– ಮತದಾನದ ಹಕ್ಕು ಇಲ್ಲದಿದ್ರೆ ನೋ ಗ್ಯಾರಂಟಿ
– ಮನೆಯ ಯಜಮಾನಿಗಷ್ಟೇ ಗೃಹಲಕ್ಷ್ಮಿ ಹಣ
ಬೆಂಗಳೂರು: ಗ್ಯಾರಂಟಿ (Congress Guarantee) ಕಳ್ಳಾಟಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಗೃಹಲಕ್ಷ್ಮಿ (Gruha Lakshmi), ಗೃಹಜ್ಯೋತಿ (Gruha Jyothi Scheme) ಗ್ಯಾರಂಟಿ ಬೇಕಂದ್ರೆ ಹೊಸ ಅರ್ಜಿ ಸಲ್ಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗೆ ಮರು ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರತಿ ಸಿದ್ಧವಾಗಿದೆ. ಹಣಕಾಸು ಇಲಾಖೆ ಮತ್ತು ಇ-ಗೌರ್ನೆನ್ಸ್‌ಗೆ ಅರ್ಜಿ ಪ್ರತಿ ರವಾನೆ ಮಾಡಲಾಗಿದೆ. ಸರ್ಕಾರದ ಮುಖ್ಯಮಂತ್ರಿಗಳು ಅರ್ಜಿ ಪರಿಶೀಲಿಸಿ ಓಕೆ ಮಾಡಿದ್ರೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು. ಅರ್ಜಿಯಲ್ಲಿ ಯಾವೆಲ್ಲ ಪ್ರಶ್ನೆಗಳನ್ನ ಆ್ಯಡ್ ಮಾಡಬೇಕು ಅಂತಾ ಮುಖ್ಯಮಂತ್ರಿಗಳು ನಿರ್ಧಾರ ಮಾಡಲಿದ್ದಾರೆ. 2023ರ ಗೃಹಲಕ್ಷ್ಮಿ ಯೋಜನೆ ಅರ್ಜಿಯನ್ನೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2023ರ ಅರ್ಜಿಯಲ್ಲಿ ಇದ್ದ ಪ್ರಶ್ನೆಗಳ ಜೊತೆಗೆ ಹೊಸ ಪ್ರಶ್ನೆಗಳು ಆ್ಯಡ್ ಆಗಲಿವೆ. ಇದನ್ನೂ ಓದಿ: ಗ್ಯಾರಂಟಿ ದುರ್ಬಳಕೆ ತಡೆಗೆ ಸ್ಮಾರ್ಟ್‌ಕಾರ್ಡ್ – ಲಂಚ ಕೇಳಿದ್ರೆ ದೂರು ನೀಡಲು ನಂಬರ್ ಡಿಸ್‌ಪ್ಲೇ
ಹೊಸ ಅರ್ಜಿಯಲ್ಲಿ ಏನೆಲ್ಲ ಪ್ರಶ್ನೆಗಳು?
* ಮನೆ ಯಜಮಾನಿ ಯಾರು? ಆಧಾರ್ ಸಂಖ್ಯೆ ಏನು?
* ಮನೆಯ ಯಜಮಾನಿ ಬ್ಯಾಂಕ್ ಖಾತೆ ವಿವರ
* ಈ ಹಿಂದೆ ಮನೆಯಲ್ಲಿ ಎಷ್ಟು ಸದಸ್ಯರಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತಿತ್ತು
* ಯಾವ ಜಾತಿ?
* ಮನೆಯ ಪತಿಯ ಹೆಸರು? ಆಧಾರ್ ಸಂಖ್ಯೆ?
* ಆಧಾರ್ ಕಾರ್ಡ್ ದಾಖಲಾತಿ ಸಲ್ಲಿಕೆ ಮಾಡಬೇಕು
* ನೀವು ಐಟಿ ಮತ್ತು ಜಿಎಸ್‌ಟಿ ಪಾವತಿದಾರರ?
* ನಿಮ್ಮ ಬಳಿ APL ಕಾರ್ಡ್ ಅಥವಾ BPL ಕಾರ್ಡ್ ಇದೆಯಾ?
* ನಿಮ್ಮದು ಎಪಿಎಲ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್?
ಮುಂದಿನ ಚುನಾವಣೆ ಗುರಿಯಾಗಿ ಇಟ್ಟುಕೊಂಡು ಅರ್ಜಿ ಸಲ್ಲಿಕೆ ಜವಾಬ್ದಾರಿಯನ್ನು ಗ್ಯಾರಂಟಿ ಅನುಷ್ಠಾನ ಸಮಿತಿಗೆ ಕೊಡುವ ಸಾಧ್ಯತೆ ಇದೆ. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಪದಾಧಿಕಾರಿಗಳು ಜನರ ಬಳಿಗೆ ತೆರಳಿ ಮ್ಯಾನ್ಯುಯಲ್ ಆಗಿ ಅರ್ಜಿ ಕಲೆಕ್ಟ್ ಮಾಡಿ ಸೇವಾಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಮಾಡಿಸಬಹುದು. ಇದನ್ನೂ ಓದಿ: ಮಾರ್ಕ್ಸ್ ಕಾರ್ಡ್ ದಂಧೆಯ ಸ್ಫೋಟಕ ಸತ್ಯ ಬಯಲು – ಕೃಷ್ಣದೇವರಾಯ ವಿವಿ ಕುಲಪತಿ ಮುಂದೆಯೇ ಮಧ್ಯವರ್ತಿ ಆಡಿಯೋ ಬಾಂಬ್!
ಹಳೆಯ ಅರ್ಜಿಯನ್ನೇ ಹಣಕಾಸು ಇಲಾಖೆಗೆ ಸಲ್ಲಿಕೆ ಮಾಡಲಾಗಿದೆ. ಹಣಕಾಸು ಇಲಾಖೆ ಈ ಅರ್ಜಿಯಲ್ಲಿ ಮತ್ತಷ್ಟು ಪ್ರಶ್ನೆಗಳನ್ನ ಸೇರಿಸುವ ಸಾಧ್ಯತೆ ಇದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೂತನ ಸಚಿವರು ಬಂದ ಬಳಿಕ ಅರ್ಜಿ ಸಲ್ಲಿಕೆಗೆ ಅವಕಾಶ ಇರಲಿದೆ. ಖಾತೆ ಹಂಚಿಕೆ ಆದ ಬಳಿಕ ಅರ್ಜಿ ಸಲ್ಲಿಕೆಗೆ ಅವಕಾಶ ಕೊಡಲಿದ್ದಾರೆ.
