ರಾಮನಗರ: ನೂತನ ಸಿಎಂ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಹಿನ್ನೆಲೆ ರಾಮನಗರದಲ್ಲಿ (Ramanagar) ಡಿಕೆ ಶಿವಕುಮಾರ್ ಅವರ ಕಟೌಟ್, ಬ್ಯಾನರ್‌ಗಳು ರಾರಾಜಿಸುತ್ತಿವೆ.
ಡಿಕೆ ಶಿವಕುಮಾರ್‌ಗೆ (DK Shivakumar) ಸಿಎಂ ಸ್ಥಾನ ಬಹುತೇಕ ಖಚಿತವಾಗಿದ್ದು, ಹೀಗಾಗಿ ರಾಮನಗರದಲ್ಲಿ ನೂತನ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುವ ಬ್ಯಾನರ್‌ಗಳನ್ನ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಡಿಕೆಶಿ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ – ನೂತನ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ಸ್ವೀಕಾರ
ನಗರದ ಐಜೂರು ವೃತ್ತದಲ್ಲಿ ಕಾಂಗ್ರೆಸ್ (Congress) ಕಾರ್ಯಕರ್ತರು 25 ಅಡಿಯ ಡಿಕೆಶಿ ಕಟೌಟ್ ನಿರ್ಮಿಸಿದ್ದಾರೆ. ಪಕ್ಷ ನಿಷ್ಠೆಗೆ ಸಂದ ಗೌರವ ಎಂದು ಟ್ಯಾಗ್ ಲೈನ್ ಹಾಕಿ ಬ್ಯಾನರ್ ಅಳವಡಿಕೆ ಮಾಡಿದ್ದು, ಹೈಕಮಾಂಡ್ ಹೆಸರು ಘೋಷಣೆಗೂ ಮುನ್ನವೇ ನೂತನ ಸಿಎಂ ಎಂದು ಶುಭಹಾರೈಸಿದ್ದಾರೆ.
ಇನ್ನೂ ಕನಕಪುರದಲ್ಲಿ (Kanakapura) ಅಧಿಕೃತ ಘೋಷಣೆಗೂ ಮುನ್ನವೇ ಯಾವುದೇ ಬ್ಯಾನರ್, ಬಂಟಿಗ್ಸ್ ಕಟ್ಟದಂತೆ ಡಿ.ಕೆ.ಬ್ರದರ್ಸ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಮಂಡ್ಯ ಜಿಲ್ಲೆ ಶಾಸಕರೊಂದಿಗೆ ಡಿಕೆಶಿ ಮಿಡ್‌ನೈಟ್ ಮೀಟಿಂಗ್ – ಕುತೂಹಲ ಕೆರಳಿಸಿದ 1 ಗಂಟೆ ಚರ್ಚೆ
