ಉದ್ಯಮಿ, ರಾಜಕಾರಣಿ ನಲಪಾಡ್ (Nalapad) ಮದುವೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ (Kichcha Sudeep) ಹಾಗೂ ಪ್ರಿಯಾ ದಂಪತಿ ಭಾರೀ ಸಂಚಲನ ಮೂಡಿಸಿದ್ದಾರೆ. ನಲಪಾಡ್‌ಗೆ ಬಹಳ ಆಪ್ತವರ್ಗದಲ್ಲಿ ಸುದೀಪ್ ದಂಪತಿ ಕಾಣಿಸ್ಕೊಂಡಿದ್ದು ವಿಶೇಷವಾದ್ರೆ ನಲಪಾಡ್ ಆರತಕ್ಷತೆಯಲ್ಲಿ ಕಿಚ್ಚ ತಮ್ಮ ಫೇವರೀಟ್ ಹಾಡನ್ನ ಪತ್ನಿಗಾಗಿ ಹಾಡಿದ್ದು ಇನ್ನೊಂದು ವಿಶೇಷ.

ನಲಪಾಡ್ ಮದುವೆಯ ಆರತಕ್ಷತೆಯಲ್ಲಿ ಸುದೀಪ್‌ಗೆ ಹಾಡು ಹೇಳಲು ಒತ್ತಾಯ ಬಂತು. ಆ ವೇಳೆ ವೇದಿಕೆಯಲ್ಲೆ ಇದ್ದ ಪತ್ನಿಯನ್ನು ಉದ್ದೇಶಿಸಿ `ಕಾಂತಾ’ ಹಾಡನ್ನ ಹಾಡಿದ್ದಾರೆ. ಪ್ರಿಯಾ ಸುದೀಪ್ ಮೂಲ ಮಲಯಾಳಿಯಾಗಿದ್ದು ಸುದೀಪ್ ಆಗಾಗ ಪತ್ನಿಗಾಗಿ ಈ ಹಾಡನ್ನ ಹಾಡುತ್ತಾರಂತೆ. ಅದನ್ನೇ ನಲಪಾಡ್ ಮದುವೆ ಫಂಕ್ಷನ್‌ನಲ್ಲೂ ಹಾಡಿದ್ದಾರೆ ಕಿಚ್ಚ.
ಮಲಯಾಳಂನ ಫೇಮಸ್ ಹಾಡು ಕಾಂತಾ ನಾನುಂವರA ಹಾಡನ್ನ ಈ ಹಿಂದೆಯೂ ರಿಯಾಲಿಟಿ ಶೋ ವೇದಿಕೆಯಲ್ಲಿ ಸುದೀಪ್ ಹಾಡಿದ್ದರು. ಮಲಯಾಳಂನ ಫೋಕ್‌ಫ್ಯೂಷನ್‌ನ ಫೇಮಸ್ ಹಾಡು ಬಳಿಕ ಕನ್ನಡದಲ್ಲೂ ಬಲು ಫೇಮಸ್ ಆಯ್ತು. ಇದೀಗ ಮತ್ತೊಮ್ಮೆ ಅದೇ ಹಾಡನ್ನ ಕಿಚ್ಚ ಹಾಡಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
