– ಕಾವೇರಿ ನಿವಾಸಕ್ಕೆ ಸಿದ್ದರಾಮಯ್ಯ ಆಪ್ತರು
ಬೆಂಗಳೂರು: ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯಲು ಶಾಸಕರ ಲಾಬಿ ಶುರುವಾಗಿದೆ. ಹೈಕಮಾಂಡ್ ನಾಯಕರ ಬಳಿ ಕೆಲವರು ಲಾಬಿ ಮಾಡುತ್ತಿದ್ದರೇ, ಡಿಕೆಶಿ ಮನೆಗೂ ಹಲವರು ಭೇಟಿ ಕೊಡುತ್ತಿದ್ದಾರೆ. ಮತ್ತೊಂದು ಕಡೆ ಹಂಗಾಮಿ ಸಿಎಂ ಸಿದ್ದರಾಮಯ್ಯ (Siddaramaiah) ಭೇಟಿ ಮಾಡಿ ಸಚಿವ ಸ್ಥಾನ ಕೊಡಿಸಿ ಅಂತ ದುಂಬಾಲು ಬಿದ್ದಿದ್ದಾರೆ.
ಕಾಂಗ್ರೆಸ್‌ನಲ್ಲಿ (Congress) ಹೊಸ ಸರ್ಕಾರದ ರಚನೆ ಪ್ರಕ್ರಿಯೆಗಳು ಶುರುವಾಗಿದೆ. ಹೊಸ ಸರ್ಕಾರದಲ್ಲಿ ಮಂತ್ರಿ ಆಗಲು ಶಾಸಕರು ಲಾಬಿ ಶುರು ಮಾಡಿದ್ದಾರೆ. ಮಂತ್ರಿ ಪದವಿ ಪಡೆಯಲು ಅನೇಕ ಶಾಸಕರು ಹಂಗಾಮಿ ಸಿಎಂ ಸಿದ್ದರಾಮಯ್ಯ ಮನೆ ಬಾಗಿಲು ತಟ್ಟಿದ್ದಾರೆ. ಇದನ್ನೂ ಓದಿ: ಅಜ್ಜಯ್ಯನ ಗದ್ದುಗೆಗೆ ಡಿಕೆಶಿ ಭೇಟಿ – ಪದಗ್ರಹಣಕ್ಕೂ ಮುನ್ನ ಸಲಹೆ, ಮತ್ತೆ ಎಚ್ಚರಿಕೆ
ಹೌದು, ಹೇಗಾದರೂ ಮಾಡಿ ಡಿಕೆಶಿಯ ಹೊಸ ಸಂಪುಟ (Cabinet) ಸೇರ್ಪಡೆ ಮಾಡಬೇಕು ಅಂತ ಶಾಸಕರು ಕಸರತ್ತು ಶುರು ಮಾಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಕಾವೇರಿ ನಿವಾಸಕ್ಕೆ ಅನೇಕ ಶಾಸಕರು ಭೇಟಿ ಮಾಡಿ ಸಚಿವ ಸ್ಥಾನ ಕೊಡಿಸಿ ಅಂತ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಶಾಸಕರಾದ ಜಾರ್ಜ್, ಜಮೀರ್ ಅಹ್ಮದ್, ರಿಜ್ವಾನ್ ಅರ್ಷದ್, ರಘುಮೂರ್ತಿ, ಗೋವಿಂದಪ್ಪ, ಅಶೋಕ್ ಪಟ್ಟಣ್, ಪುಟ್ಟರಂಗಶೆಟ್ಟಿ, ಎಂಎಲ್‌ಸಿ ಐವಾನ್ ಡಿಸೋಜಾ, ಬಲ್ಕೀಸ್ ಸಿದ್ದು ನಿವಾಸಕ್ಕೆ ಆಗಮಿಸಿ ಚರ್ಚಿಸಿದ್ದಾರೆ. ಇದನ್ನೂ ಓದಿ: ಸತ್ತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ – ವರದಿ ಕೇಳಿದ ರಾಜ್ಯ ಮಹಿಳಾ ಆಯೋಗ
ಸಿದ್ದರಾಮಯ್ಯ ಭೇಟಿ ಬಳಿಕ ಪ್ರತಿಕ್ರಿಯಿಸಿದ ಎಂಎಲ್‌ಸಿ ಐವಾನ್ ಡಿಸೋಜಾ, ನಾನು ಕ್ರಿಶ್ಚಿಯನ್ ಸಮಯದಾಯದಿಂದ ಸಚಿವ ಸ್ಥಾನ ಕೇಳಿದ್ದೇನೆ, ನಾನು ಆಕಾಂಕ್ಷಿ. ನಮ್ಮ ಸಮುದಾಯದ ಜಾರ್ಜ್ಗೆ ಡಿಸಿಎಂ ಸ್ಥಾನ ಕೊಡಬೇಕು ಎಂದರು. ಇನ್ನು ಚಳ್ಳಕೆರೆ ಶಾಸಕ ರಘುಮೂರ್ತಿ ನನಗೂ ಸಚಿವ ಸ್ಥಾನ ಕೊಡಿ ಅಂತ ಕೇಳಿದ್ದೇನೆ. ಹೈಕಮಾಂಡ್ ಸಚಿವ ಸ್ಥಾನ ಕೊಡುವ ವಿಶ್ವಾಸ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಹೊಸದುರ್ಗ ಶಾಸಕ ಗೋವಿಂದಪ್ಪ ಸಹ ಆಕಾಂಕ್ಷಿ ಆಗಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಕುಸಿದ ಮನೆಯ ಗೋಡೆ – 7 ಮಂದಿ ಪಾರು
ಪೊನ್ನಣ್ಣಗೆ ಸಚಿವ ಸ್ಥಾನ?
ಇನ್ನು ಈ ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ಸಿಎಂ ಕಾನೂನು ಸಲಹೆಗಾರರಾಗಿದ್ದ ಪೊನ್ನಣ್ಣ ಅವರಿಗೆ ಸಚಿವಸ್ಥಾನ ಸಿಗುವ ಸಾಧ್ಯತೆ ಇದೆ. ಇವತ್ತು ಸಿದ್ದರಾಮಯ್ಯ ನಿವಾಸಕ್ಕೆ ಪೊನ್ನಣ್ಣ ಕೂಡ ಭೇಟಿ ಕೊಟ್ಟು ಚರ್ಚೆ ನಡೆಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಪೊನ್ನಣ್ಣ, ಕೊಡಗಿಗೆ ಒಂದು ಸ್ಥಾನ ಕೊಡಬೇಕು ಅಂತ ಮೊದಲಿನಿಂದ ಇದೆ. ಜನರು ಕೂಡಾ ಕೊಡಗಿಗೆ ಕೊಡಬೇಕು ಎಂದು ಹೇಳುತ್ತಿದ್ದಾರೆ. ಹೈಕಮಾಂಡ್ ಏನು ಮಾಡುತ್ತಾರೋ ನೋಡೋಣ. ಅಲ್ಲದೇ ನನಗೂ ಕೊಡಗಿಗೆ ಒಂದು ಸ್ಥಾನ ಕೊಡುವ ವಿಶ್ವಾಸ ಇದೆ ಎಂದಿದ್ದಾರೆ. ಇದನ್ನೂ ಓದಿ: ಗಿಲ್-ಸುದರ್ಶನ್ ತೂಫಾನ್ ಶತಕದ ಜೊತೆಯಾಟಕ್ಕೆ ಗೇಲ್-ಕೊಹ್ಲಿ ದಾಖಲೆ ನುಚ್ಚುನೂರು
ಯತೀಂದ್ರ ಸೈಲೆಂಟ್:
ಇಷ್ಟು ದಿನ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಅಂತಿದ್ದ ಯತೀಂದ್ರ ಅವರು ಈವರೆಗೂ ಸಿದ್ದರಾಮಯ್ಯ ರಾಜೀನಾಮಗೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇವತ್ತು ಕಾವೇರಿ ನಿವಾಸಕ್ಕೆ ಭೇಟಿ ನೀಡಿದ್ದ ಯತೀಂದ್ರ ಅವರು ಸಂಪೂರ್ಣವಾಗಿ ಮೌನಕ್ಕೆ ಶರಣಾಗಿದ್ದರು. ಹೈಕಮಾಂಡ್ ಮಾತಿನಂತೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ದೆಹಲಿಗೆ ತೆರಳಿದ್ದ ವೇಳೆ ತಂದೆ ಜೊತೆ ಯತೀಂದ್ರ ಸಹ ಹೋಗಿದ್ದರು. ಯತೀಂದ್ರಗೆ ಸಚಿವ ಸ್ಥಾನ ಅಥವಾ ಡಿಸಿಎಂ ಸ್ಥಾನ ನೀಡುವ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ. ಇವತ್ತಿನ ಸಿಎಲ್‌ಪಿ ಬಳಿಕ ಮುಂದಿನ ಪ್ರಕ್ರಿಯೆಗಳಲ್ಲಿ ಯಾವ ಸ್ಥಾನ ಸಿಗಲಿದೆ ಎಂಬುದು ಗೊತ್ತಾಗಲಿದೆ. ಹೀಗಾಗಿಯೇ ಯತೀಂದ್ರ ಸಿದ್ದರಾಮಯ್ಯ ಮಾಧ್ಯಮಗಳ ಎದುರು ಮೌನಕ್ಕೆ ಜಾರಿದ್ದಾರೆ. ಇದನ್ನೂ ಓದಿ: Exclusive | ಡಿಸಿಎಂಗಳ ಹುದ್ದೆ ಬೇಡವೇ ಬೇಡ – ಕಾಂಗ್ರೆಸ್ ಹೈಕಮಾಂಡ್ ಮುಂದೆ ಡಿಕೆಶಿ, ಸತೀಶ್ ಜಾರಕಿಹೊಳಿ ಪ್ರಸ್ತಾಪ
ಇನ್ನು ಸಿಎಂ ಆಗಿ ಕೊನೆಯದಾಗಿ ಸಾರ್ವಜನಿಕರ ಅಹವಾಲನ್ನು ಸಿದ್ದರಾಮಯ್ಯ ಸ್ವೀಕರಿಸಿದರು. ಒಟ್ಟಾರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ ಕಾವೇರಿ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇದನ್ನೂ ಓದಿ: ನೂತನ ಸಿಎಂ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ – ರಾಮನಗರದಲ್ಲಿ ರಾರಾಜಿಸುತ್ತಿವೆ ಡಿಕೆಶಿ ಕಟೌಟ್, ಬ್ಯಾನರ್‌ಗಳು
