ತುಮಕೂರು: ಹಂಗಾಮಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಪಾವಗಡ ಮಾಜಿ ಶಾಸಕ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ (Venkataramanappa) ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಬೆಂಗಳೂರಿನ (Bengaluru) ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಇಂದು ಸಿದ್ದರಾಮಯ್ಯ ಅವರು ಪಾವಗಡಕ್ಕೆ ಆಗಮಿಸಿ, ಶ್ರದ್ಧಾಂಜಲಿ ಸಲ್ಲಿಸಿದರು. ಸಿದ್ದರಾಮಯ್ಯ ಅವರಿಗೆ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ರಾಜಣ್ಣ, ಜಮೀರ್ ಅಹ್ಮದ್, ಕೆ.ಜೆ.ಜಾರ್ಜ್, ಸಂಸದ ಗೋವಿಂದ ಕಾರಜೋಳ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ವೆಂಕಟರಮಣಪ್ಪ ಅಗಲಿಕೆಗೆ ಜಿ.ಪರಮೇಶ್ವರ್ ಕಂಬನಿ
ಹಿರಿಯ ಕಾಂಗ್ರೆಸ್ ನಾಯಕರು, ಮಾಜಿ ಸಚಿವರಾದ ಪಾವಗಡದ ವೆಂಕಟರಮಣಪ್ಪನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅಗಲಿದ ಆತ್ಮೀಯನಿಗೆ ಗೌರವ ನಮನ ಸಲ್ಲಿಸಿದೆ.
ಬಳಿಕ ವೆಂಕಟರಮಣಪ್ಪನವರ ಪುತ್ರ, ಶಾಸಕರು ಆದ ಹೆಚ್.ವಿ.ವೆಂಕಟೇಶ್ ಹಾಗೂ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದೇವರಲ್ಲಿ… pic.twitter.com/ZOrRNE6elg
— Siddaramaiah (@siddaramaiah) May 30, 2026
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೆಂಕಟರಮಣಪ್ಪನವರು ಹತ್ತು ದಿನಗಳ ಹಿಂದೆ ಚೆನ್ನಾಗಿ ಇದ್ರು. ವೈ.ಎನ್.ಹೊಸಕೋಟೆಯ ಬೀರಲಿಂಗೇಶ್ವರ ದೇವಾಲಯಕ್ಕೆ ಹಣ ಕೇಳೋಕೆ ರಾಜಣ್ಣ, ವೆಂಕಟೇಶ್, ವೆಂಕಟರಮಣಪ್ಪ ಬಂದಿದ್ರು. ಇಷ್ಟು ಬೇಗ ಕಾಲವಾಗ್ತಾರೆ ಅಂತಾ ಅಂದುಕೊಂಡಿರಲಿಲ್ಲ. ಈಗ ನಮ್ಮನ್ನೆಲ್ಲ ಅಗಲಿದ್ದಾರೆ. ನಾಲ್ಕು ಸಾರಿ ಶಾಸಕರಾಗಿ, ಎರಡು ಸಲ ಮಂತ್ರಿಯಾಗಿದ್ದರು. ಸಮಾಜದಲ್ಲಿನ ಕೆಳಸಮುದಾಯದ ಬಗ್ಗೆ ಅಪಾರ ಕಾಳಜಿ ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇಟ್ಟುಕೊಂಡಿದ್ದರು ಎಂದು ಭಾವುಕರಾದರು.

ವೆಂಕಟರಮಪ್ಪನಿಗೆ ನನ್ನ ಕಂಡ್ರೆ ಅಪಾರವಾದ ಪ್ರೀತಿ, ಅಭಿಮಾನ. ಅವರು ನಮ್ಮನ್ನು ಬಿಟ್ಟು ಅಗಲಿರೋದು ವೈಯಕ್ತಿಕವಾಗಿ ನಮಗೆ ನಷ್ಟ ಆಗಿದೆ. ಯಾವಾಗಲೂ ಅವರು ಅಹಿಂದ ವರ್ಗದ ಪರ ಇದ್ದವರು. ಸಚಿವರಾಗಿ, ಶಾಸಕರಾಗಿ ಸಾಮಾಜಿಕ ನ್ಯಾಯವನ್ನ ಎತ್ತಿ ಹಿಡಿದಂತಹವರು. ಅವರು ಸ್ವತಃ ರೈತರು ರೈತರ ಪರವಾಗಿ ಅಪಾರ ಕಾಳಜಿ ಇತ್ತು. ಅಂತಹವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಸಾವಿನಿಂದ ಕರ್ನಾಟಕ ರಾಜ್ಯಕ್ಕೆ ಅಪಾರ ನಷ್ಟವಾಗಿದೆ. ಇನ್ಮೂ ಹತ್ತು ವರ್ಷ ಇರ್ತಾರೆ ಅಂದುಕೊಂಡಿದ್ದೇ ನಾನು. ಈಗ ನಮ್ಮನ್ನ ಬಿಟ್ಟು ಅಗಲಿದ್ದಾರೆ. ಕಳೆದ ಬಾರಿ ಅವರು ಚುನಾವಣೆಗೆ ನಿಲ್ಲದೇ ಮಗನನ್ನು ನಿಲ್ಲಿಸಿ, ಗೆಲ್ಲಿಸಿದರು. ವೆಂಕಟರಮಣಪ್ಪ ರೀತಿ ಮಗ ಪ್ರಾಮಾಣಿಕ ಪ್ರಯತ್ನ ಮಾಡ್ತಾರೆ ಅಂದುಕೊಂಡಿದ್ದೇನೆ. ಅವರ ಸಾವಿನ ದುಃಖ ಭರಿಸಲಿಕ್ಕೆ ದೇವರು ಶಕ್ತಿ ಕೊಡಲಿ ಅಂತಾ ಈ ಸಂದರ್ಭದಲ್ಲಿ ಪ್ರಾರ್ಥನೆ ಮಾಡ್ತೀನಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದರು.ಇದನ್ನೂ ಓದಿ: ಮಾಜಿ ಸಚಿವ ವೆಂಕಟರಮಣಪ್ಪ ನಿಧನ
