ವಾಷಿಂಗ್ಟನ್: ಇರಾನ್(Iran) ದೇಶದಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ, ಕಳೆದ ತಿಂಗಳು ಟರ್ಕಿಯಿಂದ ನಿರ್ಗಮಿಸುವಾಗ ಸೀಕ್ರೆಟ್ ಸರ್ವಿಸ್ ಹಾಗೂ ಸೇನಾಧಿಕಾರಿಗಳ ಸಲಹೆಯಂತೆ ತಾವು ರಹಸ್ಯವಾಗಿ ವಿಮಾನ ಬದಲಾಯಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸ್ಪಷ್ಟಪಡಿಸಿದ್ದಾರೆ.
ರಹಸ್ಯವಾಗಿ ವಿಮಾನ ಬದಲಾಯಿಸಿದ ವಿಚಾರಕ್ಕೆ ಕೇಳಿದ ಪ್ರಶ್ನೆಗೆ, ಸೀಕ್ರೆಟ್ ಸರ್ವಿಸ್(Secret Service) ಮತ್ತು ಸೇನೆ ಹೇಳಿದ ಹಾಗೆ ನಾನು ಕೇಳಿದ್ದೇನೆ. ಅವರು ನನ್ನನ್ನು ಬೇರೊಂದು ವಿಮಾನದಲ್ಲಿ ಕರೆದೊಯ್ಯಲು ಬಯಸಿದ್ದರು. ಅಪಾಯ ಇರಬಹುದು ಎಂದು ಅವರು ಹೇಳಿದ್ದಕ್ಕೆ ನಾನು ಅವರ ಸೂಚನೆ ಪಾಲಿಸಿದೆ. ನನಗೆ ಬೆದರಿಕೆಗಳು ಬರುವುದು ಹೊಸದೇನಲ್ಲ, ಹಾಗಾಗಿ ಅದರ ಬಗ್ಗೆ ಹೆಚ್ಚು ಪ್ರಶ್ನೆ ಮಾಡಲು ಹೋಗಲಿಲ್ಲ ಎಂದು ಉತ್ತರಿಸಿದರು.
ನ್ಯಾಟೋ ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ಟರ್ಕಿಯಲ್ಲಿ(Turkey) ಕ್ಯಾಮೆರಾಗಳ ಮುಂದೆ ಹಳೆಯ ‘ಏರ್ ಫೋರ್ಸ್ ಒನ್’ ವಿಮಾನವೇರಿದ ಟ್ರಂಪ್, ಆ ಬಳಿಕ ವಿಮಾನ ನಿಲ್ದಾಣದ ಕ್ಯಾಟರಿಂಗ್ ಟ್ರಕ್ ಮೂಲಕ ರಹಸ್ಯವಾಗಿ ‘C-32A’ ಮಿಲಿಟರಿ ವಿಮಾನಕ್ಕೆ ತೆರಳಿದ್ದರು. ಇದನ್ನೂ ಓದಿ: ಟರ್ಕಿಯಿಂದ ರಹಸ್ಯ ವಿಮಾನದಲ್ಲಿ ಪ್ರಯಾಣಿಸಿದ್ದ ಟ್ರಂಪ್!
.@POTUS: “I have a lot of threats that you don’t know about. Any consequential President has a lot of threats. Non-consequential Presidents don’t get threatened — and I think that I’m maybe the most consequential President.” 🔥 https://t.co/UBAPgiR4P8 pic.twitter.com/YKFQjmxN3V
— Rapid Response 47 (@RapidResponse47) August 12, 2026
ಟ್ರಂಪ್ ಪ್ರಯಾಣಿಸುವ ವಿಮಾನದ ಮೇಲೆ ಇರಾನ್ ಬೆಂಬಲಿತ ಪಡೆಗಳು ಕ್ಷಿಪಣಿ ಮೂಲಕ ದಾಳಿ ನಡೆಸಲು ಸಂಚು ರೂಪಿಸಿವೆ ಎಂಬ ಮಾಹಿತಿ ಇಸ್ರೇಲ್ ಗುಪ್ತಚರ ಇಲಾಖೆಯಿಂದ ಅಮೆರಿಕಕ್ಕೆ ತಲುಪಿತ್ತು.
ಏರ್ ಫೋರ್ಸ್ ಒನ್ ವಿಮಾನದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಿಬ್ಬಂದಿಗೆ ಕಿಟಕಿಗಳ ಪರದೆಗಳನ್ನು ಮುಚ್ಚುವಂತೆ ಸೂಚಿಸಲಾಗಿತ್ತು. ಅಧ್ಯಕ್ಷರು ಅದೇ ವಿಮಾನದಲ್ಲಿದ್ದಾರೆ ಎಂದೇ ಉಳಿದವರು ಭಾವಿಸಿದ್ದರು.
ಟ್ರಂಪ್ ಪ್ರಯಾಣಿಸಿದ ಸಣ್ಣ ಮಿಲಿಟರಿ ವಿಮಾನವು ರಾತ್ರಿ 10:20 ಕ್ಕೆ ಬ್ರಿಟನ್ ತಲುಪಿದರೆ, ಕೆಲವು ನಿಮಿಷಗಳ ನಂತರ ಹಳೆಯ ಏರ್ ಫೋರ್ಸ್ ಒನ್ ವಿಮಾನವೂ ಅಲ್ಲಿಗೆ ಬಂದು ತಲುಪಿತ್ತು.
ಮಾಜಿ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ 2000 ಇಸ್ವಿಯಲ್ಲಿ ಪಾಕಿಸ್ತಾನಕ್ಕೆ ತೆರಳುವಾಗಲೂ ಭದ್ರತಾ ಕಾರಣಗಳಿಂದಾಗಿ ಇದೇ ರೀತಿಯ ರಹಸ್ಯ ತಂತ್ರವನ್ನು ಬಳಸಲಾಗಿತ್ತು.

