ಮಂಡ್ಯ: ಸಿದ್ದರಾಮಯ್ಯನವರ (Siddaramaiah) ರಾಜೀನಾಮೆ ನಿರೀಕ್ಷಿತ ಬೆಳವಣಿಗೆ. ಎರಡು ವರ್ಷಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಲ್ಲಿ ಶಾಕ್ ಆಗುವಂತಹದ್ದೇನಿಲ್ಲ. ಯಾರೇ ಮುಖ್ಯಮಂತ್ರಿಯಾದರೂ ಒಳ್ಳೆಯ ಆಡಳಿತ ಕೊಡಬೇಕಷ್ಟೆ. ಜನರು ಕೂಡ ಅದನ್ನೇ ನಿರೀಕ್ಷೆ ಮಾಡುವುದು ಎಂದು ಸುಮಲತಾ ಅಂಬರೀಶ್ (Sumalatha Ambareesh) ಹೇಳಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಮಾತನಾಡಿ, ದಲಿತ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಕಾಂಗ್ರೆಸ್‌ನವರು ನಮ್ಮದು ಅಲ್ಪಸಂಖ್ಯಾತರ ಪಕ್ಷ ಅಂತ ಹೇಳಿಕೊಳ್ಳುತ್ತಾರೆ. ಅದನ್ನು ಉಳಿಸಿಕೊಳ್ಳುವುದು ಅಥವಾ ಬಿಡುವುದು ಅವರಿಗೆ ಬಿಟ್ಟ ವಿಚಾರ. ಅವಧಿ ಪೂರ್ಣ ಆಗುತ್ತದೋ ಇಲ್ಲವೋ ಗೊತ್ತಿಲ್ಲ. ನಾಯಕತ್ವ ಬದಲಾವಣೆ ಹೊಸತೇನು ಅಲ್ಲ ಹಾಗೂ ಬದಲಾವಣೆ ಮಾಡುವುದು ತಪ್ಪಲ್ಲ. ಜನರು ಅದನ್ನು ಒಪ್ಪಿಕೊಳ್ಳುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ತಟ್ಟೆಯಲ್ಲಿ ರಾಜಲಕ್ಷ್ಮಿ ತಂದು ಅಜ್ಜನಿಗೆ ನೀಡಿದ್ದಾಳೆ: ಮೊಮ್ಮಗಳು ಜನಿಸಿದ ಬೆನ್ನಲ್ಲೇ ಡಿಕೆಶಿಗೆ ಭಾಗ್ಯ ಎಂದ ದ್ವಾರಕನಾಥ್ ಗುರೂಜಿ
ಪುತ್ರ ಅಭಿಷೇಕ್ ಅಂಬರೀಶ್ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿ, ಅಭಿಷೇಕ್ ರಾಜಕೀಯದ ಬಗ್ಗೆ ನಾನು ನಿರ್ಧಾರ ಮಾಡುವುದಿಲ್ಲ. ರಾಜಕೀಯ ಅಥವಾ ಸಿನಿಮಾ ರಂಗ ಯಾವುದರಲ್ಲಿ ಮುಂದುವರಿಯಬೇಕು ಎನ್ನುವುದು ಅವರಿಷ್ಟ. ನಾನು ಬಿಜೆಪಿ ಪಕ್ಷದಲ್ಲಿದ್ದೇನೆ. ಪಕ್ಷ ಯಾವ ರೀತಿ ಸೂಚನೆ ನೀಡುತ್ತದೋ ಆ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
