ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯ (Strait of Hormuz) ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ.
ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಅಮೆರಿಕದ ನೌಕಾ ದಿಗ್ಬಂಧನದ ಯಶಸ್ಸನ್ನು ಶ್ಲಾಘಿಸಿದ್ದಾರೆ. ಅದು ಉಕ್ಕಿನ ಗೋಡೆ. ಇರಾನ್ ಅದಕ್ಕೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಟ್ರಂಪ್ ಮಾತನಾಡಿದ್ದಾರೆ. ಇದನ್ನೂ ಓದಿ: ಬೆದರಿಕೆ ಕಾರಣದಿಂದ ರಹಸ್ಯ ವಿಮಾನದಲ್ಲಿ ಪ್ರಯಾಣ: ಟ್ರಂಪ್
ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಹೊಂದಿದೆ. ನಾವು ಅದನ್ನು ಉಳಿಸಿಕೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ! ನಮ್ಮ ನೌಕಾ ದಿಗ್ಬಂಧನವನ್ನು ಎಲ್ಲರೂ ‘ಉಕ್ಕಿನ ಗೋಡೆ’ ಎಂದು ಕರೆಯುತ್ತಿದ್ದಾರೆ. ಇರಾನ್ ಅದನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಟ್ರಂಪ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇರಾನ್‌ಗೆ ನೌಕಾಪಡೆ ಮತ್ತು ವಾಯುಪಡೆ ಇಲ್ಲ. ಅವರ ಸೈನಿಕರಿಗೆ ವೇತನವಿಲ್ಲ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಧ್ವಂಸಗೊಂಡು ಪಲಾಯನ ಮಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ರಷ್ಯಾ-ಭಾರತ ನಡುವೆ ಹೊಸ ರೈಲು ಮಾರ್ಗದ ಪ್ಲ್ಯಾನ್; ಪಾಕ್, ಅಫ್ಘಾನ್ ಮೂಲಕ ಹಿಂದೂ ಮಹಾಸಾಗರಕ್ಕೆ ಸಂಪರ್ಕ
ಇರಾನ್ ಸುಳ್ಳು ಸುದ್ದಿ ಹರಡುತ್ತಿದೆ. ಅವರಲ್ಲಿ 300% ಹಣದುಬ್ಬರವಿದ್ದು, ಇನ್ನಷ್ಟು ಹದಗೆಡುತ್ತಿದೆ! ಇರಾನ್ ಕೇವಲ ಮಾತು. ಅದರಿಂದ ಯಾವುದೇ ಕ್ರಮವಿಲ್ಲ. ಮಧ್ಯಪ್ರಾಚ್ಯದ ಗೂಂಡಾ ಇನ್ನು ಮುಂದೆ ಇರುವುದಿಲ್ಲ. ಅಲ್ಲಾಹನಿಗೆ ಸ್ತುತಿ ಎಂದು ಟ್ರಂಪ್ ಟಾಂಗ್ ಕೊಟ್ಟಿದ್ದಾರೆ.

