ಕಾಬೂಲ್: ಅಲ್‌ಖೈದಾ ಮುಖ್ಯಸ್ಥ ಆಯ್ಮನ್ ಅಲ್ ಝವಾಹಿರಿಯ ಹತ್ಯೆಯನ್ನು ತಾಲಿಬಾನ್ ದೃಢಪಡಿಸಿದ್ದು, ಕಾಬೂಲ್‌ನಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಗೆ ಖಂಡನೆ ವ್ಯಕ್ತಪಡಿಸಿದೆ.
ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಪ್ರತಿಕ್ರಿಯಿಸಿದ್ದು, ರಾಜಧಾನಿಯ ನಿವಾಸದ ಮೇಲೆ ದಾಳಿ ನಡೆದಿದೆ. ಇದು ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಎಂದು ಖಂಡಿಸಿದ್ದಾರೆ. ಟೋಲೋ ನ್ಯೂಸ್ ಪ್ರಕಾರ, ಭಾನುವಾರ ಮುಂಜಾನೆ ಕಾಬೂಲ್‌ನಲ್ಲಿ ದೊಡ್ಡ ಸ್ಫೋಟವೊಂದು ಪ್ರತಿಧ್ವನಿಸಿತು. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥ ಝವಾಹಿರಿ ಹತ್ಯೆ- ಮೋಸ್ಟ್ ವಾಂಟೆಡ್ ಉಗ್ರನ ಮೇಲೆ ಡ್ರೋಣ್ ಸ್ಟ್ರೈಕ್
Advertisement
Advertisement
ಶೆರ್ಪೂರ್‌ನಲ್ಲಿ ಮನೆಯೊಂದಕ್ಕೆ ರಾಕೆಟ್ ಅಪ್ಪಳಿಸಿತು. ಮನೆ ಖಾಲಿಯಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಾಕೋರ್ ಈ ಹಿಂದೆ ಹೇಳಿದ್ದರು.
Advertisement
Advertisement
ಸೋಮವಾರ ದೂರದರ್ಶನದ ಭಾಷಣದಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು, ಯುಎಸ್ ನಡೆಸಿದ ಡ್ರೋನ್ ದಾಳಿಯಲ್ಲಿ ಅಲ್‌ಖೈದಾ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿ ಹತ್ಯೆಯಾಗಿದ್ದಾನೆ. ನ್ಯಾಯ ಸಿಕ್ಕಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದ ಉಲ್ಲಂಘಿಸಿದೆ: ಆಂಟನಿ ಬ್ಲಿಂಕೆನ್
ಝವಾಹಿರಿ ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ. 2001ರ ಸೆಪ್ಟೆಂಬರ್ 11ರಂದು ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಅಫ್ಘಾನಿಸ್ತಾನದಿಂದ US ಮಿಲಿಟರಿ ವಾಪಸ್ ತೆಗೆದುಕೊಂಡ ನಂತರ ತಾಲಿಬಾನ್ ಆ ದೇಶವನ್ನು ವಶಕ್ಕೆ ಪಡೆಯಿತು. ಆಗಿನಿಂದಲೂ ಝವಾಹಿರಿ ಹತ್ಯೆ ಉದ್ದೇಶವನ್ನು ಅಮೆರಿಕ ಹೊಂದಿತ್ತು.