ಬೆಂಗಳೂರು: ನೈಸ್ ಯೋಜನೆ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಜುಲೈ 29 ರಂದು ಹೈಕೋರ್ಟ್ ವಿಭಾಗೀಯ ಪೀಠ ನೈಸ್ ಅಕ್ರಮದ ಬಗ್ಗೆ ಆದೇಶ ಮಾಡಿದೆ. ಈ ಆದೇಶವನ್ನು ಇಟ್ಟುಕೊಂಡು ಇಡೀ ನೈಸ್ ಯೋಜನೆಯನ್ನೇ ರದ್ದು ಮಾಡಬೇಕು ಅಂತ ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದರ ಮಧ್ಯೆಯೇನೈಸ್ (NICE) ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಟೋಲ್ ದರ ಪರಿಷ್ಕರಣೆ ಮಾಡಲಾಗಿದೆ.
ವಿವಿಧ ವಿಭಾಗಗಳಲ್ಲಿ ಕಾರು, ಬಸ್, ಬೈಕ್ ಹಾಗೂ ಟ್ರಕ್‌ಗಳಿಗೆ ಅನ್ವಯವಾಗುವ ಟೋಲ್ ಶುಲ್ಕದಲ್ಲಿ ಬದಲಾವಣೆ ಮಾಡಲಾಗಿದೆ.


* ಹೊಸ ದರದ ಪ್ರಕಾರ, ಹೊಸೂರಿನಿಂದ ಬನ್ನೇರುಘಟ್ಟ ಮಾರ್ಗದಲ್ಲಿ ಕಾರುಗಳಿಗೆ 72 ರೂ., ಬಸ್‌ಗಳಿಗೆ 215 ರೂ., ಬೈಕ್‌ಗಳಿಗೆ 33 ರೂ. ಹಾಗೂ ಟ್ರಕ್‌ಗಳಿಗೆ 141 ರೂ. ಟೋಲ್ ನಿಗದಿಯಾಗಿದೆ.
* ಬನ್ನೇರುಘಟ್ಟದಿಂದ ಕನಕಪುರ ಮಾರ್ಗದಲ್ಲಿ ಕಾರುಗಳಿಗೆ 53 ರೂ., ಬಸ್‌ಗಳಿಗೆ 171 ರೂ., ಬೈಕ್‌ಗಳಿಗೆ 17 ರೂ. ಹಾಗೂ ಟ್ರಕ್‌ಗಳಿಗೆ 108 ರೂ. ಶುಲ್ಕ ವಿಧಿಸಲಾಗುತ್ತದೆ.
* ಇನ್ನು ಕನಕಪುರದಿಂದ ಕ್ಲೋವರ್‌ಲೀಫ್ ಜಂಕ್ಷನ್ ಮಾರ್ಗದಲ್ಲಿ ಕಾರುಗಳಿಗೆ 39 ರೂ., ಬಸ್‌ಗಳಿಗೆ 105 ರೂ., ಬೈಕ್‌ಗಳಿಗೆ 11 ರೂ. ಹಾಗೂ ಟ್ರಕ್‌ಗಳಿಗೆ 66 ರೂ. ಟೋಲ್ ದರ ನಿಗದಿಯಾಗಿದೆ.
* ಕ್ಲೋವರ್‌ಲೀಫ್ ಜಂಕ್ಷನ್‌ನಿಂದ ಮೈಸೂರು ರಸ್ತೆ ಮಾರ್ಗದಲ್ಲಿ ಕಾರುಗಳಿಗೆ 36 ರೂ., ಬಸ್‌ಗಳಿಗೆ 94 ರೂ., ಬೈಕ್‌ಗಳಿಗೆ 11 ರೂ. ಹಾಗೂ ಟ್ರಕ್‌ಗಳಿಗೆ 55 ರೂ. ಶುಲ್ಕ ಅನ್ವಯವಾಗಲಿದೆ.
* ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ಮಾರ್ಗದಲ್ಲಿ ಕಾರುಗಳಿಗೆ 77 ರೂ., ಬಸ್‌ಗಳಿಗೆ 226 ರೂ., ಬೈಕ್‌ಗಳಿಗೆ 33 ರೂ. ಹಾಗೂ ಟ್ರಕ್‌ಗಳಿಗೆ 154 ರೂ. ಟೋಲ್ ದರ ನಿಗದಿಯಾಗಿದೆ.
* ಮಾಗಡಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗದಲ್ಲಿ ಕಾರುಗಳಿಗೆ 61 ರೂ., ಬಸ್‌ಗಳಿಗೆ 176 ರೂ., ಬೈಕ್‌ಗಳಿಗೆ 17 ರೂ. ಹಾಗೂ ಟ್ರಕ್‌ಗಳಿಗೆ 116 ರೂ. ಶುಲ್ಕ ವಿಧಿಸಲಾಗುತ್ತದೆ.
* ಇದೇ ವೇಳೆ, ಲಿಂಕ್ ರೋಡ್ ವಿಭಾಗದಲ್ಲಿ ಕಾರುಗಳಿಗೆ 83 ರೂ., ಬಸ್‌ಗಳಿಗೆ 220 ರೂ., ಬೈಕ್‌ಗಳಿಗೆ 25 ರೂ. ಹಾಗೂ ಟ್ರಕ್‌ಗಳಿಗೆ 149 ರೂ. ಟೋಲ್ ದರ ನಿಗದಿಯಾಗಿದೆ.
ನೈಸ್ ರಸ್ತೆಯನ್ನು ನಿಯಮಿತವಾಗಿ ಬಳಸುವ ವಾಹನ ಸವಾರರು ತಮ್ಮ ಪ್ರಯಾಣದ ಮಾರ್ಗಕ್ಕೆ ಅನುಗುಣವಾಗಿ ಪರಿಷ್ಕೃತ ಟೋಲ್ ದರವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ವಿಶೇಷವಾಗಿ ಪ್ರತಿದಿನ ಸಂಚರಿಸುವ ವಾಹನಗಳಿಗೆ ಈ ದರ ಪರಿಷ್ಕರಣೆಯಿಂದ ಮಾಸಿಕ ಪ್ರಯಾಣ ವೆಚ್ಚದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆಯಿದೆ.

