶಗಳು ಜಲಾವೃತಗೊಂಡಿದೆ. ತಮಿಳುನಾಡು ಸರ್ಕಾರ ಬುಧವಾರ ಬೆಳಗ್ಗೆ 7 ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ಕಳೆದ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಮನೆಯೊಂದರ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ವ್ಯಕ್ತಿ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಚೆನ್ನೈ, ತಿರುವಳ್ಳೂರು, ರಾಣಿಪೇಟ್ ಸೇರಿದಂತೆ 7 ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ತಮಿಳುನಾಡು ಸರ್ಕಾರ ರಜೆ ಘೋಷಿಸಿದೆ.

ನಿನ್ನೆ ಬೆಳಗ್ಗೆ 8:30 ರಿಂದ ಇಂದು ಮುಂಜಾನೆ 5:30ರ ವರೆಗೆ ಚೆನ್ನೈನಲ್ಲಿ 126.1 ಮಿಮೀ ಮಳೆಯಾಗಿದೆ. ಮಳೆಯ ಹಿನ್ನೆಲೆಯಲ್ಲಿ 2 ಸುರಂಗಮಾರ್ಗಗಳನ್ನು ಮುಚ್ಚಲಾಗಿದೆ. ಭಾರೀ ಮಳೆಯಿಂದಾಗಿ ನಗರದಲ್ಲಿ ಸಂಚಾರ ದಟ್ಟಣೆ ಹಾಗೂ ವಾಹನಗಳ ನಿಧಾನಗತಿಯ ಸಂಚಾರವೂ ಉಂಟಾಗಿದೆ. ಇದನ್ನೂ ಓದಿ: ರೇಣುಕಾಚಾರ್ಯ ಸೋದರನ ಪುತ್ರ ನಾಪತ್ತೆ ಪ್ರಕರಣ- ಕಾರಿನಲ್ಲಿ ಹೋಗ್ತಿರೋ ಸಿಸಿಟಿವಿ ದೃಶ್ಯ ಲಭ್ಯ

ಬುಧವಾರ ಮಳೆ ಕಡಿಮೆಯಾದರೂ, ಚೆನ್ನೈ, ಚೆಂಗಲ್ಪಟ್ಟು, ತಿರುವಳ್ಳೂರು ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ!

Live Tv

Leave a Reply

Your email address will not be published. Required fields are marked *

Back to top button