CinemaLatestLeading NewsMain PostSouth cinema

‘ಪ್ಯಾನ್ ಇಂಡಿಯಾ’ – ಸಿನಿಮಾಗಳಿಗೆ ಅಗೌರವ ತೋರುವ ಪದ, ಇದನ್ನು ತೆಗೆದುಹಾಕಬೇಕು: ಸಿದ್ಧಾರ್ಥ್

- 'ಕೆಜಿಎಫ್' ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ

– ಕಂಟೆಂಟ್ ಚೆನ್ನಾಗಿದ್ದರೆ ಅದಕ್ಕೆ ಹೆಸರಿಡಬೇಕಾಗಿಲ್ಲ

ಕ್ಷಿಣ ಭಾರತದ ಸಿನಿಮಾಗಳು ಇಡೀ ವಿಶ್ವವೇ ತಮ್ಮ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡುತ್ತಿವೆ. ದಕ್ಷಿಣ ಸಿನಿಮಾಗಳು ಸೂಪರ್‌ಹಿಟ್‌ ಸಿನಿಮಾಗಳಾಗಿ ಹೊರಹೊಮ್ಮುತ್ತಿವೆ. ಅದಕ್ಕೆ ಈಗ ಸಿನಿಮಾರಂಗದಲ್ಲಿ ‘ಪ್ಯಾನ್ ಇಂಡಿಯಾ ಸ್ಟಾರ್’ ಎಂಬ ಪದ ಫುಲ್ ಫೇಮಸ್ ಆಗಿದೆ. ಎಲ್ಲ ನಟರು ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ನಮ್ಮದಾಗಿಸಿಕೊಳ್ಳಬೇಕು ಎಂದು ಗಮನಹರಿಸುತ್ತಿದ್ದಾರೆ. ಆದರೆ ಬಹುಭಾಷಾ ನಟ ಸಿದ್ಧಾರ್ಥ್ ‘ಪ್ಯಾನ್-ಇಂಡಿಯನ್’ ಪದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Siddharth Slams Trolls Abusing His Mother: "My Country, My Religion... All Hacked By A Bunch Of Pitiful Woman-Hating Crowds"

ನಟ ಸಿದ್ಧಾರ್ಥ್ ಹಿಂದಿ ಸೇರಿದಂತೆ ಐದಕ್ಕೂ ಹೆಚ್ಚು ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ದೇಶದ ಎರಡು ಜನಪ್ರಿಯ ಚಲನಚಿತ್ರೋದ್ಯಮಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಸಂದರ್ಶನವೊಂದರಲ್ಲಿ ‘ಪ್ಯಾನ್-ಇಂಡಿಯನ್’ ಕುರಿತು ಮಾತನಾಡಿದ ಅವರು, ಚಿತ್ರರಂಗದಲ್ಲಿ ಇತ್ತೀಚೆಗೆ ಬಳಕೆಯಾಗುತ್ತಿರುವ ಪ್ಯಾನ್ ಇಂಡಿಯನ್ ಪದ ಸಿನಿಮಾಗಳಿಗೆ ಅಗೌರವ ತೋರುವ ಪದ. ಏಕೆಂದರೆ ಪ್ರಾದೇಶಿಕ ಸಿನಿಮಾ ಎಂದರೆ ಬಾಲಿವುಡ್‍ನಿಂದ ಬಂದ ಭಾರತೀಯ ಚಲನಚಿತ್ರ ಎಂದು ವಿವರಿಸಲು ಈ ಪದವನ್ನು ಬಳಸಲಾಗುತ್ತಿದೆ. ಅದು ಅಸಂಬದ್ಧ! ಎಲ್ಲ ಚಲನಚಿತ್ರಗಳು ಭಾರತೀಯ ಚಲನಚಿತ್ರಗಳೇ ಆಗಿರುತ್ತೆ ಎಂದು ಬೇಸರಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಯನ್ನು ಬದಲಾಯಿಸಲು RSS ಹೊರಟಿದೆ: ಸಿದ್ದು 

ಕೆಜಿಎಫ್’ ಭಾರತೀಯ ಚಿತ್ರ
15 ವರ್ಷಗಳ ಹಿಂದೆ ಪ್ಯಾನ್ ಇಂಡಿಯನ್ ಸಿನಿಮಾ ಇರಲಿಲ್ಲ. ಭಾರತೀಯ ಸಿನಿಮಾ ಭಾರತೀಯ ಸಿನಿಮಾ ಅಷ್ಟೇ ಆಗಿತ್ತು. ನನ್ನ ಬಾಸ್ ಮಣಿರತ್ನಂ ‘ರೋಜಾ’ ಎಂಬ ಚಲನಚಿತ್ರವನ್ನು ಮಾಡಿದರು. ಅದನ್ನು ಭಾರತದಲ್ಲಿ ಎಲ್ಲರೂ ನೋಡಿದರು. ಅದನ್ನು ನೋಡಿ ‘ಪ್ಯಾನ್ ಇಂಡಿಯನ್’ ಸಿನಿಮಾ ಎಂದು ಯಾರೂ ಹೇಳಿರಲಿಲ್ಲ. ಇಂದು ಬೆಂಗಳೂರಿನ ನನ್ನ ಸ್ನೇಹಿತರು ‘ಕೆಜಿಎಫ್’ ಮಾಡಿದ್ದಾರೆ. ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ‘ಕೆಜಿಎಫ್’ ಭಾರತೀಯ ಚಿತ್ರ. ಅದೊಂದು ಕನ್ನಡ ಚಿತ್ರ. ನೀವು ಯಾವುದೇ ಭಾಷೆಯಲ್ಲಿ ಇದನ್ನು ವೀಕ್ಷಿಸಬಹುದು. ಆದರೆ ಇದು ಕನ್ನಡ ಇಂಡಸ್ಟ್ರಿ ಮಾಡಿದ ಭಾರತೀಯ ಚಲನಚಿತ್ರವಾಗಿದೆ ಎಂದು ತಿಳಿಸಿದ್ದಾರೆ.

ನೀವು ನನ್ನನ್ನು ಕೇಳಿದರೆ ಪ್ಯಾನ್ ಇಂಡಿಯಾ ಪದವನ್ನು ತೆಗೆದುಹಾಕಬೇಕು. ಅದನ್ನು ಭಾರತೀಯ ಚಲನಚಿತ್ರ ಎಂದು ಕರೆಯಬೇಕು. ಇಲ್ಲದಿದ್ದರೆ ಅದು ಯಾವ ಭಾಷೆಯಲ್ಲಿದೆ ಎಂಬುದನ್ನು ಉಲ್ಲೇಖಿಸಿ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸ್ಟಾರ್‍ಡಮ್ ಕಂಡುಕೊಂಡಿರುವ ತಮಿಳು ನಟ ನಾನು. ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಹೋದ್ರೆ ನನ್ನನ್ನು ದಕ್ಷಿಣ ನಟ ಎಂದು ಕರೆಯುತ್ತಾರೆ. ದಕ್ಷಿಣ ಭಾರತದ ನಟನೆಂದೂ ಹೇಳುವುದಿಲ್ಲ. ಅದಕ್ಕೆ ನಾನು ಹೇಳುವುದು ಸಿನಿಮಾ ವಿಚಾರಕ್ಕೆ ಬಂದ್ರೆ ಅತ್ಯುತ್ತಮ ತಂತ್ರಜ್ಞರು, ಅತ್ಯುತ್ತಮ ಚಲನಚಿತ್ರಗಳನ್ನು ಮಾಡುತ್ತಾರೆ ಎಂದು ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ:  ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ

KGF 2 Yash (4)

ಒಳ್ಳೆಯ ಸಿನಿಮಾ ಮಾಡಲು ಯಾವುದೇ ಭಾಷೆಯಾದರೂ ಪರವಾಗಿಲ್ಲ. ಚೆನ್ನೈನ ದೊಡ್ಡ ತಂತ್ರಜ್ಞರು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ತೆಲುಗು ಚಿತ್ರರಂಗದ ದೊಡ್ಡ ನಿರ್ಮಾಪಕರು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಇಂದು ‘ಕೆಜಿಎಫ್’ನ ಮಹಾನ್ ಕನ್ನಡಿಗರು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಟೆಂಟ್ ಚೆನ್ನಾಗಿದ್ದರೆ ಅದಕ್ಕೆ ಹೆಸರಿಡಬೇಕಾಗಿಲ್ಲ. ಅದು ಎಲ್ಲೆಡೆ ಹೋಗುತ್ತದೆ ಎಂದಿದ್ದಾರೆ.

Leave a Reply

Your email address will not be published.

Back to top button