ಟಾಲಿವುಡ್ ನಟ ಜೂ.ಎನ್‌ಟಿಆರ್ (Jr NTR) ತುರ್ತಾಗಿ ಆಗಸ್ಟ್ 12ರಂದು ಭುಜದ ಶಸ್ತ್ರಚಿಕಿತ್ಸೆಗೆ (Shoulder Surgery) ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆಯೂ ಯಶಸ್ವಿಯಾಗಿದ್ದು ಈಗ ವಿಶ್ರಾಂತಿಯಲ್ಲಿದ್ದಾರೆ ಅನ್ನೋದು ತಿಳಿದುಬಂದಿದೆ. ಈ ವಿಚಾರವನ್ನು ಅಧಿಕೃತ ಪಿಆರ್ ಟೀಮ್ ಮಾಧ್ಯಮಕ್ಕೆ ಬಹಿರಂಗ ಪಡಿಸಿದ್ದಾರೆ.
ಕಳೆದೊಂದು ತಿಂಗಳ ಹಿಂದೆ `ಡ್ರ್ಯಾಗನ್’ ಚಿತ್ರದ ಸಾಹಸದೃಶ್ಯ ಚಿತ್ರೀಕರಣ ವೇಳೆ ಜೂ.ಎನ್‌ಟಿಆರ್ ಗಾಯಗೊಂಡಿದ್ದರು. ಭುಜಕ್ಕೆ ಏಟಾಗಿತ್ತು. ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ವೈದ್ಯರು 6 ರಿಂದ 8 ವಾರಗಳ ಕಾಲ ವಿಶ್ರಾಂತಿ ಘೋಷಿಸಿದ್ದರು. ಆದರೆ ಯಾವುದೇ ಪರಿಣಾಮ ಬೀರದ ಕಾರಣಕ್ಕೆ ಇದೀಗ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂದಿದೆ ಅನ್ನೋದು ತಿಳಿದುಬಂದಿದೆ. ಭುಜದ ಮೂಳೆಗೆ ಬಲವಾಗಿ ಏಟಾಗಿತ್ತು ಎಂದು ವರದಿಯಾಗಿದೆ. ಹೀಗಾಗಿ ಇನ್ನೂ ಅನೇಕ ವಾರಗಳು ಜೂ.ಎನ್‌ಟಿಆರ್ ಮನೆಯಲ್ಲೇ ವಿಶ್ರಾಂತಿ ಪಡೆಯೋದು ತೀರಾ ಅತ್ಯಾವಷ್ಯಕ.
ಪ್ರಶಾಂತ್ ನೀಲ್ ನಿರ್ದೇಶನದ `ಡ್ರ್ಯಾಗನ್’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಶೂಟಿಂಗ್ ಕೊನೆಯ ಹಂತ ತಲುಪಿತ್ತು. ಈ ವೇಳೆ ನಾಯಕ ನಟನಿಗೆ ಅಪಘಾತವಾಗಿದ್ದು ಸಿನಿಮಾ ತಡವಾಗೋದರ ಸೂಚನೆಯಾಗಿದೆ. ಜೂ.ಎನ್‌ಟಿಆರ್ ಮೊದಲಿನಂತಾಗಲು ಸಮಯ ಹಿಡಿಯಬಹುದು.

