– ʼಟೋಲ್ ಕಟ್ಟಲ್ಲ ಅಂದ್ರೆ ಕಟ್ಟಲ್ಲ.. ಏನೀವಾಗʼ ಅಂತ ಸಿಬ್ಬಂದಿ ಜೊತೆ ಗಲಾಟೆ
ಬೆಂಗಳೂರು: ನೈಸ್ ರಸ್ತೆಯಲ್ಲಿ ಟೋಲ್ (NICE Road Toll) ಕಟ್ಟಬೇಡಿ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ ಹಿನ್ನೆಲ್ಲೆ ಟೋಲ್ ಕಟ್ಟಲು ಜನರು ಹಿಂದೇಟು ಹಾಕುತ್ತಿದ್ದಾರೆ. ಜನರ ಈ ನಡೆಯಿಂದ ಟೋಲ್ ಸಿಬ್ಬಂದಿ ಹೈರಾಣಾಗಿದ್ದಾರೆ.
ಟೋಲ್ ಬಳಿ ಸಿಬ್ಬಂದಿ ಜೊತೆ ಜನರು ಟೋಲ್ ಕಟ್ಟದೇ ವಾಗ್ವಾದ ನಡೆಸುತ್ತಿದ್ದಾರೆ. ಕೋರ್ಟ್ ಸೂಚನೆ ಇದೆ ಎಂದು ಪ್ರತಿ ತೋರಿಸಿ ಟೋಲ್ ಕಟ್ಟಲು ತಕರಾರು ತೆಗೆಯುತ್ತಿದ್ದಾರೆ. ಇದನ್ನೂ ಓದಿ: ನೈಸ್ ರಸ್ತೆ ಟೋಲ್ ದರ ಪರಿಷ್ಕರಣೆ – ಹೊಸ ದರ ಹೇಗಿದೆ?
ವಾಹನ ಸವಾರರ ನಡೆಗೆ ಬೇಸತ್ತು ಟೋಲ್ ಸಿಬ್ಬಂದಿ ಹೊಸ ಕ್ರಮ ಅನುಸರಿಸುತ್ತಿದ್ದಾರೆ. ಸಾರ್ವಜನಿಕರಿಗೆ ಈಗ ವಾರ್ನಿಂಗ್ ನೋಟಿಸ್ ಹಾಕಿದ್ದಾರೆ. ಟೋಲ್‌ನಲ್ಲಿ ದುಡ್ಡು ಕಟ್ಟಬೇಡಿ ಅಂತ ಹೈಕೋರ್ಟ್ ಹೇಳಿಲ್ಲ. ಇದು ತಪ್ಪು ಮಾಹಿತಿ. ಟೋಲ್ ಸಿಬ್ಬಂದಿಗೆ ಕಿರುಕುಳ ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ಹಾಕಲಾಗಿದೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಟೋಲ್ ಕಟ್ಟಬೇಡಿ ಎಂದು ಕರೆ ನೀಡಿಸ್ದರು. ಹೆಚ್‌ಡಿಕೆ ಕರೆ ಬೆನ್ನಲ್ಲೇ ಟೋಲ್ ಕಟ್ಟಲು ಜನರು ಹಿಂದೇಟು ಹಾಕುತ್ತಿದ್ದಾರೆ. ಪ್ರತಿದಿನ ಬೈಕ್ ಸವಾರರು, ಕಾರು ಚಾಲಕರ ಜೊತೆ ಟೋಲ್ ಸಿಬ್ಬಂದಿ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ. `ಗೇಟ್ ತೆಗಿರಿ. ಇಲ್ಲ ಗೇಟ್ ಮುರಿದಾಕ್ತೇನೆ.. ಅಕ್ರಮವಾಗಿ ಟೋಲ್ ಕಲೆಕ್ಟ್ ಮಾಡೋಕೆ ಹೇಳಿದ್ಯಾರು? ಅಕ್ರಮವಾಗಿ ಟೋಲ್ ಕರೆಕ್ಟ್ ಮಾಡೋಕೆ ಹೇಳಿದ್ಯಾರು?’ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಹರಿದ ಕಾವೇರಿ; ವಿಸಿ ನಾಲೆಗೆ ನೀರು ನಿಲ್ಲಿಸಿ ನದಿಗೆ ಮಾತ್ರ ರಿಲೀಸ್

