ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಆಸ್ತಿ ವಿವಾದದ (Property Dispute) ಹಿನ್ನೆಲೆ 6 ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಗೂ ಗುಂಡು ಹಾರಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಚಡಚಣ (Chadchan) ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಈ ಭೀಕರ ಕೊಲೆ ನಡೆದಿದೆ. ನಿರಾಳೆ ಹಾಗೂ ಗೊಳಗಿ ಕುಟುಂಬಗಳ ನಡುವೆ ಜಮೀನು ವ್ಯಾಜ್ಯವಿತ್ತು. ಇದೇ ಕಾರಣಕ್ಕೆ ಈ ಹತ್ಯೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: 20 ಲಕ್ಷ ಮೌಲ್ಯದ ಷೇರಿಗಾಗಿ ತ್ವಿಶಾ ಶರ್ಮಾಗೆ ಕಿರುಕುಳ ನೀಡಿದ್ರಾ ಅತ್ತೆ ನಿವೃತ್ತ ಜಡ್ಜ್?
ಕೊಲೆಯಾದವರು: ಎರಡು ಕುಟುಂಬಗಳ ಗಲಾಟೆಯಯಲ್ಲಿ ಚಡಚಣ ಪಟ್ಟಣ ಪಂಚಾಯಿತಿಯ ಸದಸ್ಯ ಚೇತನ ನಿರಾಳೆ, ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ, ಶಬ್ಬಿರ್ ನದಾಫ್ ಹತ್ಯೆಯಾಗಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ| ಯಾತ್ರಾರ್ಥಿ ವೃದ್ಧೆಗೆ ಪ್ರಜ್ಞೆ ತಪ್ಪುವ ಪದಾರ್ಥ ನೀಡಿ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ
ವಿವಾದಿತ ಜಮೀನಿಗಾಗಿ ಸಾಲು ಸಾಲು ಹೆಣ ಬಿದ್ದಿವೆ. ಕೊಲೆಯಾದವರಲ್ಲಿ ಐವರು ಒಂದೇ ಕುಂಟುಂದವರು ಸೇರಿದ್ದಾರೆ. ಮತ್ತೋರ್ವ ಇವರ ಕುಂಟುಂಬದ ಆಪ್ತ ಎಂದು ತಿಳಿದು ಬಂದಿದೆ. ಗೋವಿಂದಪುರ ಗ್ರಾಮದ ಜಮೀನಲ್ಲಿ ಈ ಹತ್ಯಾಕಾಂಡ ನಡೆದಿದೆ.
ಮೊದಲು ಗುಂಡು ಹಾರಿಸಿ ನಂತರ ಮಾರಾಕಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಅಪ್ಪುಗೌಡಾ ಎಂಬವರಿಂದ ಈ ಹತ್ಯೆ ನಡೆದಿರುವ ಶಂಕೆ ವ್ಯಕ್ತ ವಾಗಿದ್ದು, ಸ್ಥಳಕ್ಕೆ ಚಡಚಣ ಪೊಲೀಸರು ಹಾಗೂ ಎಸ್‌ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
