– ನಾಲ್ವರು ವಿದ್ಯಾರ್ಥಿನಿಯರ MBBS ಪ್ರವೇಶ ರದ್ದು
ಡೆಹ್ರಾಡೂನ್: MBBS ಕೋರ್ಸ್‌ಗೆ ಪ್ರವೇಶ ಪಡೆಯಲು ನಕಲಿ ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತ ಪ್ರಮಾಣಪತ್ರಗಳನ್ನು ಬಳಸಿದ ಆರೋಪದ ಮೇಲೆ ಉತ್ತರಾಖಂಡದಲ್ಲಿ ನಾಲ್ವರು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತ ಕೋಟಾದಡಿ MBBS ಪ್ರವೇಶಕ್ಕಾಗಿ ಸಲ್ಲಿಸಲಾಗಿದ್ದ ದಾಖಲೆಗಳ ಪರಿಶೀಲನೆ ವೇಳೆ ಅಕ್ರಮ ಬೆಳಕಿಗೆ ಬಂದಿದೆ. ಪರಿಶೀಲನಾ ಪ್ರಕ್ರಿಯೆಯ ಬಳಿಕ ಕೋಟಾದಡಿ ಪಡೆದಿದ್ದ ನಾಲ್ವರು ವಿದ್ಯಾರ್ಥಿನಿಯರ MBBS ಪ್ರವೇಶವನ್ನು ರದ್ದುಪಡಿಸಲಾಗಿದೆ.
ದೂರು ಬಂದ ಬಳಿಕ ಪರಿಶೀಲನೆ
ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತ ವರ್ಗದಡಿ ಪ್ರಯೋಜನ ಪಡೆಯಲು ಬಳಸಿದ್ದ ಪ್ರಮಾಣಪತ್ರಗಳ ದೃಢೀಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಇದರ ಬಳಿಕ ಡೆಹ್ರಾಡೂನ್ ಜಿಲ್ಲಾಧಿಕಾರಿ ದಾಖಲೆಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿದ್ದರು.
ಪರಿಶೀಲನೆ ವೇಳೆ ಪ್ರಮಾಣಪತ್ರಗಳು ಪ್ರಾಥಮಿಕವಾಗಿ ಅನುಮಾನಾಸ್ಪದವಾಗಿರುವುದು ಕಂಡುಬಂದಿದೆ. ಅಲ್ಲದೆ, ದಾಖಲೆಗಳಲ್ಲಿ ನೀಡಲಾಗಿದ್ದ ವಿಳಾಸಗಳನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆಗಳು ಅಪೂರ್ಣ
ಪ್ರಮಾಣಪತ್ರಗಳು ಹಾಗೂ ಅವುಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ವೇಳೆ ಪ್ರಮಾಣಪತ್ರಗಳು ಪ್ರಾಥಮಿಕವಾಗಿ ಅನುಮಾನಾಸ್ಪದವಾಗಿ ಕಂಡುಬಂದಿವೆ. ಅರ್ಜಿದಾರರು ಸಲ್ಲಿಸಿದ್ದ ದಾಖಲೆಗಳು ಅಪೂರ್ಣವಾಗಿದ್ದು, ದಾಖಲೆಗಳಲ್ಲಿ ಉಲ್ಲೇಖಿಸಲಾಗಿದ್ದ ವಿಳಾಸಗಳನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ.
ನಕಲಿ ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತ ಪ್ರಮಾಣಪತ್ರಗಳನ್ನು ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ತ್ರಿಪ್ತಿ ಮತ್ತು ಅವರ ತಾಯಿ ಉಮಾ ದೇವಿ ವಿರುದ್ಧ ಕ್ಲೆಮೆಂಟ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವೀಸಾ ಅವಧಿ ಮುಗಿದು 7 ತಿಂಗಳಾದರೂ ಅಕ್ರಮ ವಾಸ; ಇಸ್ರೇಲಿ ಪ್ರಜೆಯನ್ನ ವಶಕ್ಕೆ ಪಡೆದ ಹೊನ್ನಾವರ ಪೊಲೀಸರು
ಇನ್ನು ಪ್ರಮಾಣಪತ್ರಗಳಿಗಾಗಿ ಅರ್ಜಿ ಸಲ್ಲಿಸಿದ್ದ ಖುಷಿ, ಪರಿ ಮತ್ತು ಸ್ವಾತಿ ವಿರುದ್ಧ ರಾಯ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ FIR ದಾಖಲಾಗಿದೆ.
ನಾಲ್ವರು ವಿದ್ಯಾರ್ಥಿನಿಯರ MBBS ಪ್ರವೇಶ ರದ್ದು
ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತ ಕೋಟಾದಡಿ ನಾಲ್ವರು ವಿದ್ಯಾರ್ಥಿನಿಯರು ಪಡೆದಿದ್ದ MBBS ಪ್ರವೇಶವನ್ನು ರದ್ದುಪಡಿಸಲಾಗಿದೆ. ಜಿಲ್ಲಾಡಳಿತದಿಂದ ವರದಿ ಬಂದ ಬಳಿಕ ಡೆಹ್ರಾಡೂನ್‌ನ HNB ವೈದ್ಯಕೀಯ ಶಿಕ್ಷಣ ವಿಶ್ವವಿದ್ಯಾಲಯವು ಅವರ ಪ್ರವೇಶವನ್ನು ರದ್ದುಪಡಿಸಿದೆ.ಇದನ್ನೂ ಓದಿ: ತುಮಕೂರಿನಲ್ಲಿ ಹಿಟ್ & ರನ್ – ನವದಂಪತಿ ಸಾವು

