– ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ ಅಧಿಕಾರಕ್ಕೆ ಎಂದ ಮಾಜಿ ಸಿಎಂ
ಬೆಂಗಳೂರು: ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ ಎಂದಿರುವುದು ಡಿ.ಕೆ.ಶಿವಕುಮಾರ್‌ಗೆ ತೂಗುಗತ್ತಿ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಹಾವೇರಿಯಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ನಾಲ್ಕು ದಶಕಗಳ ಕಾಲ ಸುದೀರ್ಘ ರಾಜಕಾರಣ ಮಾಡಿ ರಾಜಕೀಯ ಮಾಡಿದ್ದಾರೆ. 1983 ರಲ್ಲಿ ರಾಜಕೀಯಕ್ಕೆ ಬಂದಿದ್ದರು. ಅವರು ನಮ್ಮ ತಂದೆಯವರಿಗೆ ಆತ್ಮೀಯರಾಗಿದ್ದರು. ನಮ್ಮ ತಂದೆಯವರ ಕ್ಯಾಬಿನೆಟ್‌ನಲ್ಲಿ ಸ್ಟೇಟ್ ಮಿನಿಸ್ಟರ್ ಇದ್ದರು. ನಂತರ ಕ್ಯಾಬಿನೆಟ್ ಮಂತ್ರಿ ಮಾಡಿದರು. ಎಲ್ಲಕ್ಕಿಂತ ಹೆಚ್ಚು ಅವರು ಅಹಿಂದ ಮಾಡಿದಾಗ ನಾನೊಬ್ಬನೇ ಅಹಿಂದ ವರ್ಗ ಬಿಟ್ಟು ಮುಖ್ಯ ಭಾಷಣ ಮಾಡಿದ್ದೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ಸನ್ಮಾನ ಸಮಾರಂಭಕ್ಕೆ ಬಂದಾಗ ಅವರೇ ನೆನಪು ಮಾಡಿದ್ದರು. ಹಲವಾರು ಪ್ರಕರಣಗಳು ಇವೆ. 2007 ರಲ್ಲಿ ಜೆಡಿಎಸ್‌ನಿಂದ ಹೊರ ಬಂದು ಕಾಂಗ್ರೆಸ್ ನಿಂದ ಉಪ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆಗ ನಾನು ಅವರಿಗೆ ಸಹಾಯ ಮಾಡಿದ್ದೆ. ಯಾವಾಗ ಅವರಿಗೆ ಕಷ್ಟ ಕಾಲ ಬಂದಿದೆ ಆಗ ಸಹಾಯ ಮಾಡಿದ್ದೆ. ಯಾವಾಗ ಅವರು ಕಾಂಗ್ರೆಸ್‌ಗೆ ಹೋದರೋ ಆಗ ಅವರ ರಾಜಕೀಯ ಸಿದ್ಧಾಂತ ಬೇರೆ ಬೇರೆಯಾಗಿದೆ. ರಾಜಕೀಯವಾಗಿ ಯಾವತ್ತೂ ಹೊಂದಾಣಿಕೆ ಆಗಿಲ್ಲ. ವೈಯಕ್ತಿಕವಾಗಿ ಸಂಬಂಧ ಚೆನ್ನಾಗಿ ಇದೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಅವ್ರ ರಾಜೀನಾಮೆ ನಿರೀಕ್ಷಿತ.. ಶಾಕ್ ಏನಿಲ್ಲ: ಸುಮಲತಾ ಅಂಬರೀಶ್
ಒಬಿಸಿಗೆ ಆಘಾತ
ಸಿದ್ದರಾಮಯ್ಯ ಸಮಾಜವಾದಿಯಾಗಿ ಸಾಮಾಜಿಕ ಕಳಕಳಿ ಇರುವ ನಾಯಕ. ಅವರನ್ನು ತೆಗೆಯುವ ಮೂಲಕ ಹಿಂದುಳಿದ ವರ್ಗದ ನಾಯಕನಿಗೆ ಕೊಡಲಿ ಪೆಟ್ಟು ನೀಡಿದ್ದಾರೆ. ಕಾಂಗ್ರೆಸ್ ಯಾವಾಗಲೂ ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಮಂಡಲ್ ಕಮಿಷನ್‌ನಿಂದ ಹಿಡಿದು ಯಾವಾಗಲೂ ಅನ್ಯಾಯ ಮಾಡುತ್ತ ಬಂದಿದ್ದಾರೆ. ರಾಜೀವ್ ಗಾಂಧಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಯಾಕೆ ಬೇಕು ಎಂದು ಕೇಳಿದ್ದರು. ರಾಹುಲ್ ಗಾಂಧಿ ಜಾತಿಗಣತಿ ಮಾಡಬೇಕು ಎನ್ನುತ್ತಾರೆ. ಒಬಿಸಿ ಪರ ಮಾತನಾಡುತ್ತಲೇ ಒಬಿಸಿ ಮುಖ್ಯಮಂತ್ರಿಯನ್ನು ತೆಗೆದು ಹಾಕಿದ್ದಾರೆ. ಒಬಿಸಿ ಬಗ್ಗೆ ಇವರಿಗೆ ಏನು ಬದ್ಧತೆ ಇದೆ. ಹೀಗಾಗಿ ಕರ್ನಾಟಕದಲ್ಲಿ ಒಬಿಸಿ ಜನರು ಭ್ರಮನಿರಶನಗೊಂಡಿದ್ದಾರೆ. ಸಿದ್ದರಾಮಯ್ಯ ಸುಮ್ಮನಿರಬಹುದು. ಅವರ ಭಾವನೆ ಅರ್ಥ ಮಾಡಿಕೊಂಡಿರುವ ಜನ ಸುಮ್ಮನಿರಲ್ಲ. ಅದರ ಪರಿಣಾಮ ಆಗುತ್ತದೆ ಎಂದು ಹೇಳಿದರು.

ಈ ಬೆಳವಣಿಗೆಯಿಂದ ಬಿಜೆಪಿಗೆ ಪ್ಲಸ್ ಮೈನಸ್ ಅನ್ನುವುದಕ್ಕಿಂತ ಯಾರು ಅವರನ್ನು ನಂಬಿಕೊಂಡಿದ್ದರೋ ಅವರ ಮನಸ್ಸಿನ ಗೌರವಕ್ಕೆ ಧಕ್ಕೆ ತರುವ ಕೆಲಸ ಕಾಂಗ್ರೆಸ್ ಮಾಡಿದೆ. ಅದರ ರಾಜಕೀಯ ಪರಿಣಾಮ ಖಂಡಿತವಾಗಿ ಆಗುತ್ತದೆ. ಈಗ ಯಾರೂ ಕೂಡ ದಡ್ಡರಿಲ್ಲ. ದಲಿತ ಸಿಎಂ ಆಗುತ್ತಾರೆ ಎನ್ನುವ ಆಶಾ ಭಾವನೆ ಇತ್ತು. ಅದು ಕೂಡ ನಿರಾಶೆಯಾಗಿದೆ. ಅಲ್ಪಸಂಖ್ಯಾತರೂ ಗ್ರ್ಯಾಂಟೆಡ್ ತೆಗೆದುಕೊಳ್ಳಬೇಡಿ ಅಂತ ಹೇಳಿದ್ದಾರೆ. ನಾವು ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಸೋಷಿಯಲ್ ಇಂಜಿನಿಯರಿಂಗ್‌ಗೆ ಒತ್ತು ಕೊಟ್ಟರೆ ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಪಕ್ಷ ಗಮನ ಹರಿಸುತ್ತದೆ ಎಂದರು.
ಭ್ರಮನಿರಸನ
ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರೈಸುತ್ತಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಸ್ಪಷ್ಟ ಬಹುಮತ ಇದೆ. ಆದರೆ, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರಿಗೆ ಎಷ್ಟು ಜನರಿಗೆ ಸಚಿವ ಸ್ಥಾನ ಸಿಗುತ್ತದೆ ಅವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಭವಿಷ್ಯ ನಿಂತಿದೆ. ನಾಳೆಯೇ ಚುನಾವಣೆ ನಡೆದರೂ ಎದುರಿಸಲು ಬಿಜೆಪಿ ಸಿದ್ಧವಿದೆ. ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ ಎನ್ನುವುದು ತೂಗುವ ಕತ್ತಿ. ತೂಗುವ ಕತ್ತಿ ಬೀಳುವುದೇ ಹೆಚ್ಚು. ಈ ಮೂರು ವರ್ಷದ ಕಾಂಗ್ರೆಸ್ ಆಡಳಿತದ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ. ಎಸ್ಸಿ-ಎಸ್ಟಿ, ಒಬಿಸಿ ಜನರು ಬೇಸರಗೊಂಡಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ಈ ಸರ್ಕಾರದ ವಿರುದ್ಧ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ ಸ್ವಂತ ಶಕ್ತಿಯಲ್ಲಿ ಬಹುಮತಕ್ಕೆ ಬರುತ್ತದೆ. ಈಗಿನ ಬೆಳವಣಿಗೆ ಅದಕ್ಕೆ ಪೂರಕವಾಗಿದೆ. ಕುಣಿಯಲು ಬಾರದವಳು ನೆಲ ಡೊಂಕು ಅಂದಂತೆ ಕೇಂದ್ರದ ಮೇಲೆ ಆರೋಪ ಮಾಡುತ್ತಾರೆ. ನಾನು ಸಿಎಂ ಆಗಿದ್ದಾಗ ಪೂರಕ ಬಜೆಟ್ ಮಂಡನೆ ಮಾಡಿದ್ದೆ. 14 ನೇ ಹಣಕಾಸು ಯುಪಿಎ ಸರ್ಕಾರದ ಅವಧಿಯಲ್ಲಿ ಬಂದಿತ್ತು. ಅದಕ್ಕಿಂತ ಹೆಚ್ಚು 1 ಲಕ್ಷ ಕೋಟಿ 15 ನೇ ಹಣಕಾಸು ಆಯೋಗದಿಂದ ಕರ್ನಾಟಕ್ಕೆ ಬಂದಿದೆ. ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಮಾಡಲು ಸಿಎಂ ಸಿದ್ದರಾಮಯ್ಯ ಪ್ರಯತ್ನ ಮಾಡಿದ್ದಾರೆ. ಶಿವಕುಮಾರ್ ಮುಂದೆ ಎಲ್ಲವನ್ನು ಸುಸ್ಥಿತಿಯಲ್ಲಿ ಇಟ್ಟಿದ್ದೇನೆ ಎಂದು ಹೇಳಿದ್ದಾರೆ. ಕಳೆದ ಮೂರು ವರ್ಷದಲ್ಲಿ ಸುಮಾರು 4 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಾಲ ತೆಗೆದುಕೊಂಡು ಆಸ್ತಿ ಮಾಡಿಲ್ಲ. ಗ್ಯಾರಂಟಿಗಳಿಗೆ ನೀಡಿದ್ದಾರೆ. ಇದರಿಂದ ರಾಜ್ಯಕ್ಕೆ ಆಸ್ತಿ ನಿರ್ಮಾಣ ಆಗಿಲ್ಲ. ಅದರಿಂದ ರಾಕ್ಕೆ ಆದಾಯ ಬರುವುದಿಲ್ಲ ಎಂದರು. ಇದನ್ನೂ ಓದಿ: ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಪದಗ್ರಹಣ – 8 ಸಚಿವರ ಜೊತೆ ಪ್ರಮಾಣವಚನ?
ಸ್ನೇಹಕ್ಕೆ ರಾಜಕಾರಣಕ್ಕೆ ಸಂಬಂಧ ಇಲ್ಲ. ಕಾಂಗ್ರೆಸ್ ಸೋತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ತಳವರ್ಗದ ವೋಟ್‌ಬ್ಯಾಂಕ್ ಕ್ರಿಯೆಟ್ ಮಾಡಿದ್ದರು. ಅವರನ್ನು ನಡೆಸಿಕೊಂಡ ರೀತಿ ಸರಿಯಲ್ಲ. ಈ ಸಂದರ್ಭದಲ್ಲಿ ರಾಹುಲ್ ಒಬಿಸಿ ಬಗ್ಗೆ ಮಾತನಾಡಿ ಒಬಿಸಿ ನಾಯಕನನ್ನು ಇಳಿಸುವುದು ಎಷ್ಟು ಸರಿ, ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕ ಯಾವಾಗಲೂ ಎಟಿಎಂ. ಯಾರು ಮಾಸ್ ನಾಯಕರಾಗುತ್ತಾರೆ ಅವರನ್ನು ಅದೇ ರೀತಿ ಬಳಸಿಕೊಂಡಿದ್ದಾರೆ. ದೇವರಾಜ ಅರಸು ಆರು ವರ್ಷ ಮುಖ್ಯಮಂತ್ರಿಯಾಗಿದ್ದರು. 78ರಲ್ಲಿ ಗೆದ್ದು ಅಧಿಕಾರಕ್ಕೆ ಬಂದರೂ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ವೀರೇಂದ್ರ ಪಾಟೀಲರು, ಬಂಗಾರಪ್ಪ ಅವರನ್ನು ತೆಗೆದರು. ಸಿದ್ದರಾಮಯ್ಯ ಅದೇ ಸಾಲಿಗೆ ಬರುತ್ತಾರೆ.
ಈ ರಾಜ್ಯದಲ್ಲಿ ಏಳು ವರ್ಷ ಅಧಿಕಾರ ಮುಗಿಸಿದ ಸಿಎಂಗಳಿಗೆ ಆಘಾತ ಬರುತ್ತದೆ. ನಿಜಲಿಂಗಪ್ಪನವರು ಎರಡನೇ ಅವಧಿಗೆ ಸಿಎಂ ಆಗಿದ್ದಾಗ ಏಳು ವರ್ಷಕ್ಕೆ ಅಧಿಕಾರ ಕಳೆದುಕೊಂಡರು. ಅದೇ ರೀತಿ ದೇವರಾಜ ಅರಸು, ರಾಮಕೃಷ್ಣ ಹೆಗಡೆ ಈಗ ಸಿದ್ದರಾಮಯ್ಯ ಇದು ಒಂದು ರೀತಿ ಸೆವೆನ್ ಇಯರ್ ಸಿಂಡ್ರೋಮ್ ಎಂದು ವ್ಯಾಖ್ಯಾನಿಸಿದರು.
