– ಡಿಕೆಶಿ ಸಂಪುಟದಲ್ಲಿ ಸಿದ್ದು ಆಪ್ತರು ಸೇಫ್ ಆಗ್ತಾರಾ?
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ರಾಜ್ಯಭಾರಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಮುಂಗಾರು ಆರಂಭಕ್ಕೂ ಮುನ್ನವೇ ಡಿಕೆ ಯುಗಾರಂಭವಾಗಲಿದೆ. ಸೋಮವಾರ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಪಟ್ಟಾಭಿಷೇಕ ನಡೆಯೋ ಸಾಧ್ಯತೆ ಇದೆ. ಹೀಗಾಗಿ ಭಾನುವಾರ (ಮೇ 31) ಸಂಜೆ ಕಾಂಗ್ರೆಸ್ (Congress) ಶಾಸಕಾಂಗ ಸಭೆ ನಡೆಯಲಿದ್ದು, ಸುರ್ಜೇವಾಲಾ, ಕೆ.ಸಿ ವೇಣುಗೋಪಾಲ್ ನೇತೃತ್ವದಲ್ಲಿ ಶಾಸಕಾಂಗ ನಾಯಕನ ಆಯ್ಕೆಯೂ ನಡೆಯಲಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಡಿಕೆ ಶಿವಕುಮಾರ್ ಅವರ ಮಿಡ್‌ನೈಟ್ ಮೀಟಿಂಗ್ ತೀವ್ರ ಕುತೂಹಲ ಕೆರಳಿಸಿದೆ. ಸಚಿವ ಸಂಪುಟಕ್ಕೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ಮಂಡ್ಯ ಜಿಲ್ಲೆಯ ಶಾಸಕರು, ಸಚಿವರೊಂದಿಗೆ ಡಿಕೆಶಿ ಮಿಡ್‌ನೈಟ್ ಮೀಟಿಂಗ್ ನಡೆಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಬಗ್ಗೆ ನನಗಿದ್ದ ಗೌರವ ಮತ್ತಷ್ಟು ಹೆಚ್ಚಾಯ್ತು: ಸಂಜಯ್ ರಾವತ್

ಹೈಕಮಾಂಡ್ ಭೇಟಿ ಬಳಿಕ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಸಚಿವ ಚೆಲುವರಾಯಸ್ವಾಮಿ, ಶಾಸಕ ಗಣಿಗ ರವಿಕುಮಾರ್, ಕಡಲೂರು ಉದಯ್ ಅವರೊಂದಿಗೆ ಸುಮಾರು 1 ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಆಪ್ತರಾದ ಬೇಳೂರು ಗೋಪಾಲಕೃಷ್ಣ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ, ಮಾಜಿ ಅಧ್ಯಕ್ಷ ನಲಪಾಡ್ ಅವರೊಂದಿಗೂ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗುಗತ್ತಿ: ಬಸವರಾಜ ಬೊಮ್ಮಾಯಿ
ಇನ್ನೂ ಹೊಸ ಸರ್ಕಾರ ರಚನೆಗೆ ಹೈಕಮಾಂಡ್ ಕೂಡ ರಿಸೆಟ್ ಬಟನ್ ಒತ್ತಿದೆ. ಅಂದ್ಹಾಗೆ ಡಿಕೆ ಟೀಂಗೆ ಯಾರೆಲ್ಲ ಸೇರ್ತಾರೆ? ಸಿದ್ದರಾಮಯ್ಯ ಸರ್ಕಾರದ ಸಚಿವರಾಗಿದ್ದವರಿಗೆ ಯಾರಿಗೆಲ್ಲಾ ಚಾನ್ಸ್ ಸಿಗುತ್ತೆ..? ಎಷ್ಟು ಜನ ಹೊಸಬರು ಮಂತ್ರಿಗಳಾಗ್ತಾರೆ? ಹೀಗೆ ಸಮುದಾಯ, ಜಿಲ್ಲಾವಾರು ಲೆಕ್ಕಾಚಾರಗಳು ಶುರುವಾಗಿವೆ. ಈ ಮಧ್ಯೆ ಸಿದ್ದು ಸಂಪುಟದಲ್ಲಿ ಸಚಿವರಾಗಿದ್ದ ಹಲವರಿಗೆ ಶಾಕ್ ಕಾದಿದೆ. ಹಳಬರಲ್ಲಿ ಎಷ್ಟು ಜನ ಸಚಿವರು ಡಿಕೆ ಸಂಪುಟ ಸೇರ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಯಾರೆಲ್ಲ ಡೇಂಜರ್ ಝೋನ್?
* ಹೆಚ್.ಸಿ ಮಹದೇವಪ್ಪ
* ಶಿವಾನಂದ ಪಾಟೀಲ್
* ಶರಣಬಸಪ್ಪ ದರ್ಶನಾಪುರ್
* ರಹೀಂ ಖಾನ್
* ಆರ್.ಬಿ ತಿಮ್ಮಾಪುರ್
* ಬೋಸರಾಜು
ಯಾರೆಲ್ಲ ಸೇಫ್ ಝೋನ್?
* ಡಾ. ಜಿ. ಪರಮೇಶ್ವರ್
* ಕೆಎಚ್ ಮುನಿಯಪ್ಪ
* ಸತೀಶ್ ಜಾರಕಿಹೋಳಿ
* ಹೆಚ್.ಕೆ. ಪಾಟೀಲ್
* ಜಮೀರ್ ಅಹ್ಮದ್
* ಶಿವರಾಜ್ ತಂಗಡಗಿ
* ಚೆಲುವರಾಯಸ್ವಾಮಿ
