ಚಂಢೀಗಡ: ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ್ (Rajasthan Royals) ವಿರುದ್ಧ ಗೆದ್ದ ಗುಜರಾತ್ ಟೈಟಾನ್ಸ್ (Gujarat Titans) ತಂಡ 3ನೇ ಬಾರಿಗೆ ಹಾಗೂ ಗಿಲ್ (Shubman Gill) ನಾಯಕತ್ವದಲ್ಲಿ ಮೊದಲ ಬಾರಿಗೆ ಐಪಿಎಲ್ ಫೈನಲ್ (IPL Final) ತಲುಪಿದೆ. ಆದ್ರೆ ರಾಜಸ್ಥಾನ್ ವಿರುದ್ಧ ಟೈಟಾನ್ಸ್ ಗೆಲುವಿಗಿಂತಲೂ ಹೆಚ್ಚು ಗಮನ ಸೆಳೆಯುತ್ತಿರುವುದು ಕ್ಯಾಪ್ಟನ್ ಗಿಲ್ ಹಾಗೂ ಸುದರ್ಶನ್ ಜೋಡಿಯ ಜೊತೆಯಾಟ.
ಜಿಟಿ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ (Sai Sudharsan) 167 ರನ್‌ಗಳ ಜೊತೆಯಾಟವಾಡಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಗಿಲ್-ಸುದರ್ಶನ್ ಅವರ 11 ಶತಕದ ಜೊತೆಯಾಟವೂ ಆಗಿದೆ. ಈ ಮೂಲಕ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಯ್ಲ್ ಅವರ ದಾಖಲೆಯನ್ನೂ ಈ ಜೋಡಿ ಹಿಂದಿಕ್ಕಿದೆ.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ಜೊತೆಯಾಟ
1. ಶುಭಮನ್ ಗಿಲ್ – ಸಾಯಿ ಸುದರ್ಶನ್ – 11 ಶತಕಗಳು (48 ಇನ್ನಿಂಗ್ಸ್)
2. ಕ್ರಿಸ್ ಗೇಲ್ – ವಿರಾಟ್ ಕೊಹ್ಲಿ – 10 ಶತಕಗಳು (63 ಇನ್ನಿಂಗ್ಸ್)
3. ಬಾಬರ್ ಆಜಂ – ಮೊಹಮ್ಮದ್ ರಿಜ್ವಾನ್ – 10 ಶತಕಗಳು (75 ಇನ್ನಿಂಗ್ಸ್)
4. ಎಬಿ ಡಿವಿಲಿಯರ್ಸ್ – ವಿರಾಟ್ ಕೊಹ್ಲಿ – 10 ಶತಕಗಳು (77 ಇನ್ನಿಂಗ್ಸ್)
5. ಅಭಿಷೇಕ್ ಶರ್ಮಾ – ಪ್ರಭ್‌ಸಿಮ್ರನ್ ಸಿಂಗ್ (44 ಇನ್ನಿಂಗ್ಸ್) (ದೇಶಿ ಕ್ರಿಕೆಟ್‌ನಲ್ಲಿ)
ಸುದರ್ಶನ್ ಮತ್ತು ಗಿಲ್ ಮೊದಲ ವಿಕೆಟ್ ನಷ್ಟಕ್ಕೆ 8 ಬಾರಿ 100 ರನ್‌ಗಳ ಜೊತೆಯಾಟವಾಡಿದ್ದರು. ಪುರುಷರ ಟಿ20 ಕ್ರಿಕೆಟ್‌ನಲ್ಲಿ ಈ ಹಿಂದೆ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಆಜಂ ಈ ದಾಖಲೆ ನಿರ್ಮಿಸಿದ್ದರು. ಇದೀಗ ಗಿಲ್ ಹಾಗೂ ಸುದರ್ಶನ್ ಈ ಮೈಲುಗಲ್ಲು ತಲುಪಿದ್ದಾರೆ.
ಐಪಿಎಲ್ ಟೂರ್ನಿಯ ಪ್ಲೇ ಆಫ್‌ನಲ್ಲಿ ಗಿಲ್ ಹಾಗೂ ಸಾಯಿ ಸುದರ್ಶನ್ ಅತ್ಯಧಿಕ ಜೊತೆಯಾಟದ ದಾಖಲೆ ನಿರ್ಮಿಸಿದ್ದಾರೆ. 2011 ರ ಐಪಿಎಲ್ ಋತುವಿನಲ್ಲಿ ಚೆನ್ನೆöÊ ಪರ ಮೈಕಲ್ ಹಸ್ಸಿ ಮತ್ತು ಮುರುಳಿ ವಿಜಯ್ ಅವರ 159 ರನ್‌ಗಳ ಜೊತೆಯಾಟವನ್ನು ಈ ಜೋಡಿ ಮುರಿದಿದೆ.
ಐಪಿಎಲ್ ಪ್ಲೇಆಫ್‌ಗಳಲ್ಲಿ ಅತ್ಯಧಿಕ ಜೊತೆಯಾಟಗಳು (ಯಾವುದೇ ವಿಕೆಟ್‌ಗೆ)
1. ಗಿಲ್ ಮತ್ತು ಸಾಯಿ ಸುದರ್ಶನ್ – ಜಿಟಿ ವರ್ಸಸ್ ಆರ್‌ಆರ್, 2026ರ ಕ್ವಾಲಿಫೈಯರ್-2 167 ರನ್.
2. ಮೈಕಲ್ ಹಸ್ಸಿ ಮತ್ತು ಮುರುಳಿ ವಿಜಯ್ – ಸಿಎಸ್‌ಕೆ ವರ್ಸಸ್ ಆರ್‌ಸಿಬಿ, 2011ರ ಫೈನಲ್, 159 ರನ್.
3. ಮೈಕಲ್ ಹಸ್ಸಿ ಮತ್ತು ಸುರೇಶ್ ರೈನಾ – ಸಿಎಸ್‌ಕೆ ವರ್ಸಸ್ ಎಂಐ, 2013ರ ಕ್ವಾಲಿಫೈಯರ್, ಅಜೇಯ 140 ರನ್
4. ಗಿಲ್ ಮತ್ತು ಸಾಯಿ ಸುದರ್ಶನ್ – ಜಿಟಿ ವರ್ಸಸ್ ಮುಂಬೈ, 2023ರ ಕ್ವಾಲಿಫೈಯರ್-2, 138 ರನ್.
5. ಮನ್ವಿಂದರ್ ಬಿಸ್ಲಾ ಮತ್ತು ಜಾಕ್ ಕಾಲಿಸ್ – ಕೆಕೆಅರ್ ವರ್ಸಸ್ ಸಿಎಸ್‌ಕೆ, 2012ರ ಫೈನಲ್, 136 ರನ್
ರಾಜಸ್ಥಾನ್ ರಾಯಲ್ಸ್ ನೀಡಿದ್ದ 215 ರನ್ ಗುರಿ ಬೆನ್ನತ್ತಿದ ಗುಜರಾತ್ ಪರ ಇನ್ನಿಂಗ್ಸ್ ಆರಂಭಿಸಿದ್ದ ಗಿಲ್ ಹಾಗೂ ಸುದರ್ಶನ್ 77 ಎಸೆತಗಳಲ್ಲಿ 167 ರನ್‌ಗಳ ಜೊತೆಯಾಟವಾಡಿದರು. ಸಾಯಿ ಸುದರ್ಶನ್ 32 ಎಸೆತಗಳಲ್ಲಿ 58 ರನ್ ಸಿಡಿಸಿ ಬ್ರಿಜೇಶ್ ಶರ್ಮಾ ಅವರಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಇತ್ತ 53 ಎಸೆತಗಳಲ್ಲಿ 104 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ಯುತ್ತಿದ್ದ ಗಿಲ್ ಅವರನ್ನು ಜೋಫ್ರಾ ಅರ್ಚರ್ ಔಟ್ ಮಾಡಿದರು. ಈ ಜೋಡಿಯ ನಿರ್ಣಾಯಕ ಜೊತೆಯಾಟದ ನೆರವಿನಿಂದಾಗಿ 8 ಎಸೆತಗಳು ಬಾಕಿ ಇರುವಾಗಲೇ ಗಿಲ್ ಪಡೆ ಗೆದ್ದು ಬೀಗಿತು.
