ತುಮಕೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ವೆಂಕಟರಮಣಪ್ಪ (80) (Venkataramanappa) ಶುಕ್ರವಾರ (ಇಂದು) ನಿಧನರಾಗಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ (Private Hospital) ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದು, ಪುತ್ರ ಶಾಸಕ ಹೆಚ್.ವಿ ವೆಂಕಟೇಶ್, ಕುಮಾರಸ್ವಾಮಿ, ಪುತ್ರಿ ಪದ್ಮಾವತಿ ಅವರನ್ನ ಅಗಲಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ – ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಐವರು ದುರ್ಮರಣ

ಅನಾರೋಗ್ಯಕ್ಕೀಡಾಗಿದ್ದ ವೆಂಕಟರಮಣಪ್ಪ ಅವರನ್ನ ಬೆಂಗಳೂರಿನ ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ (ಇಂದು) ಬೆಳಗ್ಗಿನ ಜಾವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವೆಂಕಟರಮಣಪ್ಪ ಅವರು 2008 ರ ಅವಧಿಯಲ್ಲಿ ರೇಷ್ಮೆ ಮತ್ತು ಸಣ್ಣ ಕೈಗಾರಿಕಾ ಸಚಿವರಾಗಿ, 2018 ರಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಒಟ್ಟು ನಾಲ್ಕು ಬಾರಿ ಶಾಸಕರಾಗಿ ಚುನಾಯಿತರಾಗಿದ್ದರು.
ಪಟ್ಟಟ್ಟಣದ ಗುರುಭವನದಲ್ಲಿ ಇಂದು ಮಧ್ಯಾಹ್ನ ಮೃತರ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಿಗೂಢ ವೈರಸ್‌ಗೆ ಗಿರ್ ಅರಣ್ಯದಲ್ಲಿ 7 ಸಿಂಹಗಳ ಸರಣಿ ಸಾವು – 17 ಸಿಂಹಗಳು ಕ್ವಾರಂಟೈನ್‌ಗೆ
