ಬೆಂಗಳೂರು: ಡಿಸಿಎಂಗಳ ಹುದ್ದೆ (DCM Post) ಬೇಡವೇ ಬೇಡ ಎಂದು ಕಾಂಗ್ರೆಸ್ (Congress) ಹೈಕಮಾಂಡ್ ಮುಂದೆ ಭಾವಿ ಸಿಎಂ ಡಿಕೆ ಶಿವಕುಮಾರ್ (DK Shivakumar) ಹಾಗೂ ಸತೀಶ್ ಜಾರಕಿಹೊಳಿ (Satish Jarkiholi) ಪ್ರಸ್ತಾಪ ಇಟ್ಟಿದ್ದಾರೆ ಅನ್ನೋ ಮಾಹಿತಿ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.
ನೂತನ ಕ್ಯಾಬಿನೆಟ್‌ಗೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ಈ ಪ್ರಸ್ತಾಪ ನಡೆದಿದೆ. ಇದನ್ನೂ ಓದಿ: ಶುಭಯೋಗ, ಶುಭಫಲದಲ್ಲಿ ಡಿಕೆ ಪ್ರಮಾಣ ಸ್ವೀಕಾರ – ಆ ದಿನ ಗ್ರಹ ಬಲ ಹೇಗಿದೆ?
ದಲಿತ, ಲಿಂಗಾಯತ, ಅಲ್ಪಸಂಖ್ಯಾತ, ಓಬಿಸಿ ಸಮುದಾಯಗಳಿಗೆ ಮಣೆ ಹಾಕಬೇಕು. ಯಾರಿಗಾದರೂ ಇಬ್ಬರಿಗೆ ಕೊಟ್ಟರೂ ಅಸಮಾಧಾನ ಸಾಧ್ಯತೆಯಿದೆ. ನಾಲ್ಕು ಡಿಸಿಎಂ ಸೃಷ್ಟಿ ಮಾಡಿದ್ರೆ ಹಾಸ್ಯಾಸ್ಪದ ಎಂದು ಹೈಕಮಾಂಡ್ ಬಳಿ ಪ್ರಸ್ತಾಪವಿಟ್ಟಿದ್ದಾರೆ.
ಈ ಕುರಿತು ಸೋಮವಾರ ರಾಹುಲ್ ಮುಂದೆ ತೀರ್ಮಾನ ಮಾಡೋಣ ಎಂದು ಕೆ.ಸಿ ವೇಣುಗೋಪಾಲ್ ಸ್ಪಷ್ಟನೆ ನೀಡಿದ್ದಾರೆ. ಸೋಮವಾರ ಡಿಸಿಎಂಗಳ ಹುದ್ದೆ ಸೃಷ್ಟಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಅನುಚಿತ ವರ್ತನೆ ತೋರಿದ ಪುಂಡ ಯುವಕನಿಗೆ ಮಹಿಳೆಯಿಂದ ಚಪ್ಪಲಿ ಏಟು
